ಬೆಂಗಳೂರು: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ಪೊಲೀಸ್ ಪದಕಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು, ಪೊಲೀಸ್ ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಒಬ್ಬ ಪೊಲೀಸ್ ಅಧಿಕಾರಿ, ರಾಷ್ಟ್ರಪತಿಗಳ ಪೊಲೀಸ್ ವಿಶಿಷ್ಟ ಸೇವಾ ಪದಕ ಮತ್ತು 19 ಪೊಲೀಸರು, ರಾಷ್ಟ್ರಪತಿಗಳ ಪೊಲೀಸ್ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಪದಕ ಪಡೆದಿರುವವರ ಮಾಹಿತಿ ಇಲ್ಲಿದೆ.
ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ ಪುರಸ್ಕೃತರು
- ಕೆ.ವಿ.ಶರತ್ ಚಂದ್ರ (ಐಪಿಎಸ್), ಎಡಿಜಿಪಿ, ಸಿಐಡಿ, ಬೆಂಗಳೂರು
ರಾಷ್ಟ್ರಪತಿಯವರ ವಿಶಿಷ್ಟ ಶ್ಲಾಘನೀಯ ಸೇವಾ ಪದಕ ಪುರಸ್ಕೃತರು
- ಲಾಭುರಾಮ್ (ಐಪಿಎಸ್), ಹೆಚ್ಚುವರಿ ನಿರ್ದೇಶಕರು, ರಾಜ್ಯ ಗುಪ್ತ ವಾರ್ತೆ, ಬೆಂಗಳೂರು
- ಎಸ್. ನಾಗರಾಜು, ಡಿವೈಎಸ್‌ಪಿ, ಪಿಆರ್‌ಸಿ, ಪ್ರಧಾನ ಕಚೇರಿ, ಬೆಂಗಳೂರು
- ಪಿ. ವೀರೆಂದ್ರ ಕುಮಾರ್, ಡಿವೈಎಸ್‌ಪಿ, ಕೆಎಲ್‌ಎ, ಬೆಂಗಳೂರು
- ಬಿ. ಪ್ರಮೋದ್ ಕುಮಾರ್, ಡಿವೈಎಸ್‌ಪಿ, ಕೆಎಲ್‌ಎ, ಬೆಂಗಳೂರು
- ಸಿದ್ದಲಿಂಗಪ್ಪ ಗೌಡ ಆರ್ ಪಾಟೀಲ್, ಡಿವೈಎಸ್‌ಪಿ, ಕರ್ನಾಟಕ ಲೋಕಾಯುಕ್ತ, ಕಲಬುರಗಿ
- ಸಿ.ವಿ. ದೀಪಕ್, ಡಿವೈಎಸ್‌ಪಿ, ಎಸ್‌ಟಿಎಫ್ ಎನ್‌ಕ್ರೋಚ್‌ಮೆಂಟ್, ಬೆಂಗಳೂರು
- ವಿಜಯ್. ಎಚ್, ಡಿವೈಎಸ್‌ಪಿ, ನಗರ ವಿಶೇಷ ವಿಭಾಗ, ಬೆಂಗಳೂರು ನಗರ
- ಬಿ.ಎಸ್. ಮಂಜುನಾಥ್, ಪೊಲೀಸ್ ಇನ್ಸ್‌ಪೆಕ್ಟರ್, ಮಾದನಾಯಕನಹಳ್ಳಿ
- ರಾವ್ ಗಣೇಶ್ ಜನಾರ್ಧನ್, ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್, ಅಶೋಕನಗರ
- ಆರ್.ಪಿ. ಅನೀಲ್, ಪೊಲೀಸ್ ವೃತ್ತ ನಿರೀಕ್ಷಕರು, ದಾವಣಗೆರೆ
- ಮನೋಜ್ ಎನ್ ಹೋವಳ, ಪೊಲೀಸ್ ಇನ್ಸ್‌ಪೆಕ್ಟರ್, ಸಂಚಾರ ಮತ್ತು ಯೋಜನೆ, ಬೆಂಗಳೂರು ನಗರ
- ಬಿ.ಟಿ. ವರದರಾಜ, ಸ್ಪೆ. ಆರ್‌ಪಿಐ, 3ನೇ ಪಡೆ ಕೆಎಸ್‌ಆರ್‌ಪಿ, ಬೆಂಗಳೂರು
- ಟಿ.ಎ. ನಾರಾಯಣ ರಾವ್, ಸ್ಪೆ. ಎಆರ್‌ಎಸ್‌ಐ, 4ನೇ ಪಡೆ ಕೆಎಸ್‌ಆರ್‌ಪಿ, ಬೆಂಗಳೂರು
- ಎಸ್.ಎಸ್, ವೆಂಕಟರಮಣ ಗೌಡ, ಸ್ಪೆ. ಎಆರ್‌ಎಸ್‌ಐ, 4ನೇ ಪಡೆ ಕೆಎಸ್‌ಆರ್‌ಪಿ, ಬೆಂಗಳೂರು
- ಎಸ್.ಎಂ. ಪಾಟೀಲ್, ಸ್ಪೆ. ಎಆರ್‌ಎಸ್‌ಐ, 9ನೇ ಪಡೆ ಕೆಎಸ್‌ಆರ್‌ಪಿ, ಬೆಂಗಳೂರು
- ಕೆ. ಪ್ರಸನ್ನಕುಮಾರ್, ಎಚ್‌ಸಿ, ಸಿಐಡಿ, ಬೆಂಗಳೂರು
- ಪ್ರಭಾಕರ ಎಚ್, ಸಿಎಚ್‌ಸಿ, ತುಮಕೂರು ಸಂಚಾರ ಪಶ್ಚಿಮ ಠಾಣೆ
- ಡಿ. ಸುಧಾ, ಮಹಿಳಾ ಎಚ್‌ಸಿ, ಎಸ್‌ಸಿಆರ್‌ಬಿ, ಬೆಂಗಳೂರು
- ಟಿ.ಆರ್. ರವಿಕುಮಾರ್, ಸಿಎಚ್‌ಸಿ, ಸಿಟಿ ಕಂಟ್ರೋಲ್ ರೂಂ, ಬೆಂಗಳೂರು