ಬೆಂಗಳೂರು: ನಾಳೆಯಿಂದ (ಆ.1) ಟೀ, ಕಾಫಿ ಕುಡಿಯೋ ಮುನ್ನ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ತರಕಾರಿ ದರವೂ ಏರಿಕೆ (Price Hike) ಆಗುತ್ತಲೆ ಇದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯು ರಾಜ್ಯದ ಜನರಿಗೆ ಬಿಸಿ ತುಪ್ಪವಾಗಿದೆ. ನಾಳೆಯಿಂದ ಮತ್ತಷ್ಟು ದುಬಾರಿ ದುನಿಯಾ ಆಗಲಿದೆ.
ಈಗಾಗಲೇ ಟೊಮ್ಯಾಟೋ, ಕ್ಯಾರೆಟ್ ಬೆಲೆ ಶತಕದ ಗಡಿ ದಾಟಿದೆ. ಟೊಮ್ಯಾಟೊ ಕೆ.ಜಿಗೆ 130 ರೂ., ಕ್ಯಾರೆಟ್ ಕೆ.ಜಿ 120 ರೂ. ಆಗಿದೆ. ಇತ್ತ ಲೀಟರ್ ನಂದಿನಿ ಹಾಲಿನ ಬೆಲೆ 3 ರೂಪಾಯಿ ಹೆಚ್ಚಳಗೊಂಡಿದ್ದು, ಆಗಸ್ಟ್ 1 ರಿಂದ ಪರಿಷ್ಕೃತ ದರ ಜಾರಿಯಾಗಲಿದೆ. ಇದರ ಪರಿಣಾಮ ಹೋಟೆಲ್ ತಿಂಡಿ ಬೆಲೆಯು ಶೇಕಡಾ 10 ರಿಂದ 20ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ.
ಯಾವೆಲ್ಲಾ ತರಕಾರಿ ಬೆಲೆ ಏರಿಕೆ?
ತರಕಾರಿ- ಹಿಂದಿನ ದರ – ಈಗೀನ ದರ
ಟೊಮ್ಯಾಟೊ: ಹಿಂದಿನ ದರ ₹110 – ಇಂದಿನ ದರ ₹120
ಮೆಣಸಿನಕಾಯಿ: ಹಿಂದಿನ ದರ ₹60 – ಇಂದಿನ ದರ ₹120
ಶುಂಠಿ: ಹಿಂದಿನ ದರ ₹160 – ಇಂದಿನ ದರ ₹300
ಬೆಳ್ಳುಳ್ಳಿ: ಹಿಂದಿನ ದರ ₹100 – ಇಂದಿನ ದರ ₹200
ಹುರುಳಿಕಾಯಿ: ಹಿಂದಿನ ದರ ₹80 – ಇಂದಿನ ದರ ₹100
ಕ್ಯಾರೆಟ್: ಇಂದಿನ ₹60
ಬೀಟ್ ರೋಟ್: ಇಂದಿನ ದರ ₹30
ಮೂಲಂಗಿ: ಇಂದಿನ ದರ ₹20
ಗುಂಡು ಬದನೆಕಾಯಿ: ಇಂದಿನ ದರ ₹60
ಕ್ಯಾಪ್ಸಿಕಾಮ್: ಇಂದಿನ ದರ ₹60
ಹೀರೇಕಾಯಿ: ಇಂದಿನ ದರ ₹80
ಬೆಂಡೆಕಾಯಿ: ಇಂದಿನ ದರ ₹60
ದುಬಾರಿ ದುನಿಯಾ
ಜು.21ರಂದು ನಡೆದ ಸಭೆಯಲ್ಲಿ ನಂದಿನಿ ಹಾಲಿನ ದರ ಹೆಚ್ಚಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಆ.1ರಿಂದ ಅಧಿಕೃತವಾಗಿ ಜಾರಿಗೆ ತರುವಂತೆ ಸೂಚಿಸಲಾಗಿದೆ. ಹಾಲಿನ ದರ ಏರಿಕೆ ಆಗುತ್ತಿದ್ದಂತೆ ಜತೆಗೆ ಹೋಟೆಲ್ ತಿಂಡಿ ದರದಲ್ಲೂ ಶೇಕಡಾ 10ರಿಂದ 20ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಯಾವ್ಯಾವ ಹಾಲಿನ ದರ ಎಷ್ಟಿದೆ?
ಸಮೃದ್ದಿ ಹಾಲು: ಹಿಂದಿನ ದರ ₹48 – ಇಂದಿನ ದರ ₹51
ಸ್ಪೆಷಲ್ ಹಾಲು: ಹಿಂದಿನ ದರ ₹43 – ಇಂದಿನ ದರ ₹46
ಸಂತೃಪ್ತಿ ಹಾಲು: ಹಿಂದಿನ ದರ ₹50 – ಇಂದಿನ ದರ ₹53
ಶುಭಂ ಹಾಲು: ಹಿಂದಿನ ದರ ₹43 – ಇಂದಿನ ದರ ₹46
ಟೋನ್ಡ್ ಹಾಲು: ಹಿಂದಿನ ದರ ₹37 – ಇಂದಿನ ದರ ₹40
ಡಬಲ್ ಟೋನ್ಡ್ ಹಾಲು: ಹಿಂದಿನ ದರ ₹36 – ಇಂದಿನ ದರ ₹39
ಹೊಮೋಜಿನೈಸ್ಡ್: ಹಿಂದಿನ ದರ ₹38 – ಇಂದಿನ ದರ ₹41
ಇದನ್ನೂ ಓದಿ: Weather Report : ಬೆಂಗಳೂರಲ್ಲಿ ಸ್ಟಾಪ್; ಕರಾವಳಿಯಲ್ಲಿ ನಾನ್ ಸ್ಟಾಪ್ ಮಳೆ
ಹೋಟೆಲ್ ಗ್ರಾಹಕರಿಗೆ ಶಾಕ್
ಹಾಲಿನಿಂದ ಹಿಡಿದು ತರಕಾರಿ ದರವು ಏರಿಕೆ ಆಗುತ್ತಿರುವುದರಿಂದ ಹೋಟೆಲ್ ಉದ್ಯಮದವರು ಅನಿರ್ವಾಯ ಕಾರಣದಿಂದಾಗಿ ತಿಂಡಿ ತಿನಿಸುಗಳ ಬೆಲೆ ಏರಿಕೆ ಮಾಡುವಂತಾಗಿದೆ. ನಗರದಲ್ಲಿ ಈಗಾಗಲೇ ಹಲವು ಹೋಟೆಲ್ ಮಾಲೀಕರು ದರ ಏರಿಕೆ ಮಾಡಿದ್ದಾರೆ. ಕಾಫಿ-ಟೀಗೆ 3 ರೂಪಾಯಿ ಹೆಚ್ಚಳ, ತಿಂಡಿ-ತಿನಿಸು 5-10 ರೂ. ಏರಿಕೆ, ಊಟದ ದರ 10 ರೂ. ಏರಿಕೆ ಆಗುವ ಸಾಧ್ಯತೆ ಇದೆ.
ಟೊಮ್ಯಾಟೊ ದರ ಏರಿಕೆ ಟ್ರಬಲ್
ಟೊಮ್ಯಾಟೊ ದರವು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ಜನ ಸಾಮಾನ್ಯರಿಗೆ ಟ್ರಬಲ್ ಶುರುವಾಗಿದೆ. ಮತ್ತೆ ಗಗನ ಕುಸುಮವಾದ ಟೊಮ್ಯಾಟೊ ಕೆ.ಜಿಗೆ 150 ರೂಪಾಯಿ ದಾಟಿದೆ. ಪೂರೈಕೆ ಕಡಿಮೆ ಆಗಿರುವ ಹಿನ್ನೆಲೆ ಮತ್ತೆ ಟೊಮ್ಯಾಟೊ ದರ ಏರಿಕೆಯ ಬಿಸಿ ತಟ್ಟಿದೆ. ವಾರದ ಹಿಂದೆ 70/80 ರೂ. ಇದ್ದ ಟೊಮ್ಯಾಟೊ ದರ ಏಕಾಏಕಿ ಏರಿಕೆ ಆಗಿದೆ.
ನಾಸಿಕ್‌ನಿಂದ ಬೆಂಗಳೂರಿಗೆ ಟೊಮ್ಯಾಟೊ ಪೂರೈಕೆ ಆಗಿತ್ತು. ಆದರೆ ರಾಜ್ಯದಲ್ಲಿ ಇಳುವರಿ ಕಡಿಮೆಯಾದ ಕಾರಣ ಪೂರೈಕೆ ಆಗುತ್ತಿರಲಿಲ್ಲ. ಪ್ರತಿ ಎಕರೆಗೆ ಕೇವಲ 30 ರಿಂದ 35 ಟನ್ ಮಾತ್ರ ಇಳುವರಿ ಬರುತ್ತಿದೆ. ಹೀಗಾಗಿ ಬರೊಬ್ಬರಿ 150 ರೂಪಾಯಿ ಟೊಮ್ಯಾಟೊ ದರ ಏರಿಕೆ ಆಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ