ಕೋಲಾರ: ಟೊಮ್ಯಾಟೊ ದರ ಗಗನಕ್ಕೇರಿದ್ದು, 1 ಕೆ.ಜಿ ಟೊಮ್ಯಾಟೊ 100 ರೂ. ಸಮೀಪಿಸಿದೆ. ಅದೇ ರೀತಿ 15 ಕೆ.ಜಿ ಬಾಕ್ಸ್ 1000 ರೂಪಾಯಿ ಗಡಿ ದಾಡಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಕೇರಳ, ತಮಿಳುನಾಡು, ಒಡಿಶಾ, ಕೊಲ್ಕೊತಾ, ಛತ್ತಿಸ್‌ಗಡ ಹಾಗೂ ಬಾಂಗ್ಲಾದೇಶದಿಂದ ಟೊಮ್ಯಾಟೊಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಈ ಭಾಗಗಳಿಗೆ ಹೆಚ್ಚಿನ ರಫ್ತು ಮಾಡುತ್ತಿರುವುದರಿಂದ ಟೊಮ್ಯಾಟೊ ಬೆಲೆಯಲ್ಲಿ ಭಾರಿ ಏರಿಕೆ (Tomato Price Hike) ಕಂಡುಬಂದಿದೆ.
ಜಿಲ್ಲೆಯಲ್ಲಿ 5 ಸಾವಿರ ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆಯಲಾಗಿದೆ. ಆದರೆ, ರೋಗ ಹರಡಿದ ಕಾರಣ ಕೆಲವೆಡೆ ತೋಟಗಳನ್ನು ನಾಶ ಮಾಡಲಾಗಿದೆ. ಇದರಿಂದ ಬೇಡಿಕೆ ನೀಗಿಸುವಷ್ಟು ಟೊಮ್ಯಾಟೊ ಸಿಗುತ್ತಿಲ್ಲ. ಹೀಗಾಗಿ 15 ಕೆ.ಜಿ ಬಾಕ್ಸ್ 1,100 ರೂ. ಮಾರಾಟವಾಗುತ್ತಿದೆ.
ಇದನ್ನೂ ಓದಿ | Free Bus Service: ಹೆಚ್ಚಿದ ನಾರಿ ಶಕ್ತಿ! 166 ಕೋಟಿ ರೂಪಾಯಿ ಮೀರಿ ಮುನ್ನುಗ್ಗುತ್ತಿರುವ ಶಕ್ತಿ ಸ್ಕೀಂ!
ಹೊರ ರಾಜ್ಯಗಳಿಂದ ಭಾರಿ ಬೇಡಿಕೆ ಉಂಟಾಗಿರುವುದರಿಂದ ಎರಡು ಮೂರು ದಿನಗಳಿಂದ ಟೊಮ್ಯಾಟೊ ಧಾರಣೆ ಏರಿಕೆ ಕಡೆ ಮುಖ ಮಾಡಿದೆ. ಪ್ರತಿ ದಿನ 15 ಸಾವಿರ ಟನ್ ಟೊಮ್ಯಾಟೊ ಹೊರ ರಾಜ್ಯಕ್ಕೆ ರಫ್ತಾಗುತ್ತಿದೆ. ಆದರೆ, ಬೇಡಿಕೆಗೆ ತಕ್ಕಷ್ಟು ಟೊಮ್ಯಾಟೊ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಇದೇ ರೀತಿ ಮುಂದುವರಿದರೆ ಇನ್ನು ಒಂದು ವಾರದಲ್ಲಿ ಬಾಕ್ಸ್ ದರ 2 ಸಾವಿರ ಗಡಿ ಮುಟ್ಟಬಹುದು.