ಬೆಂಗಳೂರು: ಪ್ರಸಾದ ತಯಾರಿಸುವ ವೇಳೆ ಅಗ್ನಿ ಅವಘಡ ಸಂಭವಿಸಿ ಅರ್ಚಕರೊಬ್ಬರು ಮೃತಪಟ್ಟಿದ್ದಾರೆ. ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನದ ಅರ್ಚಕರಾಗಿದ್ದ ನಾಗಯ್ಯ ಸಿ. (61) ಮೃತರು.
ನವೆಂಬರ್ 18 ರಂದು ಎಂದಿನಂತೆ ಬೆಳಗ್ಗೆ ದೇವಸ್ಥಾನಕ್ಕೆ ಹೋಗಿದ್ದ ನಾಗಯ್ಯ ಅವರು, ದೇವಸ್ಥಾನದ ಹಿಂಭಾಗದ ಕೋಣೆಯಲ್ಲಿ ಪ್ರಸಾದ ಮಾಡಲು ಹೋಗಿದ್ದರು. ಈ ವೇಳೆ ಗ್ಯಾಸ್ ಆನ್ ಮಾಡಿ ಲೈಟರ್ ಹುಡುಕಲು ಮುಂದಾಗಿದ್ದಾರೆ ಎನ್ನಲಾಗಿದೆ. ಕಟ್ಟಡದ ಮೇಲ್ಭಾಗದ ರೂಂನಲ್ಲಿದ್ದ ಬೆಂಕಿಪೊಟ್ಟಣ ತೆಗೆದುಕೊಂಡು ಬರಲು ಹೋಗಿದ್ದಾರೆ. ಗ್ಯಾಸ್ ಸ್ಟೌ ಆನ್ ಮಾಡಿರುವುದನ್ನು ಮರೆತು ಹೋಗಿದ್ದು, ಅಷ್ಟರಲ್ಲಿ ಗ್ಯಾಸ್ ಲೀಕ್ ಆಗಿದೆ.
ಈ ಬಗ್ಗೆ ಗಮನಕೊಡದ ಅರ್ಚಕ ನಾಗಯ್ಯ ಏಕಾಏಕಿ ಕಡ್ಡಿ ಗೀರಿದ್ದಾರೆ. ಹೀಗಾಗಿ ಬೆಂಕಿ ಹೊತ್ತಿಕೊಂಡು ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಅರ್ಚಕರನ್ನು ಕೂಡಲೇ ಸೇಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನ.23ರಂದು ಮೃತಪಟ್ಟಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Fire Accident | ರಿಚ್ಮಂಡ್ ಟೌನ್ ಫ್ಯಾಮಿಲಿ ಸೂಪರ್ ಮಾರ್ಟ್‌ನಲ್ಲಿ ಅಗ್ನಿ ಅವಘಡ : ಪೀಠೋಪಕರಣ ಭಸ್ಮ