Site icon Vistara News

Pocso Case : ನಿರಂತರ ಲೈಂಗಿಕ ಕಿರುಕುಳದಿಂದ ನೊಂದು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ; ಕಾಮುಕ ಪ್ರಿನ್ಸಿಪಾಲ್‌ ಅರೆಸ್ಟ್‌

principal arrested

#image_title

ರಾಯಚೂರು: ಹಾಸ್ಟೆಲ್‌ನಲ್ಲಿದ್ದ ೧೭ ವರ್ಷದ ವಿದ್ಯಾರ್ಥಿನಿಗೆ ನಿರಂತರವಾಗಿ ಲೈಂಗಿಕ ಕಿರುಕುಳ (Pocso Case) ನೀಡುತ್ತಾ ಅಂತಿಮವಾಗಿ ಆಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗುವುದಕ್ಕೆ ಕಾರಣವಾದ ಕಾಲೇಜಿನ ಪ್ರಿನ್ಸಿಪಾಲ್‌ನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿದ್ದ ೧೭ ವರ್ಷದ ಬಾಲಕಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೇ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರ ಕೇರ್‌ ಟೇಕರ್‌ ಕೂಡಾ ಆಗಿ ಕೆಲಸ ಮಾಡುತ್ತಿದ್ದ ಉಪನ್ಯಾಸಕ ಮತ್ತು ಪ್ರಿನ್ಸಿಪಾಲ್‌ ಆಗಿರುವ ರಮೇಶ್‌ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿತ್ತು. ಮಾತ್ರವಲ್ಲ, ಅತ್ಯಾಚಾರ ಮಾಡಿ ಆತನೇ ಕೊಲೆ ಮಾಡಿದ್ದಾನೆ ಎಂದೂ ಮನೆಯವರು ದೂರಿದ್ದರು. ಆತನ ಬಂಧನಕ್ಕಾಗಿ ಒತ್ತಾಯಿಸಿ ಲಿಂಗಸೂಗೂರಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯೇ ನಡೆದಿತ್ತು. ಇದೀಗ ಪೊಲೀಸರು ಆತನನ್ನು ಬಂಧಿಸುವ ಮೂಲಕ ಸಾವಿಗೆ ಒಂದು ಹಂತದ ನ್ಯಾಯವನ್ನು ನೀಡಿದ್ದಾರೆ.

ಖಾಸಗಿ ಕಾಲೇಜಿಗೆ ಸೇರಿದ ಹಾಸ್ಟಲ್‌ ಇದಾಗಿದ್ದು, ಅಲ್ಲಿದ್ದ ಬಾಲಕಿಯನ್ನು ಈ ಉಪನ್ಯಾಸಕ ಪುಸಲಾಯಿಸಿ, ಆಮಿಷ ಒಡ್ಡಿ ಬಹುಕಾಲದಿಂದ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದ ಬಾಲಕಿಯನ್ನು ಆತ ಆಗಾದ ತನ್ನ ಕೋಣೆಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಘಟನೆ ನಡೆದ ದಿನದಿಂದ ರಮೇಶ್‌ ನಾಪತ್ತೆಯಾಗಿದ್ದು, ಆತನನ್ನು ಬಂಧಿಸುವಂತೆ ಪೋಷಕರು ಆಗ್ರಹಿಸಿದ್ದರು. ಕೊನೆಗೂ ಆರೋಪಿ ರಮೇಶ್‌ನನ್ನು ಬಿಜಾಪುರದಲ್ಲಿ ಪತ್ತೆ ಹಚ್ಚಿ ಕರೆತಂದಿರುವ ಪೊಲೀಸರು ಠಾಣೆಯಲ್ಲಿ ಒಂದು ಹಂತದ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : POCSO Case : ವಿದ್ಯಾರ್ಥಿನಿ ಜತೆ ಅನುಚಿತ ವರ್ತನೆ, ಸರಕಾರಿ ಶಾಲೆ ಶಿಕ್ಷಕನ ಮೇಲೆ ಪೋಕ್ಸೊ ಕೇಸ್‌

Exit mobile version