Site icon Vistara News

ಶಾಸಕರಿಗೆ ಮನವಿ ಕೊಡೋಕೆ ಬಂದ ಪ್ರಿನ್ಸಿಪಾಲ್ ಫುಲ್‌ ಟೈಟ್;‌ ಕುಡಿದಿದ್ದು ಸಾಬೀತಾಗುತ್ತಿದ್ದಂಗೆ ಅಮಾನತು!

Drunked Teacher in chikkamagaluru

ಚಿಕ್ಕಮಗಳೂರು: ಇಲ್ಲೊಬ್ಬ ವಸತಿ ಶಾಲೆ ಪ್ರಾಂಶುಪಾಲರು (Drunken Teacher) ಸಮಸ್ಯೆಯನ್ನು ಹೇಳಿಕೊಳ್ಳಬೇಕೆಂದು ಶಾಸಕರ ಬಳಿಗೆ ಸಮಸ್ಯೆಗಳ ಪಟ್ಟಿಯುಳ್ಳ ಪತ್ರವನ್ನು ಹಿಡಿದು ಹೊರಟಿದ್ದರು. ಆದರೆ, ಹೋಗುತ್ತಿರುವುದು ಶಾಸಕರ ಬಳಿ ಎಂದೋ ಏನೋ? ಸ್ಟಿಫ್‌ ಆ್ಯಂಡ್ ಸ್ಟಡಿಯಾಗಿರಬೇಕು ಅಂದುಕೊಂಡರೋ ಏನೋ? ಫುಲ್‌ ಟೈಟಾಗಿ ಹೋಗಿದ್ದು, ಈಗ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.

ಎನ್.ಆರ್. ಪುರ‌‌‌ ತಾಲೂಕಿನ ಸಿಂಸೆ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಲೋಕನಾಯ್ಕ್ ಎಂಬುವವರು ಈಗ ಅಮಾನತಿಗೆ ಒಳಗಾಗಿರುವ ಶಿಕ್ಷಕ. ಇವರು ವಸತಿ ಶಾಲೆ‌ ಸಮಸ್ಯೆ ಬಗ್ಗೆ ಶಾಸಕರಿಗೆ ಮನವಿ ನೀಡಬೇಕೆಂದು ಪತ್ರ ಹಿಡಿದು ಬಂದಿದ್ದರು. ಆದರೆ, ಒಂದು ಕಡೆ ನಿಂತುಕೊಳ್ಳಲು ಸಾಧ್ಯವಾಗದೆ, ತೂರಾಡುವ ಪರಿಸ್ಥಿತಿಯಲ್ಲಿದ್ದರು. ಅಲ್ಲದೆ, ಸಮಸ್ಯೆ ಹೇಳಿಕೊಳ್ಳಲು ಬಾಯಿ ಬಿಟ್ಟರೆ ಮದ್ಯದ ವಾಸನೆ ಅಲ್ಲಿದ್ದವರ ಮೂಗಿಗೆ ಬಡಿಯುತ್ತಿತ್ತು.

ಮನವಿ ಕೊಡಲು ಬಂದವರ ಬಳಿ ಪ್ರಾಂಶುಪಾಲರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ

ಇದನ್ನು ಗಮನಿಸಿದ ಶಾಸಕ ರಾಜೇಗೌಡ ಅವರು ಕುಡಿದಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಪ್ರಾಂಶುಪಾಲ ಇಲ್ಲ ಎಂದು ತಲೆ ಅಲ್ಲಾಡಿಸಿದ್ದಾರೆ. ಹೀಗಾಗಿ ಶಾಸಕರು ಪೊಲೀಸರನ್ನು ಕಳಿಸಿದ್ದಾರೆ. ಕೊನೆಗೆ ಬ್ರೀಥಿಂಗ್ ಆಲ್ಕೋಹಾಲ್ ಅನಲೈಸರ್ ಅನ್ನು ತರಿಸಿ, ಪೊಲೀಸರನ್ನು ಕರೆಸಿ ಮದ್ಯಪಾನದ ಪರೀಕ್ಷೆ ಮಾಡಿಸಿದ್ದಾರೆ. ಅದರಲ್ಲಿ ಕುಡಿದಿರುವುದು ಗೊತ್ತಾಗಿದೆ.

ಇದನ್ನೂ ಓದಿ: New fungus: ತುಮಕೂರಿನ ಮಕ್ಕಳ ಕಾಲು, ಕೈಯಲ್ಲಿ ಮೂಡುತ್ತಿವೆ ಚುಕ್ಕೆಗಳು; ಹೊಸ ಫಂಗಸ್‌ಗೆ ಜನ ಕಂಗಾಲು!

ಹೀಗಾಗಿ ಪ್ರಾಂಶುಪಾಲರನ್ನು ವೈದ್ಯಕೀಯ ಪರೀಕ್ಷೆಗೆ ಸಹ ಶಾಸಕ ರಾಜೇಗೌಡ ಅವರು ಕಳಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಮದ್ಯಪಾನ ಮಾಡಿರುವುದು ದೃಢವಾಗಿದೆ. ಇದರಿಂದ ಶಾಸಕರು ತೀವ್ರ ಅಸಮಾಧಾನಗೊಂಡಿದ್ದು, ಪ್ರಾಂಶುಪಾಲರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಸೂಚನೆ ನೀಡಿದರು. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಅಮಾನತು ಆದೇಶವನ್ನು ಹೊರಡಿಸಿದ್ದಾರೆ.

Exit mobile version