Site icon Vistara News

Accident Case | ಖಾಸಗಿ ಬಸ್‌- ಲಾರಿ ಡಿಕ್ಕಿ: ಲಾರಿ ಚಾಲಕ ಸಾವು, ಒಬ್ಬ ಗಂಭೀರ

Accident Case

ಧಾರವಾಡ : ಬೆಳ್ಳಂಬೆಳಗ್ಗೆ ಜಿಲ್ಲೆಯ ಹೊರವಲಯದಲ್ಲಿ ಖಾಸಗಿ ಬಸ್‌ ಮತ್ತು ಲಾರಿಗೆ ಡಿಕ್ಕಿ (Accident Case) ಗುರುವಾರ (ಆ.24) ಸಂಭವಿಸಿದೆ. ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದೆ.

ಧಾರವಾಡ ಹೊರವಲಯದ ಹಳಿಯಾಳ ಬೈಪಾಸ್ ರಸ್ತೆಯಲ್ಲಿ ಖಾಸಗಿ‌ ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಾಗೂ ಓರ್ವನ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ | Tumkur accident | ಶಿರಾ ಬಳಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ, 9 ಕಾರ್ಮಿಕರ ಸಾವು

ಖಾಸಗಿ‌ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತದಿಂದ ಬೈಪಾಸ್‌ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ‌‌ ಪೊಲೀಸರ ಭೇಟಿ ನೀಡಿದ್ದಾರೆ.

Exit mobile version