Site icon Vistara News

Road Accident: ಯಲ್ಲಾಪುರದಲ್ಲಿ ಖಾಸಗಿ ಬಸ್‌ ಪಲ್ಟಿಯಾಗಿ ಚಾಲಕ ಸಾವು; 25 ಜನರಿಗೆ ಗಾಯ

private bus overturned on National Highway 63 in Yallapur

private bus overturned on National Highway 63 in Yallapur Driver death 25 Peoples injured

ಶಿರಸಿ (ಯಲ್ಲಾಪುರ): ಖಾಸಗಿ ಬಸ್ (Private bus) ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟು, 25 ಜನ ಪ್ರಯಾಣಿಕರಿಗೆ ಗಾಯಗೊಂಡಿರುವ (Passengers injured) ಘಟನೆಯು ಯಲ್ಲಾಪುರ (Yallapur) ಹೊರವಲಯದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಶನಿವಾರ ಬೆಳಗ್ಗೆ ಜರುಗಿದೆ.

ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಇಂಟರ್ ಸಿಟಿ ಟ್ರಾವೆಲ್ಸ್‌ನ ಬಸ್ ಪಲ್ಟಿಯಾಗಿದ್ದು, ಮಂಡ್ಯ ಮೂಲದ ಚಾಲಕ ಕಿರಣ್ ದಿವಾಕರ್ (40) ಸ್ಥಳದಲ್ಲೇ ಮೃತಪಟ್ಟಿದ್ದಾನೆ. 30 ಜನ ಪ್ರಯಾಣಿಕರಿದ್ದ ಬಸ್ ಪಲ್ಟಿಯಾಗಿದ್ದು, 25 ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: IND vs WI: ಗಿಲ್​ ಅವರ ಶೈಲಿಯಲ್ಲಿ ಶತಕ ಸಂಭ್ರಮಿಸಿದ ಕಿಂಗ್​ ಕೊಹ್ಲಿ

ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version