ಬೆಂಗಳೂರು: ಸರಕಾರಗಳು ಮತದಾರರ ಮಾಹಿತಿಯ (Voter data) ಮೇಲೆ ಮಾತ್ರ ಕಣ್ಣಿಟ್ಟಿರುವುದಲ್ಲ, ದೇಶದ ಪ್ರತಿ ನಾಗರಿಕರ ಎಲ್ಲ ಚಟುವಟಿಕೆಗಳ ಮೇಲೆ ಹದ್ದುಗಣ್ಣಿಟ್ಟಿದೆ. ಈ ಮೂಲಕ ಖಾಸಗಿತನದ ಮೇಲೆ ಪ್ರಹಾರ ಮಾಡುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಸರಕಾರ ನಾನಾ ತಂತ್ರಗಳ ಮೂಲಕ, ಸೋಷಿಯಲ್ ಮೀಡಿಯಾದ ಮೂಲಕ ನಾಗರಿಕರ ರಾಜಕೀಯ ನಿಲುವುಗಳನ್ನು ಕೂಡಾ ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮೇಲಿನಿಂದ ಕೆಳಗಿನವರೆಗೆ ಎಲ್ಲರ ಮೇಲೂ ಕಣ್ಣಿಟ್ಟಿದೆ. ವೋಟರ್ ಐಡಿಯನ್ನು ಆಧಾರ್‌ಗೆ ಲಿಂಕ್ ಮಾಡುವುದು ಕೂಡಾ ಇದೇ ಹದ್ದುಗಣ್ಣಿನ ಒಂದು ಭಾಗ. ಅದರ ಜತೆಗೆ ನಾವು ಮೊಬೈಲ್ ನಂಬರ್ ಕೂಡಾ ಕೊಡುತ್ತೇವೆ. ನಿಜವೆಂದರೆ, ಮೊಬೈಲ್ ನಂಬರ್ ಎಲ್ಲದಕ್ಕೂ ಅಗತ್ಯವಿಲ್ಲ. ಸೋಷಿಯಲ್ ಮಿಡಿಯಾಗೂ ಅಗತ್ಯವಿಲ್ಲ. ಆದರೆ ಮೊಬೈಲ್ ನಂಬರ್ ಕೊಡಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡಲಾಗುತ್ತಿದೆ ಎಂದು ಅವರು ಆಪಾದಿಸಿದರು.
ʻʻನಾಗರಿಕರ ನಂಬರ್ ನೋಡುತ್ತಾರೆ. ಸೋಷಿಯಲ್ ಮಿಡಿಯಾ ಹುಡುಕುತ್ತಾರೆ. ನಿಮ್ಮ ಪೊಲಿಟಿಕಲ್ ಪ್ರೊಫೈಲ್ ಯಾವ ರೀತಿ ಇದೆ ಎಂದು ನೋಡುತ್ತಾರೆ. ಕಾಂಗ್ರೆಸ್ ಮತ್ತಿತರರನ್ನು ಫಾಲೋ ಮಾಡುತ್ತಿದ್ದರೆ ಆ ಸಂಪರ್ಕವನ್ನು ಕತ್ತರಿಸುತ್ತಾರೆ. ಮೋದಿ ಇಲ್ಲವೇ ಬಿಜೆಪಿಯನ್ನು ಫಾಲೋ ಮಾಡುತ್ತಿದ್ದರೆ ಉಳಿಸಿಕೊಳ್ಳುತ್ತಾರೆ. ಈ ತಂತ್ರ ಇಡೀ ದೇಶಾದ್ಯಂತ ನಡೆಯುತ್ತಿದೆʼʼ ಎಂದು ಪ್ರಿಯಾಂಕ್ ದೂರಿದರು.
ಇದನ್ನೂ ಓದಿ | Voter data | ಚಿಲುಮೆ ಮಾದರಿಯಲ್ಲೇ ವಿಜಯಪುರದಲ್ಲೂ ಗೋಲ್‌ಮಾಲ್: ಸಿಕ್ಕಿಬಿದ್ದವನ ಹಿಂದಿದ್ದಾರಾ ಬಿಜೆಪಿ ನಾಯಕ ಯತ್ನಾಳ್?