ಬೆಂಗಳೂರು: ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ, ಖ್ಯಾತ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ೨೦೨೨ನೇ ಸಾಲಿನ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸಸ್ ಫೆಲೋಶಿಪ್ (Prof. K S Rangappa) ದೊರೆತಿದೆ. ಇದು ಜಾಗತಿಕ ಫೆಲೋಶಿಪ್ ಆಗಿರುವುದರಿಂದ ಪ್ರೊ.ಕೆ.ಎಸ್.ರಂಗಪ್ಪ ಅವರ ಸಾಧನೆಯು ಮಹತ್ವ ಪಡೆದುಕೊಂಡಿದೆ. ಅಲ್ಲದೆ, ಇಂತಹ ಪ್ರತಿಷ್ಠಿತ ಫೆಲೋಶಿಪ್‌ಗೆ ಭಾಜನರಾದ ಮೊದಲ ಕನ್ನಡಿಗ ಎನಿಸಿದ್ದಾರೆ.
ಕೆ.ಎಸ್.ರಂಗಪ್ಪ ಅವರು ಕಳೆದ ೪೦ ವರ್ಷಗಳಿಂದ ವಿಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿ ತೊಡಗಿದ್ದು, ಹತ್ತಾರು ಆವಿಷ್ಕಾರಗಳ ಮೂಲಕ ಖ್ಯಾತಿ ಗಳಿಸಿದ್ದಾರೆ. ವಿಜ್ಞಾನ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆ, ಮಾಡಿದ ಸಾಧನೆ ಪರಿಗಣಿಸಿ ಫೆಲೋಶಿಪ್ ನೀಡಲಾಗಿದೆ. ಇದು ಯುವ ವಿಜ್ಞಾನಿಗಳಿಗೆ ಸ್ಫೂರ್ತಿದಾಯಕ ವಿಷಯ ಎಂದೇ ಹೇಳಲಾಗುತ್ತಿದೆ.
ದಿ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸಸ್ (TWAS) ಜಾಗತಿಕ ಸಂಸ್ಥೆಯಾಗಿದ್ದು, ಇದನ್ನು ೧೯೮೩ರಲ್ಲಿ ಸ್ಥಾಪಿಸಲಾಗಿದೆ. ಇದರಲ್ಲಿ ನೂರಾರು ದೇಶಗಳ ಖ್ಯಾತ ವಿಜ್ಞಾನಿಗಳಿದ್ದು, 11 ನೊಬೆಲ್ ಪುರಸ್ಕೃತರೂ ಸದಸ್ಯರಾಗಿದ್ದಾರೆ. ಜಗತ್ತಿನಾದ್ಯಂತ ಒಟ್ಟು ೧,೨೯೬ ಸದಸ್ಯರಿದ್ದಾರೆ. ಹಾಗಾಗಿ ಇದು ಪ್ರತಿಷ್ಠಿತ ಫೆಲೋಶಿಪ್ ಎನಿಸಿದೆ.
ಇದನ್ನೂ ಓದಿ | Dailyhunt | #StoryForGlory | ಡೈಲಿಹಂಟ್, ಎಎಂಜಿ ಮೀಡಿಯಾ ಪ್ರತಿಭಾನ್ವೇಷಣೆಯ ಗ್ರ್ಯಾಂಡ್ ಫಿನಾಲೆ