Site icon Vistara News

Property Tax: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಡಿಜಿಟಲ್ ವ್ಯವಸ್ಥೆ

Jakkappagola karwar

#image_title

ಕಾರವಾರ: “ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅರ್ಜಿ ನಮೂನೆಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ತೆರಿಗೆಯ ಮೊತ್ತ ಸಂಗ್ರಹಿಸಿ, ಬ್ಯಾಂಕುಗಳಿಗೆ ನೀಡುತ್ತಿದ್ದ ಪ್ರಕ್ರಿಯೆಗೆ ಬದಲಾಗಿ ಆ್ಯಂಡ್ರಾಯ್ಡ್ ಸ್ವೈಪ್ ಮೆಷಿನ್ ಬಳಸಿ ಆನ್‌ಲೈನ್‌ನಲ್ಲಿಯೇ ಸುಲಭವಾಗಿ ತೆರಿಗೆ (Property Tax) ಪಾವತಿಸಬಹುದಾಗಿದೆ” ಎಂದು ಜಿಲ್ಲಾ ಪಂಚಾಯಿತಿಯ ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿಗಳಾದ ಡಿ.ಎಂ. ಜಕ್ಕಪ್ಪಗೋಳ ಹೇಳಿದರು.

ಕಾರವಾರ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಸೋಮವಾರ (ಮಾ.20) ನಡೆದ ಆಸ್ತಿ ತೆರಿಗೆ ಡಿಜಿಟಲ್ ಸಂಗ್ರಹ ಮೆಷಿನ್ ವಿತರಣೆ ಹಾಗೂ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತೆರಿಗೆ ಸಂಗ್ರಹ ಮೆಷಿನ್ ವಿತರಿಸಿ ಮಾತನಾಡಿದರು.

“ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈಗ ಆಸ್ತಿ ತೆರಿಗೆ ಪಾವತಿಗೆ ಡಿಜಿಟಲ್ ಸ್ಪರ್ಶ ನೀಡಿದ್ದು, ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಹೊಸ ಸ್ಮಾರ್ಟ್ ಮಾರ್ಗವನ್ನು ಪರಿಚಯಿಸಲಾಗಿದೆ. ಈ POSA910 ಯಂತ್ರವು ಯು.ಎಸ್.ಬಿ ಟೈಪ್ ಎ ಯಿಂದ ಸಿ ಟೈಪ್ ಕೇಬಲ್, SV 2000mA ಟ್ರಾವೆಲ್ ಚಾರ್ಜರ್, 10 ಪೇಪರ್ ರೋಲ್ ಮತ್ತು ಇನ್ನಿತರ ಸಲಕರಣೆಗಳನ್ನು ಒಳಗೊಂಡಿರುತ್ತದೆ. ಈ ಯಂತ್ರವನ್ನು ಸಿಮ್ ಕಾರ್ಡ್ ಹಾಗೂ ವೈಫೈ ಬಳಸಿಕೊಳ್ಳುವುದರ ಮೂಲಕ ಉಪಯೋಗಿಸಬಹುದಾಗಿದೆ. ಸ್ವೈಪ್, ಚಿಪ್ ಕಾರ್ಡ್ ಇನ್ಸೆರ್ಟ್, ಟ್ಯಾಪ್ ಕಾರ್ಡ್ ಹಾಗೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡಬಹುದು. ಪಾವತಿಗಾಗಿ ಮಾಸ್ಟರ್ ಕಾರ್ಡ್, ವಿಸಾ, ಯುಪಿಐ ಹಾಗೂ ರೂಪೇ ಕಾರ್ಡ್‌ಗಳನ್ನು ಬಳಸಬಹುದಾಗಿದೆ” ಎಂದರು.

ಆ್ಯಂಡ್ರಾಯ್ಡ್ ಸ್ವೈಪ್ ಯಂತ್ರ ಬಳಸುವ ವಿಧಾನ

ಯಂತ್ರದ ಎಡ ಭಾಗದಲ್ಲಿರುವ ಸ್ಟಾರ್ಟ್ ಬಟನ್ ಒತ್ತಬೇಕು. ನಂತರ ಅಪ್ಲಿಕೇಶನ್ ತೆರೆದುಕೊಳ್ಳುತ್ತದೆ. ನಿಮ್ಮ ರುಜುವಾತನ್ನು ಬಳಸಿಕೊಂಡು (possword) ಅಪ್ಲಿಕೇಶನ್ ಲಾಗಿನ್ ಮಾಡಿ, ಗ್ರಾಮ ಮತ್ತು ಆಸ್ತಿಯ ಹೆಸರನ್ನು ಆಯ್ಕೆ ಮಾಡಬೇಕು. ನಂತರ ಮೊತ್ತ (ಪೂರ್ಣ/ಭಾಗಶಃ) ಆಯ್ಕೆ ಮಾಡಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಪಾವತಿಯನ್ನು ಆಯ್ಕೆ ಮಾಡಬೇಕು. ನಂತರ ಕಾರ್ಡ್ ಮತ್ತು ಯುಪಿಐ ಎರಡು ಆಯ್ಕೆಗಳು ಕಾಣುತ್ತವೆ. ಕಾರ್ಡ್‌ ಅನ್ನು ಆಯ್ಕೆ ಮಾಡಿ ನಂತರ ಕಾರ್ಡ್ ಹೋಲ್ಡರ್ ಪಿನ್ ಸಂಖ್ಯೆಯನ್ನು ನಮೂದಿಸಿದರೆ ಪಾವತಿ ಯಶಸ್ವಿಯಾಗುತ್ತದೆ.

ಇದನ್ನೂ ಓದಿ: Nitin Gadkari : ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕಚೇರಿಗೆ ಮತ್ತೆ ಜೀವ ಬೆದರಿಕೆ ಕರೆ; ಏನಾಗುತ್ತಿದೆ ಹಿಂಡಲಗಾ ಜೈಲಿನಲ್ಲಿ?

ಯುಪಿಐ ಪಾವತಿಸುವ ವಿಧಾನ

ಯುಪಿಐ ಪಾವತಿಗಾಗಿ ಗ್ರಾಹಕರಿಗೆ ಮೊದಲು ತಮ್ಮ ಯುಪಿಐ ಅಪ್ಲಿಕೇಶನ್ ಮತ್ತು ಸ್ಕ್ಯಾನರ್ ಮೋಡನ್ನು ತೆರೆಯಲು ಸೂಚಿಸಬೇಕು. ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡಿದ ನಂತರ ಗ್ರಾಹಕರು ಅವರ ಮೊತ್ತವನ್ನು ನಮೂದಿಸುವ ಅಗತ್ಯವಿರುವುದಿಲ್ಲ. ಅವರು ಪಾವತಿ ಆಯ್ಕೆ ಪಡೆಯುತ್ತಾರೆ‌. ಪಾವತಿ ಖಚಿತ ಪಡಿಸಿದ ನಂತರ ಚಾರ್ಟ್ ಸ್ಲೀಪ್‌ನ್ನು ರಚಿಸಲಾಗುತ್ತದೆ. ನಂತರ ವಹಿವಾಟಿನ ಸ್ಥಿತಿಯನ್ನು ಗಮನಿಸಿದಾಗ ಹಸಿರು ಮಾರ್ಕ್‌ ಇದ್ದರೆ ಅದು ಯಶಸ್ವಿಯಾಗಿದೆ ಎಂದರ್ಥ. ಹೀಗೆ ಈ ಯಂತ್ರವು ತೆರಿಗೆ ಪಾವತಿಯನ್ನು ಅತ್ಯಂತ ಸುಲಭವಾಗಿಸುತ್ತದೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ನ ಅಭಿವೃದ್ಧಿ ಶಾಖೆಯ ಸಹಾಯಕ ಕಾರ್ಯದರ್ಶಿ ಜೆ.ಆರ್.ಭಟ್ಟ, ಕಾರವಾರ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಬಾಲಪ್ಪನವರ ಆನಂದ ಕುಮಾರ, ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಬಿಲ್ ಕಲೆಕ್ಟರ್‌ಗಳು ಹಾಗೂ ಡಿಇಒಗಳು ಉಪಸ್ಥಿತರಿದ್ದರು.‌

ಇದನ್ನೂ ಓದಿ: Actress Kajal Aggarwal : ನಂದಮುರಿ ಬಾಲಕೃಷ್ಣಗೆ ಜೋಡಿಯಾಗಲಿದ್ದಾರೆ ನಟಿ ಕಾಜಲ್‌ ಅಗರ್ವಾಲ್‌

Exit mobile version