Site icon Vistara News

Sea turtles | ಮಾಜಾಳಿ ಕಡಲತೀರದಲ್ಲಿ ಆಲಿವ್ ರಿಡ್ಲೆ ಕಡಲಾಮೆಗಳ 129 ಮೊಟ್ಟೆ; ಅರಣ್ಯಾಧಿಕಾರಿಗಳಿಂದ ರಕ್ಷಣೆ

Olive Ridley Sea turtle egg Forest Officer

ಕಾರವಾರ: ತಾಲೂಕಿನ ಮಾಜಾಳಿ ಕಡಲತೀರದಲ್ಲಿ ಆಲಿವ್ ರಿಡ್ಲೆ ಕಡಲಾಮೆ (Sea turtles) 129 ಮೊಟ್ಟೆಗಳನ್ನು ಇಟ್ಟಿದ್ದು, ಮೀನುಗಾರರ ಸಹಕಾರದಲ್ಲಿ ಅರಣ್ಯಾಧಿಕಾರಿಗಳು ಸಂರಕ್ಷಣೆ ಮಾಡಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನುಬಂಧ 1ರಲ್ಲಿ ಕಡಲಾಮೆಗಳನ್ನು ಸಂರಕ್ಷಿಸಲ್ಪಟ್ಟಿವೆ. ಕಡಲಾಮೆಗಳು ನವೆಂಬರ್‌ನಿಂದ ಮಾರ್ಚ್‌ವರೆಗೆ ಮೊಟ್ಟೆ ಇಡುವ ಕಾಲವಾಗಿದೆ. ಮೊಟ್ಟೆಗಳಿಂದ 50- 60 ದಿನದ ನಂತರ ಮರಿಗಳಾಗಿ ಹೊರಬರುತ್ತವೆ. ಹೀಗಾಗಿ ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ್ ಕೆ.ಸಿ. ಅವರ ಮಾರ್ಗದರ್ಶನದಲ್ಲಿ ಅರಣ್ಯಾಧಿಕಾರಿಗಳು ಒಟ್ಟು 129 ಮೊಟ್ಟೆಗಳನ್ನು ತೀರದಲ್ಲಿ ಸಂರಕ್ಷಿಸಿ ಇರಿಸಿದ್ದಾರೆ.

ಕಾರವಾರ ತಾಲೂಕು ದೇವಭಾಗ್, ಮಾಜಾಳಿ ಮತ್ತು ಅಂಕೋಲಾದ ಭಾವಿಕೇರಿ ಕಡಲತೀರ ಕಡಲಾಮೆ ಮೊಟ್ಟೆ ಇಡುವ ಪ್ರದೇಶಗಳಾಗಿ ಗುರುತಿಸಿಕೊಂಡಿವೆ. ಅರಣ್ಯ ಇಲಾಖೆಯ ಸಮುದ್ರ ಜೀವಿಗಳ ಸಂರಕ್ಷಣೆಗಾಗಿ ಕಳೆದ ಸಾಲಿನಿಂದ ಕೋಸ್ಟಲ್ ಆ್ಯಂಡ್ ಮರೈನ್ ಇಕೋಸಿಸ್ಟೆಮ್ ಸೆಲ್ ಕಾರ್ಯನಿರ್ವಹಿಸುತ್ತಿದ್ದು, ಕಳೆದ ವರ್ಷ 1500ಕ್ಕೂ ಅಧಿಕ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸಿ ಸುಮಾರು 1300 ಮರಿಗಳನ್ನು ಯಶಸ್ವಿಯಾಗಿ ಸಮುದ್ರಕ್ಕೆ ಬಿಡಲಾಗಿತ್ತು.

ಇದನ್ನೂ ಓದಿ | Ghol fish | ಉಡುಪಿಯಲ್ಲಿ ಬಲೆಗೆ ಬಿತ್ತು 2 ಲಕ್ಷ ರೂ. ಬೆಲೆಯ ಮೀನು!

Exit mobile version