ಶಿವಮೊಗ್ಗ: ನಗರದ ಜೈಲ್ ಸರ್ಕಲ್ ಬಳಿ (Shivamogga News) ಕನ್ನಡ ಧ್ವಜಕಟ್ಟೆ ತೆರವಿಗೆ ಮುಂದಾದ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಕನ್ನಡಪರ ಸಂಘಟನೆಗಳು ಹಾಗೂ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಜೆಸಿಬಿಯಿಂದ ಕನ್ನಡ ಧ್ವಜ ಕಟ್ಟೆಯನ್ನು ಸೋಮವಾರ ತೆರವು ಮಾಡುತ್ತಿದ್ದಾಗ ಸ್ಥಳಕ್ಕಾಗಮಿಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ರಸ್ತೆಯಲ್ಲಿ ಟಯರ್ ಸುಟ್ಟು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಡಾ. ರಾಜಕುಮಾರ್ ಅಭಿಮಾನಿಗಳ ಬಳಗದಿಂದ ಕನ್ನಡ ಧ್ವಜ ಕಟ್ಟೆ ನಿರ್ಮಿಸಲಾಗಿತ್ತು. ಕಳೆದ 35 ವರ್ಷದಿಂದ ಸ್ಥಳದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಆದರೆ, ಏಕಾಏಕಿ ಅಧಿಕಾರಿಗಳು ಧ್ವಜಕಟ್ಟೆಯನ್ನು ತೆರವು ಕಾರ್ಯಾಚರಣೆ ಕೈಗೊಂಡಿದ್ದರಿಂದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ | Teacher Transfer : ಸ್ಥಗಿತಗೊಂಡಿರುವ ಶಿಕ್ಷಕರ ವರ್ಗಾವಣೆ; ಕೂಡಲೇ ಆರಂಭಿಸಲು ಶಿಕ್ಷಕರ ಸಂಘದ ಮನವಿ
ಜೆಸಿಬಿಯಿಂದ ಧ್ವಜಕಟ್ಟೆಯ ಅರ್ಧ ಭಾಗ ತೆರವು ಮಾಡಲಾಗಿತ್ತು. ಆದರೆ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಸ್ಮಾರ್ಟ್ ಸಿಟಿ ಆಧಿಕಾರಿಗಳು ಅರ್ಧಕ್ಕೆ ತೆರವು ಕಾರ್ಯಾಚರಣೆ ನಿಲ್ಲಿಸಿ ವಾಪಸಾಗಿದ್ದಾರೆ.
ನಿವೇಶನದ ಪಟ್ಟಾಪುಸ್ತಕ ವಿತರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ
ಗದಗ: ನಿವೇಶನ ಹಂಚಿಕೆಗೆ ಸಂಬಂಧಿಸಿದ ಪಟ್ಟಾಪುಸ್ತಕ ವಿತರಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ನಾಯಕ ವೀರೇಶ ಸೊಬರದಮಠ ನೇತೃತ್ವದಲ್ಲಿ ತಾಲೂಕಿನ ಹೊಂಬಳ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ | Arun kumar puthila : ಕರಾವಳಿಯಲ್ಲಿ ಹುಟ್ಟಿಕೊಂಡಿದೆ ಪುತ್ತಿಲ ಪರಿವಾರ; ಸಂಘ ಪರಿವಾರಕ್ಕೆ ಇಬ್ಭಾಗ ಆತಂಕ
ಈ ವೇಳೆ ಮಾತನಾಡಿದ ವೀರೇಶ ಸೊಬರದಮಠ, ಗ್ರಾಮದಲ್ಲಿ ಈಗಾಗಲೇ ಸರ್ಕಾರ 20 ವರ್ಷಗಳ ಹಿಂದೆಯೇ 30 ಎಕರೆ ಜಮೀನು ಖರೀದಿ ಮಾಡಿ ಬಡವರ್ಗದ ಜನರಿಗೆ ನಿವೇಶನ ಹಂಚಿಕೆ ಮಾಡಿದೆ. ಆದರೆ, ಈವರೆಗೂ ಪಟ್ಟಾಪುಸ್ತಕ ಹಂಚಿಕೆ ಮಾಡಿಲ್ಲ. ಅಲ್ಲದೆ, ಇಂದಿಗೂ ಅಲ್ಲಿ ಮನೆಗಳು ನಿರ್ಮಾಣವಾಗಿಲ್ಲ. ಜಾಲಿ ಗಂಟಿಗಳು ಬೆಳೆದಿರುವುದರಿಂದ ಸ್ಥಳವು ವಾಸಯೋಗ್ಯವಾಗಿಲ್ಲ. ಹೀಗಾಗಿ ಮುಂದಿನ 15 ದಿವಸದೊಳಗೆ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲದೇ ಹೋದರೆ ಜಿಲ್ಲಾಡಳಿತ ಕಚೇರಿ ಬಳಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.