ಶಿವಮೊಗ್ಗ: ಜೈನರ ಪವಿತ್ರ ಕ್ಷೇತ್ರವಾದ ಜಾರ್ಖಂಡ್ ರಾಜ್ಯದ ಸಂವೇದ ಶಿಖರ್ಜಿಯನ್ನು ಕೇಂದ್ರ ಹಾಗೂ ಜಾರ್ಖಂಡ್ ರಾಜ್ಯ ಸರ್ಕಾರ ಪರ್ಯಟನ (ಪ್ರವಾಸಿ ತಾಣ) ಕ್ಷೇತ್ರವನ್ನಾಗಿ ಘೋಷಿಸಿರುವುದನ್ನು ವಿರೋಧಿಸಿ ಅಖಿಲ ಭಾರತ ಜೈನ ಸಮಾಜದವರು(Protest by Jains) ಬುಧವಾರ (ಡಿ.೨೧) ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಗೋಪಿ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಅವರು, ಜಾರ್ಖಂಡ್ ಸರ್ಕಾರಕ್ಕೆ ಅಲ್ಲಿ ಯಾವುದೇ ಇತರೆ ಕಾರ್ಯ ಮಾಡಲು ಅವಕಾಶ ಕೊಡದೆ ಕೇವಲ ಧಾರ್ಮಿಕ ಕ್ಷೇತ್ರವನ್ನಾಗಿ ಘೋಷಣೆ ಮಾಡಬೇಕು. ಅಲ್ಲಿ ಅನಾದಿ ಕಾಲದಿಂದ ಕ್ಷೇತ್ರದ ದರ್ಶನಕ್ಕೆ ಜೈನರು ಬರಿಗಾಲಿನಲ್ಲಿ 28 ಕಿಲೋ ಮೀಟರ್ ವರೆಗೆ ಬೆಟ್ಟ ಗುಡ್ಡಗಳನ್ನು ದಾಟಿ ಸಿದ್ಧ ಕ್ಷೇತ್ರದ ದರ್ಶನ ಮಾಡುತ್ತಾ ಬಂದಿರುತ್ತಾರೆ. ಇಂತಹ ಪವಿತ್ರ ಕ್ಷೇತ್ರವನ್ನು ಮೊದಲಿನ ಹಾಗೆಯೇ ಧಾರ್ಮಿಕ ಕ್ಷೇತ್ರವಾಗಿ ಉಳಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ | Dargah Clearance | ಪೊಲೀಸ್ ಸರ್ಪಗಾವಲಿನಲ್ಲಿ ಹುಬ್ಬಳ್ಳಿಯ ಭೈರಿದೇವರಕೊಪ್ಪದ ದರ್ಗಾ ತೆರವು
ಈ ಪವಿತ್ರ ಕ್ಷೇತ್ರವನ್ನು ಪರ್ಯಟನ ಕ್ಷೇತ್ರವನ್ನಾಗಿ ಮಾಡುವುದರಿಂದಾಗಿ ಧಾರ್ಮಿಕ ಕ್ಷೇತ್ರದಲ್ಲಿ ಸಮಾಜಬಾಹಿರ ಚಟುವಟಿಕೆಗಳಿಗೆ ಅವಕಾಶವಾಗುತ್ತದೆ. ಹೀಗಾಗಿ ಈ ಪವಿತ್ರ ಕ್ಷೇತ್ರಕ್ಕೆ ಧಕ್ಕೆ ಉಂಟಾಗುವ ಜೊತೆಗೆ ಜೈನ ಬಾಂಧವರ ಹಾಗೂ ಹಿಂದು ಬಾಂಧವರ ಮನಸ್ಸಿಗೆ ನೋವಾಗುತ್ತದೆ. ಈ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿಗಳು ಜೈನರ ಪವಿತ್ರ ಕ್ಷೇತ್ರವನ್ನು ಈ ಹಿಂದಿನಂತೆಯೇ ಉಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶ್ವೇತಾಂಬರ ಮೂರ್ತಿ ಪೂಜಕ ಸಂಘದ ಅಧ್ಯಕ್ಷ ದೇವಿಚಂದ್, ಶ್ರೀ ವರ್ಧಮಾನ್ ಸ್ಥಾನಕ್ ವಾಸಿ ಜೈನ್ ಸಂಘದ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಜೈನ್, ತೇರಾಪಂಥ್ ಸಭಾದ ಚಂದನ್ ಮಲ್ ಜೈನ್, ದಿಗಂಬರ ಜೈನ್ ಸಂಘದ ಅಧ್ಯಕ್ಷ ಪ್ರಭಾಕರ ಗೋಗಿ, ಜೈನ್ ಸಮಾಜದ ಮುಖಂಡ ವಿಜಯಕುಮಾರ್ ದಿನಕರ್ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ | Border Dispute | ಬೇಜವಾಬ್ದಾರಿ ಹೇಳಿಕೆ ನಿಲ್ಲಿಸದಿದ್ದರೆ ಕರ್ನಾಟಕಕ್ಕೆ ನೀರೇ ಬಿಡಲ್ಲ: ಮಹಾ ಸಚಿವ ಶಂಭುರಾಜ್ ಧಮ್ಕಿ!