ಮಾನ್ವಿ: ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿನ (Hostel) ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ, ವಿದ್ಯಾರ್ಥಿನಿಯರು ರಸ್ತೆ ತಡೆ ನಡೆಸಿ ಪ್ರತಿಭಟನೆ (Protest) ನಡೆಸಿದರು.
ವಸತಿನಿಲಯದಲ್ಲಿ ಅಗತ್ಯವಾದ ಮೂಲಭೂತ ಸೌಲಭ್ಯಗಳಿಲ್ಲ, ಕಟ್ಟಡ ಶಿಥಿಲಗೊಂಡಿದ್ದು, ಭಯ ಭೀತಿಯಿಂದ ವಾಸ ಮಾಡಬೇಕಾಗಿದೆ, ಮಳೆ ಬಂದರೆ ಗೋಡೆಗಳಿಗೆ ವಿದ್ಯುತ್ ಹರಿಯುವುದರಿಂದ ವಾರ್ಡನ್ ರಾತ್ರಿ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಾರೆ, ಇದರಿಂದ ರಾತ್ರಿಯೆಲ್ಲ ಕತ್ತಲೆಯಲ್ಲಿ ಕಾಲ ಕಳೆಯಬೇಕು, ಜತೆಗೆ ಇಲಿ, ಹೆಗ್ಗಣ. ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಇದರಿಂದ ತೀವ್ರ ತೊಂದರೆಯಾಗುತ್ತದೆ. ಇನ್ನು ವಸತಿ ನಿಲಯದಲ್ಲಿ ಶುದ್ದ ಕುಡಿಯುವ ನೀರು, ಬಳಸುವುದಕ್ಕೆ ಅಗತ್ಯವಿರುವ ನೀರು ಕೂಡ ಇಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: Tomato Price Hike : ಕಾಫಿ ನಾಡಿನಲ್ಲಿ ಟೊಮ್ಯಾಟೊ ಹೋಲ್‌ಸೇಲ್ ರೇಟೇ ಕೆಜಿಗೆ 200 ರೂ., ಅಂಗಡಿಯಲ್ಲಿ ಎಷ್ಟಿರಬಹುದು!
ಮೆನು ಪ್ರಕಾರ ಊಟ ನೀಡದೆ ಅಲ್ಪ ಪ್ರಮಾಣದಲ್ಲಿ ನೀಡಲಾಗುತ್ತದೆ, ಶುಚಿ ರುಚಿಯಾದ ಊಟದ ವ್ಯವಸ್ಥೆ ಇಲ್ಲ ಜತೆಗೆ ವಸತಿ ನಿಲಯದಲ್ಲಿ ಸುಸಜ್ಜಿತ ಶೌಚಾಲಯ ಇಲ್ಲದಿರುವುದರಿಂದ ಹೆಣ್ಣುಮಕ್ಕಳು ಪರದಾಡುವಂತಾಗಿದೆ, ಈ ಕುರಿತು ಅನೇಕ ಬಾರಿ ಅಧಿಕಾರಿಗಳು, ಹಾಸ್ಟೆಲ್ ವಾರ್ಡನ್ ಗಮನಕ್ಕೆ ತಂದರೂ ನಮ್ಮ ಸಮಸ್ಯೆಗಳು ಬಗೆಹರಿಸುವಲ್ಲಿ ನಿರ್ಲಕ್ಷ ಧೋರಣೆ ತೋರಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Shivam Dube: ಧೋನಿ ಸಲಹೆಯಿಂದ ಐರ್ಲೆಂಡ್ ಸರಣಿಯಲ್ಲಿ ಅವಕಾಶ ಸಿಕ್ಕಿತು; ದುಬೆ
ಉಪ ತಹಸೀಲ್ದಾರ್ ಅಬ್ದುಲ್ ವಾಹಿದ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಬಳಿಕ ಮಾತನಾಡಿ, ವಸತಿ ನಿಲಯದ ವಿದ್ಯಾರ್ಥಿನಿಯರು 15 ಮೂಲಭೂತ ಸೌಲಭ್ಯಗಳಿಗೆ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಈ ಕುರಿತು ಅವುಗಳನ್ನು ತಾ.ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರವೀಂದ್ರ ಉಪ್ಪಾರ ಅವರು ಇನ್ನು 15 ದಿನಗಳಲ್ಲಿ ಕಟ್ಟಡ ಬದಲಾವಣೆ ಮಾಡುವುದಾಗಿ ತಿಳಿಸಿದ್ದಾರೆ ಹಾಗೂ ಇಂದಿನಿಂದ ವಸತಿ ನಿಲಯದ ಮೇಲ್ವಿಚಾರಕಿಯನ್ನು ಮತ್ತು ಆಡುಗೆಯವರನ್ನು ಬದಲಾಯಿಸುವುದಾಗಿ ತಿಳಿಸಿರುವುದರಿಂದ ವಸತಿ ನಿಲಯಗಳಿಗೆ ತೆರಳುವಂತೆ ವಿದ್ಯಾರ್ಥಿನಿಯರಿಗೆ ತಿಳಿಸಿದರು.