Site icon Vistara News

Protest for toilet : ಗ್ರಾಮದಲ್ಲಿ ಶೌಚಾಲಯಕ್ಕಾಗಿ ಮಹಿಳೆಯರ ಪ್ರತಿಭಟನೆ: ನಾಡಕಚೇರಿ, ಗ್ರಾಪಂಗೆ ಬೀಗ‌ ಜಡಿದು ಆಕ್ರೋಶ

ಡಂಬಳ ಪಂಚಾಯಿತಿಗೆ ಬೀಗ

ಗದಗ: ಶೌಚಾಲಯ ಬೇಕೆಂದು ನೂರಾರು ಮಹಿಳೆಯರು ಸೇರಿ ನಾಡಕಚೇರಿ ಹಾಗೂ ಗ್ರಾಮ ಪಂಚಾಯತ್‌ಗೆ ಬೀಗ ಜಡಿದು ಪ್ರತಿಭಟನೆ (Protest for toilet) ನಡೆಸಿರೋ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ನಡೆದಿದೆ.

ಹಲವಾರು ವರ್ಷಗಳಿಂದ ಗ್ರಾಮದ‌ಲ್ಲಿ ಮಹಿಳೆಯರಿಗೆಂದು ಹಲವು ಸ್ಥಳಗಳಲ್ಲಿ ಸಾಮೂಹಿಕ ಶೌಚಾಲಯಗಳಿದ್ದವು. ಆದರೆ ಪಕ್ಕದ ಖಾಸಗಿ ಜಾಗದ ಮಾಲೀಕರು ಮಹಿಳಾ ಶೌಚಾಲಯ ಜಾಗವನ್ನು ಕಬಳಿಸಿದ್ದಾರೆ. ಕೆಲವೊಂದು ಕಡೆ ಶೌಚಾಲಯಗಳನ್ನು ಕೆಡವಲಾಗಿದೆ. ಹೀಗಾಗಿ ನಾವು ಶೌಚಕ್ಕೆ ಎಲ್ಲಿ ಹೋಗಬೇಕು ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಮೂಲಭೂತ ಸೌಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಮಹಿಳೆಯರು ರೋಸಿ ಹೋಗಿದ್ದು, ಗ್ರಾಮದ ಎಲ್ಲ ವಾರ್ಡ್‌ಗಳ ಮಹಿಳೆಯರಿಂದ ಪ್ರತಿಭಟನೆ ಶುರುವಾಗಿದೆ. ಗ್ರಾಮದಲ್ಲಿ ಸಮರ್ಪಕ ಸಾಮೂಹಿಕ ಶೌಚಾಲಯವಿಲ್ಲದೆ ಪರದಾಟ ನಡೆಸಬೇಕಾಗಿರುವ ಹಿನ್ನೆಲೆಯಲ್ಲಿ ಏಕಾಏಕಿ ನೂರಾರು ಮಹಿಳೆಯರು ಗುರುವಾರ ನಾಡಕಚೇರಿ ಹಾಗೂ ಗ್ರಾಮ ಪಂಚಾಯತ್‌ಗೆ ಮುತ್ತಿಗೆ ಹಾಕಿದರು.

ಅಲ್ಲದೆ ಮೂಲಭೂತ ಸೌಕರ್ಯದ ಸರ್ಕಾರದ ಅನುದಾನವನ್ನು ಸದಸ್ಯರೆಲ್ಲರೂ ಕೊಳ್ಳೆ ಹೊಡೆದಿರುವ ಆರೋಪವೂ ಕೇಳಿಬಂದಿದೆ.‌ ಸದ್ಯ ಪ್ರತಿಭಟನಾ‌ ಸ್ಥಳದಲ್ಲಿಯೇ ಮಹಿಳೆಯರು ಅಡುಗೆ ತಯಾರಿಸಿದ್ದಾರೆ. ಸಿಇಓ ಹಾಗೂ ತಹಶೀಲ್ದಾರ ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸುವವರೆಗೂ, ನಮ್ಮ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಇದನ್ನೂ ಓದಿ | Anganawadi Workers protest | ಕೊರೆವ ಚಳಿಯಲ್ಲೂ ಅಹೋರಾತ್ರಿ ಪ್ರತಿಭಟನೆ; ಕುಸಿದುಬಿದ್ದ ಅಂಗನವಾಡಿ ಕಾರ್ಯಕರ್ತೆ

Exit mobile version