Site icon Vistara News

Proud Police : ಮಟ್ಕಾ ದಂಧೆಗೆ ಕಡಿವಾಣ ಹಾಕಿದ ಐಜಿಪಿಗೆ ಅದ್ಧೂರಿ ಸನ್ಮಾನ, ಮೆರವಣಿಗೆ; ಕುಣಿದು ಕುಪ್ಪಳಿಸಿದ ಪಾವಗಡ ಮಂದಿ

IGP Chandrashekar pawagada news ಮಟ್ಕಾ ದಂಧೆ

ತುಮಕೂರು: ಪಾವಗಡ ತಾಲೂಕಿನಲ್ಲಿ ಹಲವು ವರ್ಷಗಳಿಂದ ಹೆಚ್ಚಾಗಿದ್ದ ಮಟ್ಕಾ ದಂಧೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿರುವ ಐಪಿಎಸ್ ಅಧಿಕಾರಿ ಚಂದ್ರಶೇಖರ್ (Proud Police) ಅವರಿಗೆ ಪಾವಗಡ ನಾಗರಿಕರು ಅದ್ಧೂರಿ ಸ್ವಾಗತ ಕೋರಿ ಅಭಿನಂದಿಸಿದರು.

ಬೆಂಗಳೂರು ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರು ತಾಲೂಕಿನಲ್ಲಿ ಹೆಚ್ಚಿದ್ದ ಮಟ್ಕಾ ದಂಧೆಗೆ ಕಡಿವಾಣ ಹಾಕುವಲ್ಲಿ ಸಾಕಷ್ಟು ಶ್ರಮವಹಿಸಿದ್ದರು. ಮಟ್ಕಾ ದಂಧೆಯಿಂದ ಸಾಕಷ್ಟು ಮಂದಿ ಮನೆ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದು, ಅದಕ್ಕೆ ಕಡಿವಾಣ ಹಾಕಬೇಕು ಎಂಬ ಕೂಗು ಕೇಳಿಬರುತ್ತಲೇ ಇತ್ತು. ಈ ಹಿಂದೆಯೂ ಪೊಲೀಸ್‌ ಅಧಿಕಾರಿಗಳು ಬಹಳ ಸಾರಿ ಪ್ರಯತ್ನಪಟ್ಟರೂ ಸಾಧ್ಯವಾಗಿರಲಿಲ್ಲ. ಆದರೆ, ಚಂದ್ರಶೇಖರ್‌ ಅವರು ನಿರಂತರವಾಗಿ ಶ್ರಮ ವಹಿಸಿ ಈ ದಂಧೆಯನ್ನು ಮಟ್ಟಹಾಕಿದ್ದಾರೆ. ಇದು ತಾಲೂಕಿನ ಜನರ ಸಂಭ್ರಮಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಪಾವಗಡ ಜನತೆಯು ಚಂದ್ರಶೇಖರ್‌ ಅವರನ್ನು ಮೆರವಣಿಗೆ ಮೂಲಕ ಕರೆತಂದಿದ್ದಾರೆ. ವಾದ್ಯ-ಮೇಳಗಳು ನೃತ್ಯಗಳ ಸಹಿತ ಅವರಿಗೆ ಅದ್ಧೂರಿ ಸ್ವಾಗತವನ್ನು ಕೋರಲಾಗಿದೆ. ಅಲ್ಲದೆ, ಬೃಹತ್ ಗಾತ್ರದ ಹಾರವನ್ನೂ ಹಾಕಿ ಗೌರವಿಸಲಾಗಿದೆ. ಪಾವಗಡ ನಾಗರಿಕ ವೇದಿಕೆ ಹಾಗೂ ಹಲವು ಸಂಘ ಸಂಸ್ಥೆಗಳಿಂದ ಚಂದ್ರಶೇಖರ್ ಅವರಿಗೆ ಅದ್ಧೂರಿ ಸ್ವಾಗತವನ್ನು ಕೋರಲಾಗಿದೆ. ಈ ವೇಳೆ ಪಾವಗಡ ಶನಿಮಹಾತ್ಮ ದೇವಸ್ಥಾನಕ್ಕೆ ತೆರಳಿದ ಚಂದ್ರಶೇಖರ್ ಪೂಜೆ ಸಲ್ಲಿಸಿದ್ದಾರೆ.

ಚಂದ್ರಶೇಖರ್‌ ಅವರು ಪಾವಗಡ ತಾಲೂಕಿನ ದೊಡ್ಡಹಳ್ಳಿ ಗ್ರಾಮದ ಅಳಿಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಈ ಭಾಗದಲ್ಲಿ ಬೇರೂರಿದ್ದ ಮಟ್ಕಾ ದಂಧೆ ಹಾಗೂ ಅದರ ಪರಿಣಾಮದ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಹಾಗಾಗಿ ಕಾನೂನು ರೀತ್ಯಾ ಕ್ರಮ ತೆಗೆದುಕೊಂಡು ಮಟ್ಕಾ ದಂಧೆಗೆ ಕಡಿವಾಣ ಹಾಕಿದ್ದಾರೆ.

ಇದನ್ನೂ ಓದಿ | Adichunchanagiri | ಜ.12 ರಿಂದ 18ರವರೆಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಯವರ 10ನೇ ಸಂಸ್ಮರಣಾ ಮಹೋತ್ಸವ

Exit mobile version