ಯಾದಗಿರಿ: ಜಿಲ್ಲೆಯಲ್ಲಿನ ಹಲವು ಶಾಲೆ (School), ವಸತಿ ಶಾಲೆ(Residential School), ವಸತಿ ನಿಲಯ ಮತ್ತು ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳಿಗೆ ಸಮರ್ಪಕ ಮೂಲಭೂತ ಸೌಕರ್ಯಗಳನ್ನು (infrastructure) ಒದಗಿಸಿ, ಅವರ ಶಿಕ್ಷಣ (Education) ಮತ್ತು ಆರೋಗ್ಯಕ್ಕೆ (Health) ಹೆಚ್ಚಿನ ಆದ್ಯತೆ ನೀಡಿ ಎಂದು ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಸದಸ್ಯ ಶಶಿಧರ ಕೋಸುಂಬೆ ಸೂಚನೆ ನೀಡಿದರು.
ಜಿಲ್ಲೆಯ ವಿವಿಧ ಶಾಲೆ,ವಸತಿ ಶಾಲೆ ಮತ್ತು ಅಂಗನವಾಡಿ (education news) ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಬೆಳಿಗ್ಗೆ ಶಹಾಪುರ ತಾಲೂಕಿನ ಬೇವಿನಹಳ್ಳಿ ಹತ್ತಿರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳ ಮತ್ತು ಸಿಬ್ಬಂದಿಗಳ ಹಾಜರಾತಿ, ದಾಖಲಾತಿ ಪರಿಶೀಲಿಸಿದರು. ನಂತರ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಶಿಕ್ಷಕರ ಕೊರತೆ, ಸ್ವಚ್ಛತೆ, ಸಲಹಾ ಪೆಟ್ಟಿಗೆ ಸೇರಿದಂತೆ ಮಾಹಿತಿ ಪಡೆದು ಕೂಡಲೇ ಈ ಕುರಿತು ವರದಿ ನೀಡುವಂತೆ ಸೂಚಿಸಿದರು.
ಇದನ್ನೂ ಓದಿ: Ind vs wi : ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಪಂದ್ಯ ನಡೆಯುವ ಪಿಚ್ ಹೇಗಿದೆ?
ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಗರ್ಭಿಣಿ ಸ್ತ್ರೀಯರ ವಿಚಾರಣೆ ಹಾಗೂ ನವಜಾತ ಶಿಶುವಿನ ಆರೈಕೆ ಘಟಕವನ್ನು ಪರಿಶೀಲಿಸಿದರು.
ಹಳಿಸಗರ ಕೇಂದ್ರ-2 ಅಂಗನವಾಡಿ ಕೇಂದ್ರಕ್ಕೆ ಸರಿಯಾದ ವಿದ್ಯುತ್, ಕುಡಿಯುವ ನೀರಿನ ಕೊರತೆಯ ಜತೆಗೆ ಒಂದು ತಿಂಗಳಿಂದ ಮಕ್ಕಳಿಗೆ ಮೊಟ್ಟೆ ನೀಡದೆ ಕೇಂದ್ರದಲ್ಲಿ ಸಂಗ್ರಹವಿತ್ತು. ಧಾನ್ಯಗಳ ಸರಬರಾಜು ಮಾಡದಿರುವುದನ್ನು ಅರಿತ ಅವರು ಹಾಜರಾತಿ ಪರಿಶೀಲಿಸಿದ ನಂತರ ವ್ಯತ್ಯಾಸ ಕಂಡ ಬಂದ ಹಿನ್ನಲೆ ನೋಟಿಸ್ ಜಾರಿಗೆ ಆದೇಶಿಸಿ ಸಭೆಗೆ ಹಾಜರಾಗಲು ಸೂಚಿಸಿದರು.
ಸುರಪುರ ತಾಲೂಕಿನ ಚಾಮನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಅಲ್ಲಿಂದ ನೂರಾರು ಮಕ್ಕಳು ಒಂದೇ ಕೊಠಡಿಯಲ್ಲಿ ಕುಳಿತು ಪಾಠ ಕೇಳುವ ಸ್ಥಿತಿಯನ್ನು ಅರಿತು ಹೆಚ್ಚಿನ ಕೋಣೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಒದಗಿಸಲು ತಿಳಿಸಿದ ಅವರು, ಬಳಿಕ ಕಸ್ತೂರಿ ಬಾ ವಸತಿ ಶಾಲೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವ ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆ, ಕುಡಿಯುವ ನೀರು, ಸ್ವಚ್ಛತೆ ಇಲ್ಲದೆ ಸುಮಾರು 50 ಮಕ್ಕಳಿಗೆ ತುರಿಕೆ ಕಂಡಬಂದ ಹಿನ್ನಲೆ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಲು ಸೂಚಿಸಿದರು.
ಇದನ್ನೂ ಓದಿ: Mysore Dasara : ಈ ಬಾರಿಯ ದಸರಾ ಮೆರವಣಿಗೆಯಲ್ಲಿ 5 ಗ್ಯಾರಂಟಿಗಳ ಸ್ತಬ್ಧಚಿತ್ರ ಗ್ಯಾರಂಟಿ, ಜತೆಗೆ ಏರ್ ಶೋ ಪ್ಲ್ಯಾನ್
ಇತ್ತೀಚೆಗೆ ಕೆಂಭಾವಿ ಪಟ್ಟಣದ ಕನ್ಯಾ ಪ್ರೌಢಶಾಲೆಯ ಮಧ್ಯಾಹ್ನ ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಹಾಗೂ ಶಾಲಾ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದು, ಬಿಸಿಯೂಟದ ಅಡುಗೆ ಕೋಣೆಯನ್ನು ವೀಕ್ಷಿಸಿದರು.
ಪ್ರಸ್ತುತ ಅಡುಗೆ ಸಿಬ್ಬಂದಿಗೆ ಅಡುಗೆಯ ಶುಚಿತ್ವ ಹಾಗೂ ಅಡುಗೆ ಕೋಣೆಯ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿ, ಮಕ್ಕಳಿಗೆ ಬಿಸಿಯೂಟ ಬಡಿಸುವುದಕಿಂತ ಮುಂಚೆ ಮುನ್ನೆಚರಿಕೆ ಕ್ರಮವಾಗಿ ಶಿಕ್ಷಕರು ಕಡ್ಡಾಯವಾಗಿ ರುಚಿ ನೋಡುವಂತೆ ಹೇಳಿ ನಂತರ ಮಕ್ಕಳೊಂದಿಗೆ ಕುಳಿತು ಸಾಮೂಹಿಕ ಬಿಸಿಯೂಟ ಸೇವಿಸಿದ ಅವರು, ಸಂಜೀವಿ ನಗರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ, ಗರ್ಭಿಣಿಯರ ಹಾಜರಾತಿ, ದಾಖಲಾತಿ ಹಾಗೂ ಆಹಾರ ಧಾನ್ಯ, ಆಟಿಕೆ ಸಾಮಗ್ರಿಗಳ ಕುರಿತಾಗಿ ಪರಿಶೀಲಿಸಿದರು.
ಸುರಪುರದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಬಾಲಕ ಬಾಲಕಿಯ ಪೂರ್ವ ಮೆಟ್ರಿಕ್ ಮತ್ತು ಮೆಟ್ರಿಕ್ ನಂತರ ವಸತಿ ನಿಲಯಗಳಿಗೆ ಭೇಟಿ ನೀಡಿ, ಕುಡಿಯುವ ನೀರು, ವಿದ್ಯುತ್, ಪೌಷ್ಟಿಕ ಆಹಾರ, ದಾಖಲಾತಿ, ಹಾಜರಾತಿ ಸ್ವಚ್ಛತೆ ಸೇರಿದಂತ ಮೂಲಸೌಕರ್ಯ ಪರಿಶೀಲಿಸಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ನಿರ್ವಹಿಸಿದ ಸ್ವಚ್ಛತೆ, ಸೌಕರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: Chandrayaan 3: ಚಂದ್ರನ ಪಥದತ್ತ ಚಂದ್ರಯಾನ-3 ನೌಕೆ; ಇಂದು ರಾತ್ರಿ ಮಹತ್ವದ ಪ್ರಕ್ರಿಯೆ!
ಈ ಸಂದರ್ಭದಲ್ಲಿ ಮಕ್ಕಳ ರಕ್ಷಣಾ ಅಧಿಕಾರಿ ಗೋವಿಂದ್ ರಾಠೋಡ, ಅಧಿಕಾರಿಗಳಾದ ಅನಿಲ್ ಕುಮಾರ್ ಕಾಂಬ್ಳೆ, ಚೆನ್ನಪ್ಪಗೌಡ ಜಿ. ಚೌದ್ರಿ ಹಾಗೂ ಸಿದ್ದಯ್ಯ ಎಸ್. ಹಿರೇಮಠ ಸೇರಿದಂತೆ ಇತರರಿದ್ದರು.