Site icon Vistara News

PSI Suspended | ವಕೀಲನ ಮೇಲೆ ಹಲ್ಲೆ ಆರೋಪ; ಹಾನಗಲ್ ಠಾಣೆ ಪಿಎಸ್ಐ ಅಮಾನತು

PSI Suspended

ಹಾವೇರಿ: ವಕೀಲನ ಮೇಲೆ ಹಲ್ಲೆ ಆರೋಪದಲ್ಲಿ ಹಾನಗಲ್ ಪೊಲೀಸ್ ಠಾಣೆ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ಅವರನ್ನು ಅಮಾನತು (PSI Suspended) ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಆದೇಶ ಹೊರಡಿಸಿದ್ದಾರೆ.

ಪಿಎಸ್‌ಐ ಶ್ರೀಶೈಲ ಪಟ್ಟಣಶೆಟ್ಟಿ ವಿರುದ್ಧ ವಕೀಲ ಶಿವು ತಳವಾರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಹಾನಗಲ್ ಪೋಲಿಸ್ ಠಾಣೆಯಲ್ಲಿ ಪಿಎಸ್‌ಐ ವಿರುದ್ಧ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ವಕೀಲರು ಸೇರಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈಗ ಅವರನ್ನು ಅಮಾನತು ಮಾಡಲಾಗಿದೆ.

ಗೆಜ್ಜಿಹಳ್ಳಿ ಗ್ರಾಮದಲ್ಲಿ ಸೋಮವಾರ ಮಂಜುನಾಥ ಬಾರ್ಕಿ ಎಂಬಾತನ ಹಲ್ಲೆ ನಡೆದಿತ್ತು. ಹಾನಗಲ್‌ ಠಾಣೆಗೆ ತೆರಳಿ ಘಟನೆಯ ಬಗ್ಗೆ ವಿಚಾರಿಸಿದಾಗ, ಪಿಎಸ್‌ಐ ಅವಾಚ್ಯವಾಗಿ ಏಕವಚನದಲ್ಲಿ ಬೈದು ಅವಮಾನ ಮಾಡಿದ್ದು, ಬಲಗೈ ಮುಷ್ಠಿಯಿಂದ ಮುಖದ ಮೇಲೆ ಗುದ್ದಿ ಕೊರಳಪಟ್ಟಿ ಹಿಡಿದು ನೂಕಿದ್ದಾರೆ. ಜತೆಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ವಕೀಲ ಶಿವಕುಮಾರ್‌ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಪಿಎಸ್‌ಐ ವಿರುದ್ಧ ಕ್ರಮ ಜರುಗಿಸಲಾಗಿದೆ.

ಇದನ್ನೂ ಓದಿ | Hassan Blast | ಮಹಿಳೆಯ ಹಿಂದೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡ, ಅವಳಿಗೆ ಪಾಠ ಕಲಿಸಲು ಮಿಕ್ಸಿ ಬಾಂಬ್‌ ಕಳಿಸಿದ!

Exit mobile version