Site icon Vistara News

Lalbagh Botanical Garden: ಆ.30ರಂದು ಸಾರ್ವಜನಿಕರಿಗೆ ಲಾಲ್‌ಬಾಗ್‌ ಪ್ರವೇಶವಿಲ್ಲ; ಯಾವ ಸಮಯದಲ್ಲಿ ನಿರ್ಬಂಧ?

Lalbagh in Bangalore

ಬೆಂಗಳೂರು: ಜಿ-20 ಶೃಂಗಸಭೆಯ ಗಣ್ಯರು ಭೇಟಿ‌ ನೀಡುವ ಹಿನ್ನೆಲೆಯಲ್ಲಿ ಲಾಲ್‌ಬಾಗ್‌ನಲ್ಲಿ (Lalbagh Botanical Garden) ಆಗಸ್ಟ್‌ 30ರಂದು ಮಧ್ಯಾಹ್ನ 2ಗಂಟೆಯಿಂದ ಸಂಜೆ 5ಗಂಟೆವರೆಗೆ ಸಾರ್ವಜನಿಕರು, ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಎಂದು ಲಾಲ್‌ಬಾಗ್ ತೋಟಗಾರಿಕಾ ಉಪ ನಿರ್ದೆಶಕರು ತಿಳಿಸಿದ್ದಾರೆ. ವಿದೇಶಿ ಗಣ್ಯರು ಉದ್ಯಾನವನಕ್ಕೆ ಆಗಮಿಸುವುದರಿಂದ ಭದ್ರತಾ ದೃಷ್ಟಿಯಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಕೋರಿದ್ದಾರೆ.

ಇದನ್ನೂ ಓದಿ | Lalbagh Tour : ಸಸ್ಯಕಾಶಿ ಲಾಲ್‌ಬಾಗ್‌ನೊಳಗೆ ಏನೇನಿದೆ? ಮರೆಯದೆ ನೋಡಿ…

ಕೆಂಗೇರಿ-ಚಲ್ಲಘಟ್ಟ, ಬೈಯಪ್ಪನಹಳ್ಳಿ- ಕೆಆರ್‌ಪುರಂ ಮೆಟ್ರೋ ಶೀಘ್ರ ಲೋಕಾರ್ಪಣೆ

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಬಿಎಂಟಿಸಿಯಷ್ಟೇ (Bmtc bus) ಮೆಟ್ರೋ ರೈಲು (Metro rail) ಕೂಡ ಜನರ ಜೀವನಾಡಿಯಾಗಿದೆ. ಟ್ರಾಫಿಕ್‌ ಕಿರಿಕಿರಿಗೆ (Bengaluru Traffic) ಬಹುತೇಕ ದೂರ ಪ್ರಯಾಣ ಮಾಡುವ ಮಂದಿ ಮೆಟ್ರೋ (Bengaluru Metro) ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ಸದ್ಯ ಮೆಟ್ರೋ ಮಾರ್ಗಗಳ ವಿಸ್ತರಣೆಗೆ ಬಿಎಂಆರ್‌ಸಿಎಲ್‌ (BMRCL) ಒತ್ತು ನೀಡುತ್ತಿದ್ದು, ನೇರಳೆ ಮಾರ್ಗದ (Purple metro line) ಪ್ರಯಾಣಿಕರಿಗೆ ಸಿಹಿ ಸುದ್ದಿಗೆ ಪ್ಲ್ಯಾನ್‌ ಮಾಡಿದೆ.

ಬೆಂಗಳೂರಲ್ಲಿ ಬಿಎಂಆರ್‌ಸಿಎಲ್‌ ಮತ್ತೊಂದು ಹಂತದ ಮೆಟ್ರೋ ಸಂಚಾರಕ್ಕೆ ಸಜ್ಜಾಗುತ್ತಿದೆ. ಬೈಯಪ್ಪನಹಳ್ಳಿ-ಕೆಆರ್‌ಪುರಂ, ಕೆಂಗೇರಿ-ಚಲ್ಲಘಟ್ಟ ಮಾರ್ಗದ ಮೆಟ್ರೋ ಸಂಚಾರಕ್ಕೆ ಸಿದ್ಧವಾಗುತ್ತಿದೆ. ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ವಿಸ್ಕೃತ ಮೆಟ್ರೋ ಮಾರ್ಗ ಸೇವೆಗೆ ಲಭ್ಯವಾಗಲಿದೆ ಎಂದು ಬಿಎಂಆರ್​ಸಿಎಲ್​ನ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಈಗಾಗಲೇ ಸಂಪೂರ್ಣ ಕಾಮಗಾರಿ ಮುಗಿಸಿ ರೈಲಿನ ಟ್ರಯಲ್ ರನ್ ನಡೆಸಲಾಗುತ್ತಿದೆ.
ಒಂದು ವಾರ ತಪಾಸಣೆ

ಇದನ್ನೂ ಓದಿ | Gruha Lakshmi Scheme : ನಾಳೆ ಗೃಹಲಕ್ಷ್ಮಿಯರ ಕೈಗೆ ಬರುತ್ತೆ 2000 ರೂ. ನಿಮ್ಗೂ ಬೇಕಾದರೆ ಕೂಡಲೇ ಹೀಗೆ ಮಾಡಿ

ಸೆಪ್ಟೆಂಬರ್ 7ರ ಬಳಿಕ ಸುರಕ್ಷತಾ ಆಯುಕ್ತರು ಒಂದು ವಾರಗಳ ಕಾಲ ವಿಸ್ತೃತ ಮೆಟ್ರೋ ಮಾರ್ಗ ತಪಾಸಣೆ ನಡೆಸಲಿದ್ದಾರೆ. ತಪಾಸಣೆ ಕಾರ್ಯ ಮುಗಿದ ಬಳಿಕ 43 ಕಿ.ಮೀ ಉದ್ದದ ಸಂಪೂರ್ಣ ನೇರಳೆ ಮಾರ್ಗ ಸಂಚಾರ ಮುಕ್ತವಾಗಲಿದೆ. ತಪಾಸಣೆ ಬಳಿಕ ಮೆಟ್ರೋ ಮಾರ್ಗಗಳ ಉದ್ಘಾಟನೆಗೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಸೆಪ್ಟೆಂಬರ್ ಕೊನೆಯ ವಾರದ ಒಳಗೆ ಎರಡು ವಿಸ್ತೃತ ಮಾರ್ಗ ಸಂಚಾರಕ್ಕೆ ಲಭ್ಯವಾಗಲಿದೆ.

ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ಬಳಿಕವಂತೂ ಮೆಟ್ರೋಗೆ ಬೇಡಿಕೆ ಹೆಚ್ಚಾಗಿದ್ದು, ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಹೀಗಾಗಿ ವಿಸ್ತೃತ ಮಾರ್ಗಗಳಿಗೆ ಪ್ರಯಾಣಿಕರಿಗೆ ನಿರೀಕ್ಷೆ ಹೆಚ್ಚಾಗಿದೆ. ನೇರಳೆ ಸಂಪೂರ್ಣ ಮಾರ್ಗವನ್ನು ಶೀಘ್ರ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಲು ಬಿಎಂಆರ್‌ಸಿಎಲ್‌ ಚಿಂತನೆ ಮಾಡಿದೆ.

Exit mobile version