Site icon Vistara News

PUC Supplementary Exams 2023: ದ್ವಿತೀಯ ಪಿಯು ಪೂರಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ; ಪರೀಕ್ಷೆ ಯಾವಾಗಿಂದ?

II PUC supplementary exam from May 22 to June 2

II PUC supplementary exam from May 22 to June 2

ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ 2023ರ ಪರಿಷ್ಕೃತ ವೇಳಾಪಟ್ಟಿಯು ಪ್ರಕಟವಾಗಿದೆ. ಈ ಮೊದಲು ಮೇ 22 ರಿಂದ ಜೂನ್ 2ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ (2nd PUC Supplementary Exams) ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ಮುಂದಾಗಿತ್ತು.

ಆದರೆ, ಸಿಇಟಿ ಮೂಲಕ ಕನ್ನಡ ಭಾಷಾ ಪರೀಕ್ಷೆಯನ್ನು ಮೇ 22ರಂದು ನಡೆಸುತ್ತಿರುವುದರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಯನ್ನು ಪರಿಷ್ಕರಿಸಿದೆ. ಈಗ ಇದೇ ಮೇ 23 ರಿಂದ ಜೂನ್‌ 3ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ಪರೀಕ್ಷಾ ಸಮಯವಾಗಿದ್ದು, 15 ನಿಮಿಷ ಪ್ರಶ್ನೆ ಪತ್ರಿಕೆ ಓದಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಂಡಳಿಯ ವೆಬ್‌ಸೈಟ್‌ Kseab.karnataka.gov.in ರಲ್ಲಿ ವೀಕ್ಷಿಸಬಹುದಾಗಿದೆ.

ಪೂರಕ ಪರೀಕ್ಷೆ ವೇಳಾಪಟ್ಟಿ ಹೀಗಿದೆ

ಮೇ 23- ಕನ್ನಡ, ಅರೇಬಿಕ್
ಮೇ 24- ಐಚ್ಛಿಕ ಕನ್ನಡ, ರಸಾಯನಶಾಸ್ತ್ರ, ಮೂಲ ಗಣಿತ
ಮೇ 25 – ಇಂಗ್ಲಿಷ್ (ಮಧ್ಯಾಹ್ನ- ಐಟಿ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆ್ಯಂಡ್ ವೆಲ್‌ನೆಸ್)
ಮೇ 26- ಸಮಾಜಶಾಸ್ತ್ರ , ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
ಮೇ 27- ಇತಿಹಾಸ, ಸಂಖ್ಯಾಶಾಸ್ತ್ರ,
ಮೇ 29- ಹಿಂದಿ (ಮಧ್ಯಾಹ್ನ-ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್),
ಮೇ 30- ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೌತ ಶಾಸ್ತ್ರ
ಮೇ 31- ಭೂಗರ್ಭಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ
ಜೂ.1- ರಾಜ್ಯಶಾಸ್ತ್ರ, ಗಣಿತ ಶಾಸ್ತ್ರ
ಜೂ.2- ತರ್ಕಶಾಸ್ತ್ರ, ಹಿಂದೂಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ
ಜೂ.3- ಅರ್ಥಶಾಸ್ತ್ರ, ಜೀವಶಾಸ್ತ್ರ

ಪೂರಕ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ
Exit mobile version