ಶಿವಮೊಗ್ಗ: ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸೈನಿಕ ಪಾರ್ಕ್‌ನಲ್ಲಿ ಸೈನಿಕರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮುಂಬತ್ತಿ ಹಚ್ಚಿ, ಪುಲ್ವಾಮಾದಲ್ಲಿ ಹುತಾತ್ಮರಾದ (Pulwama Attack) ಕರ್ತವ್ಯ ನಿರತ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 40 ಜನ ಹುತಾತ್ಮ ಯೋಧರಿಗೆ ಮಂಗಳವಾರ (ಫೆ.೧೪) ಗೌರವಾರ್ಪಣೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎನ್ ರಮೇಶ್, “ಯುದ್ಧವಿಲ್ಲದೆ 40ಕ್ಕೂ ಹೆಚ್ಚು ಸೈನಿಕರು ಬಾಂಬ್ ದಾಳಿಗೆ ಒಳಗಾಗಿ ಹುತಾತ್ಮರಾಗಿ ಮೂರು ವರ್ಷ ಕಳೆದರೂ ಪುಲ್ವಾಮಾ ದಾಳಿಯ ಕುರಿತು ನಿಖರವಾದ ಸತ್ಯ ಇಂದಿಗೂ ಹೊರ ಬಂದಿಲ್ಲ. ಮಡಿದ ಸೈನಿಕರ ಕುಟುಂಬಗಳಿಗೆ ಸೂಕ್ತ ನ್ಯಾಯ ಸಿಕ್ಕಿಲ್ಲ. ಆ ಕುಟುಂಬಗಳು ಈಗಲೂ ಕಣ್ಣೀರಿನಲ್ಲಿ ಬದುಕು ಸಾಗಿಸುತ್ತಿವೆ. ಆದರೆ, ಇದನ್ನೇ ಬಳಸಿಕೊಂಡು ಚುನಾವಣೆ ಗೆದ್ದವರು ಇಂದು ದೇಶವನ್ನು ಮತ್ತೊಂದಿಷ್ಟು ದಿವಾಳಿ ಮಾಡಲು ಹೊರಟಿದ್ದಾರೆ” ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್ ಮಾತನಾಡಿ, “ಅತ್ಯಂತ ಸೂಕ್ಷ್ಮವಾದ ಮತ್ತು ಸಾಕಷ್ಟು ಭದ್ರತೆ ಇರುವ ಪ್ರದೇಶದಲ್ಲಿ 350Kg RDX ಬಾಂಬ್ ಹೊತ್ತ ಕಾರು ಹೇಗೆ ಬಂತು ಎನ್ನುವ ಅನುಮಾನಕ್ಕೆ ಇಂದಿಗೂ ಸ್ಪಷ್ಟತೆ ಸಿಕ್ಕಿಲ್ಲ. ಬರೀ ಸಂತಾಪ ಸೂಚಿಸಿದರೆ ಸಾಲದು, ವೀರ ಯೋಧರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಯುವಕರು ಹೋರಾಟಕ್ಕಿಳಿದು ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರದ ಬಳಿ ನ್ಯಾಯ ಕೇಳಬೇಕು” ಎಂದು ಕರೆ ನೀಡಿದರು.
ಇದನ್ನೂ ಓದಿ: Areca News: ಅಡಿಕೆ ಆರೋಗ್ಯಕ್ಕೆ ಮಾರಕವಲ್ಲ, ಔಷಧೀಯ ಗುಣವಿದೆ: ರಾಮಯ್ಯ ವಿವಿ ಸಂಶೋಧನೆ
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ ಗಿರೀಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್‌ನ ಎಸ್. ಕುಮಾರೇಶ್, ರಾಜ್ಯ ಕಾರ್ಯದರ್ಶಿ ಆರ್. ಕಿರಣ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ.ರಾಹುಲ್, ರಾಕೇಶ್, ಇರ್ಫಾನ್, ಯುವ ಕಾಂಗ್ರೆಸ್ ನಗರ ಉಪಾಧ್ಯಕ್ಷ ಕೆ.ಎಲ್. ಪವನ್, ಪ್ರಮುಖರಾದ ತಂಗರಾಜ್, ಮಸ್ತಾನ್, ಮೋಹನ್ ಸೋಮನಕೊಪ್ಪ, ಎನೋಶ್, ಅಹದ್ ಸೋಮಿನಕೊಪ್ಪ, ವಿನಯ್ ಮೆಂಡಿಸ್, ಇನ್ಶಲ್, ಅನ್ವರ್, ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಇದನ್ನೂ ಓದಿ: Adichunchanagiri mutt : ಭವ್ಯ ಕರ್ನಾಟಕ ನಿರ್ಮಾಣದಲ್ಲಿ ಆದಿಚುಂಚನಗಿರಿ ಮಠದ ಪಾತ್ರ ದೊಡ್ಡದು: ಸಿಎಂ ಬೊಮ್ಮಾಯಿ