Site icon Vistara News

Puneeth Rajkumar : ಅಭಿಮಾನಿ ರಕ್ತದಲ್ಲಿ ಮೂಡಿದ ಅಪ್ಪು!

Blood art portrait painting

ಬೆಂಗಳೂರು: ಅಪ್ಪು ಈ ಹೆಸರೇ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ ಅಗಲಿ 1 ವರ್ಷವಾದರೂ ಅವರ ಮೇಲಿನ ಅಭಿಮಾನ ಕಿಂಚಿತ್ತು ಕಡಿಮೆ ಆಗಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಪುನೀತ್‌ ಹೆಸರು ಕೇಳಿ ಬರುತ್ತಲೇ ಇರುತ್ತೆ. ಜತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬ ಮಾತನ್ನು ಪುನೀತ್‌ ಅಭಿಮಾನಿಗಳು (Puneeth Rajkumar) ಅಕ್ಷರಶಃ ನಿಜ ಮಾಡಿದ್ದಾರೆ.

ಪುನೀತ್‌ವೊಟ್ಟಿಗೆ ಫೋಟೊ ತೆಗೆಸಿಕೊಂಡಿದ್ದ ಚರಣ್‌

ಅಪ್ಪು ನಮ್ಮೊಂದಿಗೆ ಇಲ್ಲ ಎಂಬ ಭಾವನೆ ಬಾರದಂತೆ ತಮ್ಮ ಪ್ರತಿ ಖುಷಿಯ ಸಮಯದಲ್ಲೂ ನೆನಪು ಮಾಡಿಕೊಳ್ಳುತ್ತಿದ್ದಾರೆ. ‌ಪುನೀತ್‌ ರಾಜುಕುಮಾರನ ಅಪ್ಪಟ ಅಭಿಮಾನಿಯೊಬ್ಬ ರಕ್ತದಲ್ಲಿ ಅಪ್ಪು ಚಿತ್ರ (Blood art portrait painting) ಬರೆಸಿಕೊಂಡಿದ್ದಾರೆ. ಇದು ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ರಕ್ತದಲ್ಲಿ ಮೂಡಿ ಬಂತು ಅಪ್ಪು ಚಿತ್ರ

ಬೆಂಗಳೂರಿನ ಚಾಮರಾಜಪೇಟೆಯ ಅಪ್ಪು ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷ ಚರಣ್ ಪುನೀತ್ ವೀರಾಭಿಮಾನಿ ಎಂಬುವವರು ತಮ್ಮ ಅಭಿಮಾನವನ್ನು ಈ ರೀತಿಯಲ್ಲಿ ತೋರಿದ್ದಾರೆ. ಚರಣ್‌ ತಾವು ಅಪ್ಪು ಜತೆಗೆ ತೆಗಿಸಿಕೊಂಡಿದ್ದ ಫೋಟೊದಲ್ಲಿರುವಂತೆ ರಕ್ತದಲ್ಲಿ ಚಿತ್ರ ಬಿಡಿಸಿ ಫೋಟೊ ಫ್ರೇಮ್‌ ಮಾಡಿಸಿದ್ದಾರೆ.

ಅಪ್ಪು ಅಭಿಮಾನಿ ಚರಣ್‌

ಟ್ರೆಂಡ್‌ ಆಯ್ತು ಬ್ಲಡ್‌ ಫೋಟೊ ಫ್ರೇಮ್‌

ಇತ್ತೀಚೆಗೆ ರಕ್ತದಲ್ಲಿ ಫೋಟೊ ಬಿಡಿಸಿ ಅಭಿಮಾನ ತೋರುವುದು ಟ್ರೇಂಡ್ ಆಗುತ್ತಿದೆ. ಇದು ಕೇವಲ ಸಿನಿಮಾ ಹೀರೋಗಳಿಗೆ ಮಾತ್ರ ಸೀಮಿತವಾಗಿಲ್ಲ. ಕೆಲವು ಪ್ರೇಮಿಗಳು, ಸ್ನೇಹಿತರು, ಆತ್ಮೀಯರು ಈ ರೀತಿ ರಕ್ತದಲ್ಲಿ ತಮ್ಮಿಷ್ಟದವರ ಫೋಟೊವನ್ನು ಬ್ಲಡ್‌ನಲ್ಲಿ ಪೇಟಿಂಗ್‌ ಮಾಡಿಸುತ್ತಿದ್ದಾರೆ.

ಅಭಿಮಾನಿ ರಕ್ತದಲ್ಲಿ ಮೂಡಿಬಂತು ಅಪ್ಪು ಚಿತ್ರ

ರಕ್ತದಲ್ಲಿ ಸುದೀಪ್ ಚಿತ್ರ ಬಿಡಿಸಿಕೊಂಡ ಮಹಿಳಾ ಅಭಿಮಾನಿ

ಇತ್ತೀಚೆಗೆ ಶಿವಮೊಗ್ಗದ ವೈಷ್ಣವಿ ಎಂಬುವವರು ತಮ್ಮ ರಕ್ತದಲ್ಲಿ ಸುದೀಪ್ ಅವರ ಫೋಟೊ ಬಿಡಿಸಿಕೊಂಡಿದ್ದರು. ಇದೀಗ ಅಪ್ಪು ಅಭಿಮಾನಿಯೊಬ್ಬರು ಪುನೀತ್‌ ಒಟ್ಟಿಗೆ ಇರುವ ಫೋಟೊವನ್ನು ರಕ್ತದಲ್ಲಿ ಬಿಡಿಸಿಕೊಂಡಿದ್ದರು. ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ (Kichcha Sudeepa) ಹಲವು ಸಿನಿಮಾಗಳಲ್ಲಿ ನಟಿಸಿ ಜನಮೆಚ್ಚುಗೆ ಪಡೆದಿದ್ದಾರೆ.

ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಸುದೀಪ್ ಹೆಸರುವಾಸಿ. ಅವರಿಗೆ ತಮ್ಮದೇ ಆದ ಅಭಿಮಾನಿಗಳ ಬಳಗವಿದೆ. ಮಹಿಳಾ ಅಭಿಮಾನಿಯ ಹುಚ್ಚು ಪ್ರೀತಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಶಿವಮೊಗ್ಗದ ವೈಷ್ಣವಿ ಎಂಬುವರು ತಮ್ಮದೇ ರಕ್ತದಲ್ಲಿ ಸುದೀಪ್ ಅವರ ಚಿತ್ರ ಬಿಡಿಸಿಕೊಂಡಿದ್ದಾರೆ. ಇದನ್ನು ಫ್ಯಾನ್ಸ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸುದೀಪ್ ಅವರು ಕೂಡ ಇದನ್ನು ರಿಟ್ವೀಟ್ ಮಾಡಿಕೊಂಡಿದ್ದು, ಕೈ ಮುಗಿಯುವ ಇಮೋಜಿ ಹಾಕಿದ್ದಾರೆ.

ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪರ ಹಾಗೂ ವಿರೋಧ ಚರ್ಚೆಗಳು ನಡೆದಿದೆ. ಮೊಟ್ಟೆ ಹಾಗೂ ಮಾಂಸಹಾರ ಸೇವಿಸದ ಹುಡುಗಿ ರಕ್ತದಲ್ಲಿ ಚಿತ್ರ ಬಿಡಿಸಿಕೊಂಡಿದ್ದಾರೆ ಗ್ರೇಟ್ ಎಂದು ವಿಡಿಯೊ ವೈರಲ್‌ ಆಗುತ್ತಿದೆ. ಇನ್ನು ಈ ರೀತಿ ರಕ್ತದಲ್ಲಿ ಚಿತ್ರ ಬಿಡಿಸಿ ಅಭಿಮಾನ ತೋರುವುದು ಅನೇಕರಿಗೆ ಇಷ್ಟ ಆಗುವುದಿಲ್ಲ. ರಕ್ತ ಅತ್ಯಮೂಲ್ಯವಾದುದ್ದು. ಅದನ್ನು ಈ ರೀತಿ ಅಭಿಮಾನ ತೋರಿಸಲು ಬಳಕೆ ಮಾಡುವುದು ಸರಿ ಅಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version