Site icon Vistara News

Python attack | ಜಿಂಕೆ ನುಂಗಿದ ಹೆಬ್ಬಾವಿಂದ ವ್ಯಕ್ತಿ ಮೇಲೆ ದಾಳಿ; ಬಡಿದು ಕೊಂದ ಗ್ರಾಮಸ್ಥರು

snake death

ಕೋಲಾರ: ಇಲ್ಲಿನ ಶ್ರೀನಿವಾಸಪುರ ತಾಲೂಕಿನ ಕೊರಕೋನಪಲ್ಲಿಯಲ್ಲಿ ಬೃಹತ್‌ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದೆ. ಹೆಬ್ಬಾವು ಜಿಂಕೆಯೊಂದನ್ನು ನುಂಗಿದ್ದು, ಅದನ್ನು ರಕ್ಷಣೆ ಮಾಡಲು ಬಂದ ವ್ಯಕ್ತಿಯ ಮೇಲೆ ದಾಳಿ (Python attack) ಮಾಡಿರುವ ಘಟನೆ ನಡೆದಿದೆ.

ಸುಮಾರು 20 ಅಡಿ ಉದ್ದದ ಅಂದಾಜು 75 ಕೆಜಿಯ ಬೃಹತ್ ಗಾತ್ರದ ಹೆಬ್ಬಾವು ಕೊರಕೋನಪಲ್ಲಿಯ ನಾಗರಾಜು ಎಂಬುವವರ ಮೇಲೆ ದಾಳಿ ಮಾಡಿದೆ. ಹೆಬ್ಬಾವು ದಾಳಿಗೆ ಒಳಗಾದ ವ್ಯಕ್ತಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತ ಹೆಬ್ಬಾವಿನ ದಾಳಿಯಿಂದ ಭಯಗೊಂಡ ಗ್ರಾಮದ ಕೆಲವರು ಹೆಬ್ಬಾವನ್ನೇ ಸಾಯಿಸಿದ್ದಾರೆ. ಸ್ಥಳಕ್ಕೆ ಶ್ರೀನಿವಾಸಪುರ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ | Pakistan Taliban | ಕದನ ವಿರಾಮ ಅಂತ್ಯ, ದಾಳಿ ಎದುರಿಸಿ! ಪಾಕಿಸ್ತಾನಕ್ಕೆ ತೆಹ್ರೀಕ್-ಇ-ತಾಲಿಬಾನ್ ಎಚ್ಚರಿಕೆ

Exit mobile version