Site icon Vistara News

Radhika Pandit: ಯಶ್‌-ರಾಧಿಕಾ ಪಂಡಿತ್ ಪರ್ಸನಲ್ ಫೋಟೊಗ್ರಾಫರ್ ರಿವೀಲ್!

Yash-Radhika Pandit's personal photographer revealed!

ಬೆಂಗಳೂರು: ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಳ್ಳುವ ನಟಿ ರಾಧಿಕಾ ಪಂಡಿತ್‌ ಅವರು ಈ ಬಾರಿ ತಮ್ಮ ಫೋಟೊಗ್ರಾಫರ್ ಮುಖವನ್ನು ರಿವೀಲ್ ಮಾಡಿದ್ದಾರೆ. ಪತಿ ಯಶ್ ಜತೆ ರಾಧಿಕಾ ಪಂಡಿತ್‌ (Radhika Pandit) ವೆಕೇಷನ್‌ ಮೋಡ್‌ಗೆ ಜಾರಿದ್ದು, ಈ ಬಾರಿ ಫೋಟೊಗಳನ್ನು ಹಂಚಿಕೊಳ್ಳುವ ಜತೆಗೆ ತಮ್ಮ ಪರ್ಸನಲ್​ ಫೋಟೋಗ್ರಾಫರ್ ಯಾರೆಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಇತೀಚೆಗಷ್ಟೇ ಗೋವಾದಲ್ಲಿ ಟಾಕ್ಸಿಕ್ ಚಿತ್ರದ ಶೂಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದ ಯಶ್ ಅವರು ಇದೀಗ ಫ್ಯಾಮಿಲಿ ಜತೆ ಕಾಲ ಕಳೆಯುತ್ತಿರುವುದು ಕಂಡುಬಂದಿದೆ. ಸಮಯ ಸಿಕ್ಕಾಗೆಲ್ಲಾ ಫ್ಯಾಮಿಲಿ ಟ್ರಿಪ್ ಮಾಡುವ ಮೂಲಕ ನಟಿ ರಾಧಿಕಾ ಪಂಡಿತ್ ಎಂಜಾಯ್ ಮಾಡುತ್ತಿರುತ್ತಾರೆ. ಇನ್ನು ಯಶ್​ ಕೂಡ ಮಕ್ಕಳ ಜೊತೆ ಕಾಲ ಕಳೆಯಲು ಹೆಚ್ಚು ಇಷ್ಟಪಡುತ್ತಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಪಂಡಿತ್ ಅವರು ಫ್ಯಾಮಿಲಿ ಫೋಟೊಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ರಾಧಿಕಾ ಪಂಡಿತ್ ಹಾಗೂ ಯಶ್​ ಫೋಟೊಗಳನ್ನು ಮಗಳು ಐರಾ ಕ್ಲಿಕ್ ಮಾಡುತ್ತಿದ್ದಾಳೆ. ಅದಕ್ಕೆ, ಇವರೇ ನೋಡಿ ಮೈ ನ್ಯೂ ಪರ್ಸನಲ್​ ಫೋಟೋಗ್ರಾಫರ್ ಎಂದು ಮಗಳ ಬಗ್ಗೆ ನಟಿ ರಾಧಿಕಾ ಪಂಡಿತ್ ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ. ಇನ್ನು ಫ್ಯಾಮಿಲಿ ಜತೆ ಇರುವ ಯಶ್‌ರನ್ನು ನೋಡಿದ ಫ್ಯಾನ್ಸ್‌, ನಮ್ಮ ಬಾಸ್ ಎಷ್ಟೇ ಬ್ಯುಸಿ ಇದ್ದರೂ ʼಫ್ಯಾಮಿಲಿ ಮ್ಯಾನ್ʼ ಎಂದು ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ | Amazon Prime Video: ಪ್ರೈಮ್ ವಿಡಿಯೊ ಮತ್ತೊಂದು ಸಾಹಸ; 70 ಹೊಸ ಪ್ರಾಜೆಕ್ಟ್​ಗಳ ಘೋಷಣೆ!

ಮನೆ, ಸಂಸಾರ ಎಂದು ಬ್ಯುಸಿಯಾಗಿರುವ ರಾಧಿಕಾ ಪಂಡಿತ್, ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿರುತ್ತಾರೆ. ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ ರಾಧಿಕಾ ಪಂಡಿತ್, ಅನೇಕ ಸಿನಿಮಾಗಳಲ್ಲಿ ನಟಿ ಸೈ ಎನಿಸಿಕೊಂಡಿದ್ದಾರೆ.

ಗೋವಾದಲ್ಲಿ ಜ್ಯೂ. ಎನ್‌ಟಿಆರ್ ಸಿನಿಮಾ ಶೂಟಿಂಗ್‌; ಲೀಕ್‌ ಆಯ್ತು ದೃಶ್ಯ!

ಬೆಂಗಳೂರು: ಈ ನಡುವೆ ಟಾಲಿವುಡ್‌ ಸಿನಿಮಾಗಳ ಶೂಟಿಂಗ್‌ ದೃಶ್ಯಗಳು (Jr NTR) ಲೀಕ್‌ ಆಗುವುದು ಸರ್ವೇ ಸಾಮಾನ್ಯವಾಗಿದೆ. ರಾಮ್‌ಚರಣ್‌ ಅವರ `ಗೇಮ್‌ ಚೇಂಜರ್‌’ ಮೂರು ಬಾರಿ ಈ ಸಮಸ್ಯೆಗೆ ಗುರಿಯಾಯ್ತು. ಚಿತ್ರತಂಡ ಕೇಸ್‌ ಕೂಡ ದಾಖಲಿಸಿತ್ತು. ಆದರೀಗ ಜ್ಯೂನಿಯರ್ ಎನ್‌ಟಿಆರ್ ಅವರ ʻದೇವರʼ ಸಿನಿಮಾ(Devara: Part 1) ದೃಶ್ಯವೊಂದು ಲೀಕ್‌ ಆಗಿದೆ. ಗೋವಾದಲ್ಲಿ (Devara clip leaked) ಚಿತ್ರೀಕರಣ ನಡೆಸುತ್ತಿದ್ದು, ಅಭಿಮಾನಿಯೊಬ್ಬರು ದೂರದಿಂದ ತೆಗೆದ ಸೆಟ್‌ಗಳ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಜ್ಯೂನಿಯರ್ ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕೊರಟಾಲ ಶಿವ (Koratala Siva) ನಿರ್ದೇಶನದ ದೇವರ: ಭಾಗ 1 ಸಿನಿಮಾ ಶೂಟಿಂಗ್‌ ಭರದಿಂದ ಸಾಗುತ್ತಿದೆ. ಗೋವಾದಲ್ಲಿ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ಅಭಿಮಾನಿಯೊಬ್ಬರು ಗೋವಾದಲ್ಲಿ ಹೊರಾಂಗಣದಲ್ಲಿ ತೆಗೆದ ಜ್ಯೂನಿಯರ್ ಎನ್‌ಟಿಆರ್ ಅವರ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ, ನಟ ಅಲೆಯ ಹತ್ತಿರ ನಡೆದಾಡುವುದನ್ನು ನೋಡಬಹುದು. ಸೋರಿಕೆಯಾದ ವೀಡಿಯೊ ಹೆಚ್ಚು ಏನನ್ನೂ ಬಹಿರಂಗಪಡಿಸದಿದ್ದರೂ, ಬಹುತೇಕ ಸಿನಿಮಾದ ದೃಶ್ಯಗಳು ಸಮುದ್ರದ ಬಳಿ ನಡೆಯಲಿದೆ ಎನ್ನಲಾಗಿದೆ.

ಇದನ್ನೂ ಓದಿ: Banners Of Jr NTR: ಜ್ಯೂ. ಎನ್‌ಟಿಆರ್‌ ಬ್ಯಾನರ್, ಫ್ಲೆಕ್ಸ್ ಕಿತ್ತು ಬಿಸಾಕಿ ಎಂದ ಬಾಲಯ್ಯ!

ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣಕ್ಕಾಗಿ ‘ದೇವರ’ ತಂಡ ಗೋವಾದಲ್ಲಿದೆ. ಅಲ್ಲಿರುವಾಗಲೇ ಒಂದು ಹಾಡಿನ ಚಿತ್ರೀಕರಣವನ್ನೂ ಮಾಡಲಿದ್ದಾರೆ ನಿರ್ದೇಶಕರು. 2023ರಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಿದ್ದು, ಹೆಚ್ಚಾಗಿ ಹೈದರಾಬಾದ್ ಮತ್ತು ಗೋವಾದಲ್ಲಿ ವಿಶೇಷವಾಗಿ ನಿರ್ಮಿಸಲಾದ ಸೆಟ್‌ಗಳಲ್ಲಿ ಚಿತ್ರದ ಚಿತ್ರೀಕರಣವನ್ನು ನಡೆಸಲಾಗಿದೆ. ಬಹುತೇಕ ಚಿತ್ರೀಕರಣವು ಡಿಸೆಂಬರ್‌ನೊಳಗೆ ಮುಕ್ತಾಯಗೊಂಡಿದೆ, ಕೆಲವು ಪ್ರಮುಖ ದೃಶ್ಯಗಳು ಮತ್ತು ಹಾಡುಗಳ ಚಿತ್ರೀಕರಣ ಮಾತ್ರ ಉಳಿದಿದೆ.

ಮೊದಲ ಭಾಗಕ್ಕೆ ‘ದೇವರ: ಭಾಗ 1’ ಎಂದು ಹೆಸರಿಡಲಾಗಿದೆ. ಈ ಮುಂಚೆ ಚಿತ್ರತಂಡ ಏಪ್ರಿಲ್ 5ರಂದು ಸಿನಿಮಾ ರಿಲೀಸ್‌ ಡೇಟ್‌ವನ್ನು ಘೋಷಿಸಿತ್ತು. ಜ್ಯೂನಿಯರ್‌ ಎನ್‌ಟಿಆರ್‌, ಸೈಫ್ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ದೇವರ’ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದಾರೆ. 2016ರಲ್ಲಿ ಇವರು ಜನತಾ ಗ್ಯಾರೇಜ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ಕೂಡ ಜ್ಯೂನಿಯರ್ ಎನ್​ಟಿಆರ್ ನಾಯಕನಾಗಿದ್ದರು. ಅದಾದ ಮೇಲೆ ಕೊರಟಾಲ ಶಿವ ಅವರೊಟ್ಟಿಗೆ ಜ್ಯೂ.ಎನ್​ಟಿಆರ್ ಯಾವುದೇ ಸಿನಿಮಾವನ್ನೂ ಮಾಡಿರಲಿಲ್ಲ.

ಇದನ್ನೂ ಓದಿ: Jr NTR: ಹೊಸ ವರ್ಷಕ್ಕೆ ಪೋಸ್ಟರ್‌ ಹಂಚಿಕೊಂಡು ಗುಡ್‌ನ್ಯೂಸ್‌ ಕೊಟ್ಟ ಜ್ಯೂನಿಯರ್‌ ಎನ್‌ಟಿಆರ್

‘ದೇವರ’ ಸಿನಿಮಾದಲ್ಲಿ ಜ್ಯೂನಿಯರ್ ಎನ್​ಟಿಆರ್​ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಯೂ ಇದೆ. ಅಪ್ಪ-ಮಗ ಎರಡೂ ಪಾತ್ರದಲ್ಲಿ ಇವರೇ ಅಭಿನಯ ಮಾಡಲಿದ್ದಾರಂತೆ. ಇದೊಂದು ಪಕ್ಕಾ ಆ್ಯಕ್ಷನ್​ ಚಿತ್ರದಂತೆ ಕಾಣಿಸುತ್ತಿದೆ. ಯುವಸುಧಾ ಆರ್ಟ್ಸ್ ಮತ್ತು ಜ್ಯೂನಿಯರ್‌ ಎನ್‌ಟಿಆರ್‌ ಆರ್ಟ್ಸ್ ಈ ಚಿತ್ರವನ್ನು ನಿರ್ಮಿಸಿದ್ದು, ನಂದಮೂರಿ ಕಲ್ಯಾಣ್ ರಾಮ್ ಅವರು ಪ್ರಸ್ತುತಪಡಿಸಿದ್ದಾರೆ.

ಇದನ್ನೂ ಓದಿ | Ram Charan: ಸೆಟ್ಟೇರಿತು ರಾಮ್ ಚರಣ್ 16ನೇ ಸಿನಿಮಾ; ಶ್ರೀದೇವಿ ಪುತ್ರಿ ಹಂಗಾಮ ಶುರು!

ಈ ಚಿತ್ರದ OTT ಹಕ್ಕುಗಳನ್ನು ಸ್ಟ್ರೀಮಿಂಗ್ ಕಂಪನಿ ನೆಟ್ಫ್ಲಿಕ್ಸ್ ಭಾರಿ ಬೆಲೆಗೆ ಪಡೆದುಕೊಂಡಿದೆ. ಮಾಹಿತಿಯ ಪ್ರಕಾರ, ನೆಟ್ಫ್ಲಿಕ್ಸ್ 155 ಕೋಟಿ ರೂಪಾಯಿ ನೀಡಿ ಈ ಚಿತ್ರದ OTT ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Exit mobile version