Site icon Vistara News

Raichur News: ಲಿಂಗಸುಗೂರಿನಲ್ಲಿ ಡಿ.29, 30 ರಂದು ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನ

Dr. Hulikal Nataraj reviewed the preparations for the 3rd State Scientific Conference to be held at Lingasugur

ಲಿಂಗಸುಗೂರು: ವೈಜ್ಞಾನಿಕ ಸಂಶೋಧನಾ ಪರಿಷತ್ ನಡೆಸುವ ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನವನ್ನು (3rd State Level Scientific Conference) ಈ ಬಾರಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಡಿ.29 ಮತ್ತು 30 ರಂದು ಎರಡು ದಿನಕಾಲ ನಡೆಯುವ ಸಮ್ಮೇಳನಕ್ಕೆ ಸಿದ್ಧತೆ ಭರದಿಂದ ಸಾಗಿದೆ.

ಭವ್ಯ ವೇದಿಕೆ

ಪಟ್ಟಣದ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಸಮ್ಮೇಳನಕ್ಕೆ ವೇದಿಕೆ ಸಿದ್ಧಗೊಂಡಿದೆ. 80*40 ಅಳತೆಯ ಸಮಾರಂಭದ ಮುಖ್ಯವೇದಿಕೆ, 10 ಸಾವಿರ ಗಣ್ಯರು ಹಾಗೂ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ, ಊಟ ಹಾಗೂ ವಿವಿಧ ಮಳಿಗೆಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಮಾರಂಭಕ್ಕೆ ಬಂದವವರಿಗೆ ಎರಡು ದಿನಗಳ ಕಾಲ ವಿವಿಧ ರುಚಿಕರವಾದ ಊಟದ ವ್ಯವಸ್ಥೆ ತಯಾರಿ ಮಾಡಿಕೊಳ್ಳಲಾಗಿದೆ.

ಸಿಎಂ ಸಿದ್ಧರಾಮಯ್ಯ ಚಾಲನೆ

3ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ಸಿಎಂ ಸಿದ್ಧರಾಮಯ್ಯ ಉದ್ಘಾಟಿಸುವವರು, ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಲಾಗಿದೆ. ಇದಲ್ಲದೆ ಸಮಾರಂಭದಲ್ಲಿ ವಿಜ್ಞಾನ ಮತ್ತು ಮಾಹಿತಿ ಖಾತೆ ಸಚಿವ ಎನ್.ಎಸ್.ಬೋಸ್‌ರಾಜ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಚಿವರಾದ ಪ್ರೀಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಮಾನಪ್ಪ ವಜ್ಜಲ್, ಶರಣಗೌಡ ಬಯ್ಯಾಪುರ, ಮಾಜಿ ಶಾಸಕರಾದ ಅಮರೇಗೌಡ ಬಯ್ಯಾಪುರ, ಡಿ.ಎಸ್.ಹೂಲಗೇರಿ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸುವವರು.

ಇದನ್ನೂ ಓದಿ: Utthana Katha Spardhe: ಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2023; ಶಿರಸಿಯ ಕರುಣಾಕರ ಹಬ್ಬುಮನೆ ಪ್ರಥಮ

ವೈಚಾರಿಕ ವಿಚಾರ ಗೋಷ್ಠಿ

ಸಮ್ಮೇಳನದ ಮೊದಲ ದಿನದಂದು ಮೊದಲನೇ ಗೋಷ್ಠಿ ನಮ್ಮ ಸಂವಿಧಾನ ನಮ್ಮ ಹಕ್ಕು, ಸಮ್ಮೇಳನಾಧ್ಯಕ್ಷರ ಸಾಧನೆ-ಸಂವೇದನೆ-ಸಂವಾದ, ಮಹಿಳೆ ಮತ್ತು ವೈಚಾರಿಕತೆ-ಮನಸ್ಸು, ಎರಡನೇ ದಿನದಂದು ವಿಜ್ಞಾನದ ಮೇಲಿನ ದಾಳಿ ಮತ್ತು ಪ್ರತಿರೋಧಗಳು, ಯುವ ಜನತೆ ಮತ್ತು ವೈಜ್ಞಾನಿಕತೆ, ಆರೋಗ್ಯ ನಂಬಿಕೆ ಆಚರಣೆ, ರಾಯಚೂರು-ಸಂಸ್ಕೃತಿ-ವೈವಿಧ್ಯತೆ ವಿಷಯದ ಕುರಿತು ಗೋಷ್ಠಿಯಲ್ಲಿ ಚರ್ಚೆ ನಡೆಯಲಿದ್ದು, ಪ್ರತಿ ದಿನ ಸಂಜೆ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕ ಪ್ರದರ್ಶನಗಳು ನಡೆಯಲಿವೆ.

ಜೀವಮಾನ ಸಾಧನ ಪ್ರಶಸ್ತಿ

ಸಮ್ಮೇಳನದಲ್ಲಿ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಪ್ರಗತಿಪರ ಚಿಂತಕಿ ಬಿ.ಟಿ.ಲಲಿತಾ ನಾಯಕ್, ಅಂತರಾಷ್ಟ್ರೀಯ ಕೌಶಲ್ಯ ತರಬೇತುದಾರ ಚೇತನ್‌ರಾಮ್, ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕಾಯಿ ಪದ್ಮಸಾಲಿ, ಪ್ರಗತಿಪರ ಚಿಂತಕ ಆರ್.ಮಾನಸಯ್ಯ ಇವರಿಗೆ ಜೀವಮಾನ ಸಾಧನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ವಿಶಿಷ್ಟ ಸೇವಾ ಪ್ರಶಸ್ತಿಗೆ ಸಂತೆಕೆಲ್ಲೂರಿನ ಡಾ.ಸಿದ್ಧರಾಮಪ್ಪ ಸಾಹುಕಾರ, ಬೆಂಗಳೂರಿನ ಬಿ.ಸಿ.ಕಿರಣಕುಮಾರ್, ಕೂಡ್ಲಿಗಿ ಎನ್.ಲಕ್ಷ್ಮಿದೇವಿ, ಲಿಂಗಸುಗೂರಿನ ಬಸಮ್ಮ ತೆಗ್ಗಿನಮನಿ, ಚಿಕ್ಕನಾಯಕನಹಳ್ಳಿ ಜಗದೀಶ, ಹಾಸನದ ಜಯಪ್ರಸಾದ್, ಬಾಗಲಕೋಟಿಯ ರಕ್ಷಿತಾ ಭರತ್‌ಕುಮಾರ ಈಟಿ, ತುಮಕೂರಿನ ಎಚ್.ಎಸ್.ನವೀನ್‌ಕುಮಾರ್, ಹಾಸನ ಗೋಪಾಲ್, ಸುಧಾ ಬೆಂಗಳೂರು, ಎಂ.ಮಂಜುನಾಥ, ಲಯನ್ ಮುನಿರಾಜು ಹಾಗೂ ವಿಶೇಷವಾಗಿ ವಿಜ್ಞಾನ ಗ್ರಾಮಕ್ಕೆ 10 ಎಕರೆ ಜಾಗವನ್ನು ದಾನವಾಗಿ ನೀಡಿರುವ ಆರ್.ರವಿ ಬಿಳಿಶಿವಾಲೆ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯದ 37 ಶೈಕ್ಷಣಿಕ ಜಿಲ್ಲೆಗಳಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯಮಟ್ಟದ ಎಚ್.ಎನ್.ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ಇದನ್ನೂ ಓದಿ: SBI FD Rates: ಎಫ್‌ಡಿ ಠೇವಣಿದಾರರಿಗೆ ಎಸ್‌ಬಿಐ ಗುಡ್‌ ನ್ಯೂಸ್;‌ ಬಡ್ಡಿದರ ಭಾರಿ ಹೆಚ್ಚಳ

ವಿದ್ಯಾರ್ಥಿಗಳಿಗಾಗಿ ವಿವಿಧ ಪ್ರದರ್ಶನ

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವೈಚಾರಿಕ ಜ್ಞಾನ ಬೆಳೆಸುವ ಉದ್ದೇಶದಿಂದ ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂ, ಇಸ್ರೋ ಸಂಸ್ಥೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಹಾಗೂ ಜವಾಹರಲಾಲ್ ನೆಹರು ತಾರಾಲಯ ವತಿಯಿಂದ ಸಮ್ಮೇಳನದಲ್ಲಿ ವಿಜ್ಞಾನ, ಖಗೋಳ, ತಂತ್ರಜ್ಞಾನ ಮತ್ತು ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.

ಸಮ್ಮೇಳನದ ಮೊದಲ ದಿನದಂದು ಬೆಳಗ್ಗೆ 8ಗಂಟೆಗೆ ಲಿಂಗಸುಗೂರು ಸಹಾಯಕ ಆಯುಕ್ತ ಶಿಂಧೆ ಅವಿನಾಶ್, ರಾಷ್ಟ್ರಧ್ವಜಾರೋಹಣ ಹಾಗೂ ಡಾ.ಹುಲಿಕಲ್ ನಟರಾಜ್ ಪರಿಷತ್ತಿನ ಧ್ವಜಾರೋಹಣವನ್ನು ನೆರವೇರಿಸುವರು. ಧ್ವಜಾರೋಹಣದ ನಂತರ ವಿವಿಧ ಕಲಾತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆ ಕರೆತರಲಾಗುವುದು.

ಇದನ್ನೂ ಓದಿ: Karnataka weather : ವಿಜಯಪುರದಲ್ಲಿ ಚಳಿ ಚುರುಕು; ಕರಾವಳಿ, ದಕ್ಷಿಣ ಒಳನಾಡಲ್ಲಿ ಶುಷ್ಕ ವಾತಾವರಣ

“ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ವಿಜ್ಞಾನದ ಜ್ಞಾನವೃದ್ಧಿಗೆ ಸಮ್ಮೇಳನವು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಸಾರ್ವಜನಿಕರು ಸಮ್ಮೇಳನದಲ್ಲಿ ಎರಡು ದಿನ ಭಾಗವಹಿಸಿ ಯಶಸ್ವಿಗೊಳಿಸಿ”

-ಡಾ.ಹುಲಿಕಲ್ ನಟರಾಜ್, ಸಂಸ್ಥಾಪಕ ಅಧ್ಯಕ್ಷ ವೈಜ್ಞಾನಿಕ ಸಂಶೋಧನಾ ಪರಿಷತ್ ಬೆಂಗಳೂರು.

Exit mobile version