Site icon Vistara News

Raichur News: ವಿಧಾನಸಭಾ ಕಲಾಪದಿಂದ 10 ಶಾಸಕರ ಅಮಾನತು ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

BJP protests against suspension of ten MLAs from assembly proceedings at Raichur

ರಾಯಚೂರು: ವಿಧಾನಸಭಾ ಕಲಾಪದಿಂದ ಬಿಜೆಪಿ ಪಕ್ಷದ (BJP Party) ಹತ್ತು ಶಾಸಕರ (MLA) ಅಮಾನತು ನಡೆ ಖಂಡಿಸಿ ರಾಯಚೂರಿನಲ್ಲಿ ಶನಿವಾರ ಶಾಸಕ ಡಾ.ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್ ಸರ್ಕಲ್ ಮುಂಭಾಗ ಸರ್ಕಾರದ ವಿರುದ್ಧ ಪೊಸ್ಟ್ ಕಾರ್ಡ್ ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: National Mango Day: ಮಾವಿಗೊಂದು ದಿನವೇಕೆ?: ಸುಲಿದು ಸವಿದರೆ ಸಾಲದೇ!

ಪ್ರತಿಭಟನೆಯಲ್ಲಿ ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಮಾತನಾಡಿ, ಹತ್ತು ಜನ ಶಾಸಕರ ಅಮಾನತು ಮಾಡಿರುವುದು ಪ್ರಜಾಪ್ರಭುತ್ವದ ವಿರೋಧಿ ಕೆಲಸವಾಗಿದೆ, ಸ್ಪೀಕರ್ ಯು.ಟಿ. ಖಾದರ್ ಅವರು ಪ್ರಜಾಪ್ರಭುತ್ವದ ವಿರೋಧಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಇದು ಕಾಂಗ್ರೆಸ್ ಪಕ್ಷದ ದಬ್ಬಾಳಿಕೆ ನೀತಿಯನ್ನು ತೋರಿಸಿ ಕೊಡುತ್ತದೆ, ಮುಂದಿನ ದಿನಗಳಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: Josephine Chaplin: ಕಾಮಿಡಿ ಲೆಜೆಂಡ್ ಚಾರ್ಲಿ ಚಾಪ್ಲಿನ್ ಪುತ್ರಿ ಜೋಸೆಫಿನ್ ಚಾಪ್ಲಿನ್ ನಿಧನ

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಮಾನಂದ್ ಯಾದವ್, ಶಂಕರ್ ರೆಡ್ಡಿ, ರಾಮಚಂದ್ರ ಸೇರಿದಂತೆ ಮಹಿಳಾ ಮೋರ್ಚ ಸದಸ್ಯರು ಹಾಗೂ ಇತರರು ಪಾಲ್ಗೊಂಡಿದ್ದರು.

Exit mobile version