Site icon Vistara News

Raichur News : ರಾಯಚೂರಿನ ವಿದ್ಯುತ್ ಚಿತಾಗಾರಕ್ಕೆ ಇಲ್ಲ ಉದ್ಘಾಟನೆ ಭಾಗ್ಯ

Electric crematorium in Raichur

ನಾಗರಾಜ ಮಾಕಾಪುರ, ರಾಯಚೂರು

ರಾಯಚೂರು: ನಗರದಲ್ಲಿ ಹೈಟೆಕ್ ವಿದ್ಯುತ್ ಚಿತಾಗಾರ‌ (Electric crematorium) ನಿರ್ಮಾಣವಾಗಿ ನಾಲ್ಕು ವರ್ಷ ಕಳೆದರೂ ಉದ್ಘಾಟನಾ (Inauguration) ಭಾಗ್ಯ ಕಂಡಿಲ್ಲ, ಇದರಿಂದ ಸುಮಾರು ‌2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ವಿದ್ಯುತ್ ಚಿತಾಗಾರ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ‌ಕಿಡಿಕಾರಿದ್ದಾರೆ.

ನಗರದ ಬಿಆರ್‌ಬಿ ವೃತ್ತದ‌ ಸಮೀಪದಲ್ಲಿ ವಿಶಾಲವಾದ ಚಿತಾಗಾರವಿದೆ. ಸುಮಾರು 8-10 ಸಮುದಾಯ ಜನರು‌ ಇಲ್ಲಿ ಮೃತದೇಹಗಳ ಅಂತ್ಯಕ್ರಿಯೆ ಮಾಡುತ್ತಾರೆ. ಸದ್ಯಕ್ಕೆ ಚಾಲ್ತಿಯಲ್ಲಿರುವ ಮ್ಯಾನುವಲ್ ಚಿತಾಗಾರದಿಂದ ವಿದ್ಯುತ್ ಚಿತಾಗಾರ ನಿರ್ಮಾಣ ‌ಮಾಡುವಂತೆ ಸಾರ್ವಜನಿಕರು ಬೇಡಿಕೆ ಇಟ್ಟಿದ್ದರು. ಇದರಿಂದಾಗಿ ನಾಲ್ಕು ವರ್ಷಗಳ ಹಿಂದೆಯೇ ಕೆ.ಕೆ.ಆರ್.ಡಿ.ಬಿ ಮತ್ತು ಮ್ಯಾಕ್ರೋ ಯೋಜನೆ ಅಡಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ: ಸಂಪುಟ ಸಭೆ ನಿರ್ಧಾರ: ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವುದು ನಿಶ್ಚಿತ; ʼಬಿಜೆಪಿʼ ಪಠ್ಯ ತೆಗೆಯುವುದು ಖಚಿತ

ಸುಮಾರು‌ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ‌ಮಾಡಲಾಗಿದ್ದು, ಪ್ರಾಯೋಗಿಕವಾಗಿ ಒಂದು ‌ಮೃತದೇಹವನ್ನು ವಿದ್ಯುತ್ ಚಿತಾಗಾರದಲ್ಲಿ ದಹನ ಮಾಡಲಾಗಿದೆ. ಪ್ರಾಯೋಗಿಕ ಹಂತದಲ್ಲಿ ಈ ವಿದ್ಯುತ್ ಚಿತಾಗಾರ ಯಶಸ್ಸು ಕಂಡಿದೆ.

ಆ ಬಳಿಕ ಅಧಿಕಾರಿಗಳು ವಿದ್ಯುತ್ ಚಿತಾಗಾರದ ನಿರ್ವಹಣೆಯ ಜವಾಬ್ದಾರಿಯನ್ನೇ ಮರೆತು ಬಿಟ್ಟಿದ್ದಾರೆ. ಇದರಿಂದ ಲಕ್ಷಾಂತರ ರೂಪಾಯಿ ಖರ್ಚು ‌ಮಾಡಿ ಯಂತ್ರೋಪಕರಣಗಳು ತುಕ್ಕು ಹಿಡಿದಿವೆ. ವಿದ್ಯುತ್ ಚಿತಗಾರ ‌ಕೊಠಡಿಯ ಕಿಟಕಿಗಳು ಹಾನಿಯಾಗಿವೆ. ವಿದ್ಯುತ್ ಚಿತಾಗಾರದ ಪಕ್ಕದಲ್ಲಿರುವ ಡಿಸೇಲ್ ರೂಮ್ ‌ಮುಂದೆ ಮರ ಗಿಡಗಳು ಬೆಳೆದು ನಿಂತಿವೆ. ಈ ಚಿತಾಗಾರ ನಿರ್ಮಾಣವಾಗಿ ನಾಲ್ಕು ವರ್ಷ ವರ್ಷಗಳೂ ಕಳೆದರೂ ಉದ್ಘಾಟನೆ ಕಂಡಿಲ್ಲ.

ಇದನ್ನೂ ಓದಿ: UNGA Resolution: ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಮನ್ನಣೆ; ಶಾಂತಿಸ್ಥಾಪಕರಿಗೆ ಗೌರವ ಕುರಿತು ಮಂಡಿಸಿದ ನಿರ್ಣಯ ಪಾಸ್

ರಾಯಚೂರು ‌ನಗರದಲ್ಲಿ‌‌ ಸುಮಾರು ‌2 ಲಕ್ಷ ಜನಸಂಖ್ಯೆಯಿದೆ. ನಗರದಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಲೇ ಇರುತ್ತವೆ. ಇದರಿಂದ ನಗರದಲ್ಲಿ ‌ಸ್ಮಶಾನದ ಜಾಗಕ್ಕೆ ಕೊರತೆ ಎದುರಾಗಿದೆ. ಅಂದಾಜು 2 ಕೋಟಿ‌‌ ರೂ ವೆಚ್ಚದಲ್ಲಿ ನಿರ್ಮಿಸಿದ ವಿದ್ಯುತ್‌ ಚಿತಾಗಾರ ಜನರ ಬಳಕೆಗೆ ಬಾರದೇ ಹಣವನ್ನು ನೀರಿನಲ್ಲಿ ಹೋಮ ‌ಮಾಡಿದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

2018-19 ರ ಸಾಲಿನಲ್ಲಿ ರಾಜ್ಯಸಭಾ ಸದಸ್ಯರ ಅನುದಾನದಲ್ಲಿ ಈ ವಿದ್ಯುತ್ ಚಿತಾಗಾರ ನಿರ್ಮಾಣ ‌ಮಾಡಲಾಗಿದೆ. ಜೆ.ಎಸ್.ಆರ್ ಕನ್ಸ್‌ಟ್ರಕ್ಷನ್ ಇದರ ಕಾಮಗಾರಿ ಮಾಡಿದೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಈ ಚಿತಾಗಾರ ಜನರ ಬಳಕೆಗೆ ಬಾರದೇ ಇರುವುದು ಸ್ಥಳೀಯ ನಿವಾಸಿಗಳ ಬೇಸರಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Rice Politics : ಅಕ್ಕಿ ಸಿಗದಿದ್ದರೆ ಅಕೌಂಟ್‌ಗೆ ಹಣ ಹಾಕಿಬಿಡಿ, ಅವರೇ ಅಕ್ಕಿ ಖರೀದಿಸ್ತಾರೆ; ಸಿ.ಟಿ ರವಿ ಸಲಹೆ

ಉದ್ಘಾಟನಾ ಭಾಗ್ಯ ಕಾಣದೇ ಇರುವ ವಿದ್ಯುತ್‌ ಚಿತಾಗಾರದ ಯಂತ್ರೋಪಕರಣಗಳು ತುಕ್ಕು ಹಿಡಿದಿದ್ದು, ಕೂಡಲೇ ಈ ಎಲ್ಲವನ್ನೂ ಸರಿಪಡಿಸಿ, ನಗರಸಭೆ ಅಧಿಕಾರಿಗಳು ವಿದ್ಯುತ್ ಚಿತಗಾರವನ್ನು ಉದ್ಘಾಟನೆ ಮಾಡಿ ಜನರ ಬಳಕೆಗೆ ‌ಬರುವಂತೆ ಮಾಡಬೇಕಿದೆ ಎಂದು ಸ್ಥಳೀಯರಾದ ಶಿವುಕುಮಾರ್ ಯಾದವ್ ಒತ್ತಾಯಿಸಿದ್ದಾರೆ.

Exit mobile version