ರಾಯಚೂರು: ಮುಂಗಾರು ಮಳೆ (Monsoon rain) ನಂಬಿ ಬಿತ್ತನೆ ಮಾಡಿದ ರೈತರು (farmers) ಸಂಕಷ್ಟಕ್ಕೆ ಸಿಲುಕಿದ್ದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ (Crop) ಸಂರಕ್ಷಣೆಗಾಗಿ, ಕೆಲ ರೈತರು ನೀರಿನ ಟ್ಯಾಂಕರ್( tankers) ಮೊರೆ ಹೋಗಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ರೈತರಿಗೆ ಬರಗಾಲದ ಛಾಯೆ ಆವರಿಸಿದೆ. ಮುಂಗಾರು ಆರಂಭವಾಗಿ ತಿಂಗಳು ಕಳೆದರೂ ಜಿಲ್ಲೆಯಲ್ಲಿ ಮಳೆಯಾಗುತ್ತಿಲ್ಲ.ವಾಡಿಕೆಯಂತೆ ಮುಂಗಾರು ಮಳೆ ನಂಬಿ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೀಜದ ಬಿತ್ತನೆ ಕಾರ್ಯವಾಗಿದೆ. ಬಿತ್ತನೆ ಮಾಡಿ 15 ದಿನಗಳು ಆದರೂ ಮಳೆ ಬರದೆ ಜಿಲ್ಲೆಯಲ್ಲಿ ರಣಬಿಸಿಲು ಆವರಿಸಿದೆ.
ಇದನ್ನೂ ಓದಿ: Gold rate today : ಬಂಗಾರದ ದರದಲ್ಲಿ 100 ರೂ. ಇಳಿಕೆ, ಬೆಳ್ಳಿ ದರ ಯಥಾಸ್ಥಿತಿ
ಇದರಿಂದಾಗಿ ಹತ್ತಿ ಬೆಳೆಗೆ ತೇವಾಂಶ ಕಡಿಮೆಯಾಗಿದೆ, ಇದರಿಂದ ನಾಟಿ ಮಾಡಿದ ರೈತರ ಪರಿಸ್ಥಿತಿ ಚಿಂತಾ ಜನಕವಾಗಿದ್ದು, ರಣ ಬಿಸಿಲು ಮತ್ತು ವಿಪರೀತ ಗಾಳಿಯಿಂದಾಗಿ ಬಿತ್ತನೆ ಮಾಡಿದ ಬೆಳೆ ಒಣಗುವ ಸ್ಥಿತಿಗೆ ತಲಪಿವೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಹತ್ತಿ ಬೆಳೆಯನ್ನು ಸಂರಕ್ಷಿಸಲು ಕೆಲ ರೈತರು ಬಾಡಿಗೆ ನೀರಿನ ಟ್ಯಾಂಕರ್ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: IND vs WI: ಭಾರತ-ವಿಂಡೀಸ್ ಟೆಸ್ಟ್ ಇತಿಹಾಸವೇ ಬಲು ರೋಚಕ
ಒಂದು ಬೆಳೆಗೆ ಒಂದು ಲೋಟ ನೀರು
ರಾಯಚೂರು-ಲಿಂಗಸುಗೂರು ಮಾರ್ಗ ಮಧ್ಯದಲ್ಲಿ 15 ಎಕರೆ ಹತ್ತಿ ಬೆಳೆಗೆ ಪ್ಲಾಸ್ಟಿಕ್ ಲೋಟದ ಮೂಲಕ ನೀರು ಹರಿಸಲಾಗುತ್ತಿದೆ. ರೈತ ಸಿದ್ದಾರೆಡ್ಡಿ ಎಂಬಾತ 15 ಎಕರೆಯಲ್ಲಿ ಹತ್ತಿ ಬೆಳೆ ನಾಟಿ ಮಾಡಿದ್ದಾರೆ. ಈಗಾಗಲೇ 15 ದಿನದ ಬೆಳೆಯಿದೆ, ಟ್ಯಾಂಕರ್‌ವೊಂದಕ್ಕೆ ಒಂದು ಸಾವಿರದಿಂದ ಎರಡು ಸಾವಿರ ರೂ ಬಾಡಿಗೆ ನೀಡಲಾಗುತ್ತಿದೆ. 10 – 15 ಜನ ಕೂಲಿ ಕಾರ್ಮಿಕರಿಗೆ ದಿನಕ್ಕೆ 300 ರೂಪಾಯಿಯಂತೆ ಕೂಲಿ ಕೊಟ್ಟು ಬೆಳೆಗೆ ನೀರು ಹರಿಸಲಾಗುತ್ತಿದೆ.
ಒಂದು ಪ್ಲಾಸ್ಟಿಕ್ ಲೋಟದ ಮೂಲಕ ಒಂದು ಬೆಳೆಗೆ ಒಂದು ಲೋಟ ನೀರು ಉಣಿಸಲಾಗುತ್ತಿದೆ.ಬಿತ್ತನೆ ಮಾಡಿದ ಖರ್ಚಿಕ್ಕಿಂತ ಬೆಳೆ ಉಳಿಸಿಕೊಳ್ಳಲು ಹೆಚ್ಚು ಹಣ ಖರ್ಚು ಆಗುತ್ತಿದೆ, ಒಂದು ದಿನಕ್ಕೆ ಹತ್ತರಿಂದ 15 ಜನ ಕೂಲಿ ಕಾರ್ಮಿಕರು ಒಂದು ಎಕರೆ ಪ್ರದೇಶಕ್ಕೆ ಮಾತ್ರ ನೀರು ಹರಿಸುತ್ತಿದ್ದಾರೆ.
ಇದನ್ನೂ ಓದಿ: IND vs WI: ಚೊಚ್ಚಲ ಟೆಸ್ಟ್ ಪದಾರ್ಪಣ ನಿರೀಕ್ಷೆಯಲ್ಲಿ ನಾಲ್ವರು ಟೀಮ್ ಇಂಡಿಯಾ ಆಟಗಾರರು; ಯಾರಿಗೆ ಒಲಿಯಲಿದೆ ಲಕ್!
ಬೆಳೆ ಉಳಿಸಿಕೊಳ್ಳಲು ಸಣ್ಣ ಪ್ರಯತ್ನ
ಲೋಟದ ಮೂಲಕ ನೀರು ಹರಿಸುವುದು ಮೊದಲ ಪ್ರಯೋಗವಾಗಿದೆ. ಮಳೆ ಬಾರದ ಲಕ್ಷಣಗಳಿರುವ ಕಾರಣದಿಂದ ಈ ರೀತಿಯಾಗಿ ನೀರು ಹರಿಸಲಾಗುತ್ತಿದೆ, ಈ ಬಾರಿಯ ಬರಗಾಲದಿಂದ ಹತ್ತಿ ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿದೆ.
ಇದರಿಂದ ಸಂಪೂರ್ಣವಾದ ಫಸಲ ಪಡೆಯಲು ಆಗಲ್ಲ, ಆದರೆ ಮೊಳಕೆ ಒಡೆದಿರುವ ಬೆಳೆ ಉಳಿಸಿಕೊಳ್ಳುವ ಸಣ್ಣ ಪ್ರಯತ್ನ ಇದಾಗಿದೆ. ಈ ರೀತಿಯಾಗಿ ಬೆಳೆಗೆ ನೀರು ಹಾಕಲು ಕಷ್ಟಕರ ಸಂಗತಿಯಾಗಿದೆ, ದಿನಕ್ಕೆ ಒಂದು ಎಕರೆ ಗೆ 5-6 ಸಾವಿರ ರೂಪಾಯಿ ಖರ್ಚು ಬರುತ್ತದೆ. ನನ್ನ ಬಳಿ ಸ್ವಂತ ಟ್ರಾಕ್ಟರ್ ಇರುವುದರಿಂದ ಖರ್ಚು ಕಡಿಮೆ ಬರುತ್ತದೆ ಎನ್ನುತ್ತಾರೆ ಹತ್ತಿ ಬೆಳೆ ಬೆಳೆದ ರೈತ ಸಿದ್ದಾರೆಡ್ಡಿ.