ರಾಯಚೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ (Karnataka CM) ಸಿದ್ದರಾಮಯ್ಯ ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದ ನಂದೀಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಿದ್ದರಾಮಯ್ಯ (Siddaramaiah) ಅವರ ಅಭಿಮಾನಿ ಬಳಗ ದೇವರಿಗೆ ಕ್ಷೀರ ಅಭಿಷೇಕ ಮಾಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸಿಎಂ ಅಗಿ ಸಿದ್ದರಾಮಯ್ಯ ಅವರ ಆಯ್ಕೆಗೆ ಸಂತಸ ವ್ಯಕ್ತಪಡಿಸಿರುವ ಅವರ ಅಭಿಮಾನಿಗಳು ರಾಯಚೂರು ನಗರದಲ್ಲಿರುವ ಆರಾಧ್ಯ ದೈವ ನಂದೀಶ್ವರನಿಗೆ ಕ್ಷೀರ ಅಭಿಷೇಕ ಮಾಡಿದ್ದಾರೆ. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ ಕ್ಷೀರ ಅಭಿಷೇಕ ಮಾಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ: IPL 2023 : ವಿರಾಟ್ ಕೊಹ್ಲಿ ಶತಕ, ಎಸ್ಆರ್ಎಚ್ ವಿರುದ್ಧ ಆರ್ಸಿಬಿಗೆ 8 ವಿಕೆಟ್ ಸುಲಭ ಜಯ
ಬಳಿಕ ದೇವಸ್ಥಾನದ ಪ್ರಾಂಗಣದಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರವುಳ್ಳ ಬ್ಯಾನರ್ ಅಳವಡಿಸಿ, ಹಾಲಿನ ಅಭಿಷೇಕ ಮಾಡಿದರು.
ಸಿದ್ದರಾಮಯ್ಯಗೆ ಯಾವುದೇ ರೀತಿ ವಿಘ್ನಗಳು ಎದುರಾಗದಿರಲಿ
ಈ ವೇಳೆ ಸಿದ್ದರಾಮಯ್ಯ ಅವರ ಅಭಿಮಾನಿ, ವಕೀಲ ಹನುಮಂತಪ್ಪ ಮಾತನಾಡಿ, ಅಹಿಂದ ನಾಯಕ ಹಾಗೂ ಯಾವುದೇ ಕಪ್ಪು ಚುಕ್ಕೆ ಇಲ್ಲದಂತ ನಾಯಕ ಈ ರಾಜ್ಯದ ಮುಖ್ಯಮಂತ್ರಿ ಆಗಿರುವುದು ಖುಷಿ ತಂದಿದೆ. ನಾಳೆ ಮುಖ್ಯಮಂತ್ರಿಯಾಗಿ ಅವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಆಡಳಿತಾವಧಿಯಲ್ಲಿ ಯಾವುದೇ ವಿಘ್ನಗಳು ಎದುರಾಗದಿರಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಎಲ್ಲಾ ಸಮಾಜದ ಜನರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಶಕ್ತಿ ಅವರಿಗಿದೆ ಎಂದ ಅವರು, ಮುಂದೆ ಸಂಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೂ ಮಂತ್ರಿಗಿರಿ ಸಿಗುತ್ತದೆ, ಜಿಲ್ಲಾ ಉಸ್ತುವಾರಿ ಸಚಿವರೂ ನಮ್ಮ ಜಿಲ್ಲೆಯವರೇ ಆಗುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಇದನ್ನೂ ಓದಿ: IndiGo airline : ದೇಶದ ಅತಿ ದೊಡ್ಡ ಏರ್‌ಲೈನ್ ಇಂಡಿಗೊಗೆ 919 ಕೋಟಿ ರೂ. ಲಾಭ, ಕಾರಣವೇನು?
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿ ಬಳಗದ ಬಿ ಬಸವರಾಜ್, ಕೆ.ಬಸವಂತಪ್ಪ, ಪಂಪಾಪತಿ, ಕೇಶವ, ನಾಗೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.