ಲಿಂಗಸುಗೂರು: ಬೆಂಗಳೂರಿನ ರಾಜ್ಯ ವಕೀಲರ ಪರಿಷತ್, ರಾಯಚೂರು ನ್ಯಾಯಾಂಗ ಇಲಾಖೆ ಹಾಗೂ ತಾಲೂಕು ನ್ಯಾಯವಾದಿಗಳ ಸಂಘದ ಸಹಯೋಗದಲ್ಲಿ ಮಾರ್ಚ್ 29ರಂದು ಮೂರು ದಿನಗಳ ಕಾಲ ಪಟ್ಟಣದಲ್ಲಿ ವಕೀಲರಿಗಾಗಿ ರಾಜ್ಯ ಮಟ್ಟದ ಕಾನೂನು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ವಕೀಲರ ಸಂಘದ ತಾಲೂಕಾಧ್ಯಕ್ಷ ಭೂಪನಗೌಡ ಪಾಟೀಲ್ (Raichur News) ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ 20ವರ್ಷಗಳ ಹಿಂದೆ ಜಿಲ್ಲಾ ಮಟ್ಟದ ಕಾನೂನು ಕಾರ್ಯಾಗಾರ ನಡೆಸಲಾಗಿತ್ತು. ಈಗ ರಾಜ್ಯಮಟ್ಟದ ಕಾರ್ಯಾಗಾರ ನಡೆಸಲು ತಾಲೂಕಿಗೆ ಅವಕಾಶ ಒದಗಿಬಂದಿದೆ. ರಾಜ್ಯಮಟ್ಚದ ಕಾನೂನು ಕಾರ್ಯಾಗಾರ ಒಲಿದು ಬಂದಿರುವುದು ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಬೇಡಿಕೆಗೆ ಪೂರಕ ವಾತಾವರಣ ಹಾಗೂ ಈಗಾಗಲೇ ವಾರದಲ್ಲಿ ಎರಡು ದಿನ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಮಂಜೂರಾಗಿದೆ, ಇದನ್ನು ಪೂರ್ಣಪ್ರಮಾಣದ ಜಿಲ್ಲಾ ಹೆಚ್ಚುವರಿ ನ್ಯಾಯಾಲಯಕ್ಕೆ ಬೇಡಿಕೆಗೆ ಶಕ್ತಿ ನೀಡುವ ಅವಕಾಶಗಳು ಸಾಕಷ್ಟು ಇವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: Koppala News: ಅಮೇರಿಕಾದ ಎಂಜಿನಿಯರ್‌ನಿಂದ ಕಾರಟಗಿ ಸರ್ಕಾರಿ ಶಾಲೆಗೆ 1.5 ಲಕ್ಷ ರೂ. ಮೌಲ್ಯದ ಪುಸ್ತಕಗಳ ದೇಣಿಗೆ
ಪಟ್ಟಣದ ಆರ್‌ಎಂಎಸ್ ಕಲ್ಯಾಣಮಂಟಪದಲ್ಲಿ ಮಾರ್ಚ್ 29, 30 ಹಾಗೂ 31ರಂದು ಮೂರು ದಿನಗಳ ಕಾಲ ರಾಜ್ಯಮಟ್ಟದ ಕಾನೂನು ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಾಗಾರವನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ಇ.ಎಸ್.ಇಂದಿರೇಶ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪ್ರಧಾನ ನ್ಯಾಯಾಧೀಶ ಮಾರುತಿ ಬಾಗಡೆ, ವಕೀಲರ ಪರಿಷತ್ ಅಧ್ಯಕ್ಷ ವಿಶಾಲಾ ರಘು ಎಚ್.ಎಲ್, ಹೈಕೋರ್ಟ್ ವಕೀಲ ಶ್ರೀನಿವಾಸ ಬಿ.ವಿ, ಹರೀಶ್ ಎಸ್, 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಬಿ.ಬಿ. ಜಕಾತಿ, ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಧೀಶರಾದ ಚಂದ್ರಶೇಖರ್ ದಿಡ್ಡಿ, ದೇಶಮುಖ ಶಿವಕುಮಾರ ಭಾಗವಹಿಸುವವರು.
ಮೂರು ದಿನಗಳಲ್ಲಿ ವಿವಿಧ ವಿಷಯಗಳ ಕುರಿತು ಮಹತ್ವದ ಗೋಷ್ಠಿಗಳು ನಡೆಯಲಿದ್ದು, ಮಾ.31ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕಲಬುರ್ಗಿ ಹೈಕೋರ್ಟ್ ಅಡಿಶನಲ್ ರಿಜಿಸ್ಟಾರ್ ಎಚ್.ಜೆ.ಎಂ ಆರಾಧ್ಯ, ಲಾ ಅಕಾಡೆಮಿ ಅಧ್ಯಕ್ಷ ಎಸ್.ಎಫ್. ಗೌತಮ್‌ಚಂದ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಮೂರು ಸಾವಿರಕ್ಕೂ ಅಧಿಕ ವಕೀಲರು ಭಾಗವಹಿಸುವ ನಿರೀಕ್ಷೆ ಇದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ತಪ್ಪದೇ ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ತಿಳಿಸಿದರು.
ಇದನ್ನೂ ಓದಿ: Seetha Raama Serial: ಹಿಂದಿಗೆ ರಿಮೇಕ್ ಆಗ್ತಿದೆ ಕನ್ನಡದ ಈ ಜನಪ್ರಿಯ ಧಾರಾವಾಹಿ
ಈ ವೇಳೆ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲರಾಜಸಾಗರ ಮಾನಮಟ್ಟಿ, ಉಪಾಧ್ಯಕ್ಷ ಬಸವಲಿಂಗಯ್ಯ ವಸ್ತçದ್, ಹಿರಿಯ ವಕೀಲರಾದ ಮುದುಕಪ್ಪ ನೀರಲಕೇರಾ, ನಾಗರಾಜ ಗಸ್ತಿ, ಕುಪ್ಪಣ್ಣ ಮಾಣಿಕ್, ಎಂ.ಎಸ್.ನಾಡಗೌಡ, ಹನುಮಂತರೆಡ್ಡಿ, ದೇವೆಂದ್ರ ನಾಯಕ ಸೇರಿದಂತೆ ಇನ್ನಿತರಿದ್ದರು.