Site icon Vistara News

Raichur News: ಮಸ್ಕಿ; ವನಸಿರಿ ಫೌಂಡೇಶನ್ ನಿಂದ ವನಮಹೋತ್ಸವ ಕಾರ್ಯಕ್ರಮ

Vanamahotsava Program by Vanasiri Foundation at Maski

ಮಸ್ಕಿ: ತಾಲೂಕಿನ ಉದ್ಬಾಳ (ಯು) ಸರ್ಕಾರಿ ಪ್ರೌಢಶಾಲೆ (Govt High school) ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ (Vanamahotsava Program) ನಡೆಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಆದಪ್ಪ ಹಂಬಾ ಮಾತನಾಡಿ, ಸಿಂಧನೂರಿನ ವನಸಿರಿ ಅಮರೇಗೌಡ ಮಲ್ಲಾಪೂರ ಅವರು ಯುವಕರ ತಂಡವೊಂದನ್ನು ಕಟ್ಟಿಕೊಂಡು ಹಲವಾರು ವರ್ಷಗಳಿಂದ ಪರಿಸರ ಸಂರಕ್ಷಣೆ, ಪಾಲನೆ ಪೋಷಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: IND vs WI: ಭಾರತದ ಸರಣಿ ಸಮಬಲದ ಯೋಜನೆಗೆ ಮಳೆ ಅಡ್ಡಿ ಸಾಧ್ಯತೆ

ಪಕ್ಷಿಗಳ ಸಂಕುಲ ಉಳಿವಿಗಾಗಿ ಅರವಟ್ಟಿಗೆ ನಿರ್ಮಿಸಿದ್ದಾರೆ, ಸಾರ್ವಜನಿಕರಿಗೆ ಪರಿಸರದ ಬೀಜದುಂಡೆಗಳನ್ನು ವಿತರಿಸಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ,ಇವರ ಪರಿಸರ ಸೇವೆಗೆ ರಾಜ್ಯ ಪರಿಸರ ಪ್ರಶಸ್ತಿ ಕೂಡ ಲಭಿಸಿರುವುದು ತುಂಬಾ ಶ್ಲಾಘನೀಯ ಎಂದರು.

ಇದೇ ವೇಳೆ ಶಾಲೆಯ ವಿದ್ಯಾರ್ಥಿಗಳಿಂದ ಹಸಿರೇ ಉಸಿರು ಎಂಬ ನಾಟಕ ಪ್ರದರ್ಶನ ಮಾಡಲಾಯಿತು. ನಂತರ ಶಾಲೆಯ ಆವರಣದಲ್ಲಿ ಸಸಿಗಳನ್ನು ನೀಡಲಾಯಿತು.

ಇದನ್ನೂ ಓದಿ: MiG-29:‌ ಪಾಕ್-‌ ಚೀನಾ ಬೆದರಿಕೆಗೆ ಭಾರತದ ಉತ್ತರ; ಶ್ರೀನಗರದಲ್ಲಿ ಮಿಗ್‌- 29 ಸ್ಕ್ವಾಡ್ರನ್‌

ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ, ಮಸ್ಕಿ ತಾಲೂಕ ಅಧ್ಯಕ್ಷ ರಾಜು ಬಳಗಾನೂರ, ಕಂಠೆಪ್ಪ ನಾಯಕ, ವೀರಣ್ಣ ಹಂಪರಗುಂದಿ, ಶಂಕರರಾವ್ ಕುಲಕರ್ಣಿ, ಅಜಯಕುಮಾರ್‌ ನಾಡಗೌಡ, ನಾಗೇಶ ಕಡಾಮುಡಿ ಮಠ, ಶಿಕ್ಷಕರಾದ ವೆಂಕಟೇಶ, ಬಸವರಾಜ, ನಿವೃತ್ತಿ ಶಿಕ್ಷಕ ವೀರಣ್ಣ ಹಾಗೂ ವನಸಿರಿ ಫೌಂಡೇಶನ್ ಸದಸ್ಯರಾದ ರಮೇಶ್ ಮರಡ್ಡಿ ನಾಗರಾಜ್ ಉದ್ಬಲ್ ಶ್ರೀನಿವಾಸ ಮೈಲಾಪುರ ಹಾಗೂ ಇತರರು ಉಪಸ್ಥಿತರಿದ್ದರು.

Exit mobile version