Site icon Vistara News

Cows Death: ವಿಜಯ ಸಂಕಲ್ಪ ಯಾತ್ರೆಯ ತ್ಯಾಜ್ಯ ಸೇವಿಸಿ 7 ಹಸುಗಳ ಸಾವು

cows death

ರಾಯಚೂರು: ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ತ್ಯಾಜ್ಯ ಆಹಾರ ಸೇವಿಸಿ 7ಕ್ಕೂ ಹೆಚ್ಚು ಹಸುಗಳು ಸಾವಿಗೀಡಾದ ಘಟನೆ ರಾಯಚೂರು ಹೊರವಲಯದ ಗುಂಜಳ್ಳಿ ಗ್ರಾಮದಲ್ಲಿ ನಡೆದಿದೆ.

ಕಳೆದ 10ನೇ ತಾರೀಕಿನಿಂದು ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆದಿತ್ತು. ತಿಪ್ಪರಾಜ್ ಹವಾಲ್ದಾರ್ ಪರ ಬಿಜೆಪಿ ನಾಯಕರು ಪ್ರಚಾರ ನಡೆಸಿದ್ದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿ. ಶ್ರೀರಾಮುಲು ಸಹ ಭಾಗಿಯಾಗಿದ್ದರು. ಗುಂಜಳ್ಳಿ ಗ್ರಾಮದಲ್ಲಿ ಕಾರ್ಯಕರ್ತರಿಗಾಗಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 1 ಸಾವಿರಕ್ಕಿಂತ ಹೆಚ್ಚಿನ ಕಾರ್ಯಕರ್ತರಿಗೆ ಭೋಜನ ನೀಡಲಾಗಿದ್ದು, ಕಾರ್ಯಕರ್ತರ ಭೋಜನ ಬಳಿಕ ಉಳಿದ ಆಹಾರ ಒಂದೆಡೆ ರಾಶಿ ಹಾಕಲಾಗಿತ್ತು.

ಈ ತ್ಯಾಜ್ಯ ಆಹಾರ ತಿಂದು 7 ಹಸುಗಳು ಸಾವಿಗೀಡಾಗಿದ್ದು, ಇನ್ನೂ 8 ಹಸುಗಳು ಅಸ್ವಸ್ಥಗೊಂಡಿವೆ. ಹೊಟ್ಟೆ ಉಬ್ಬರಿಸಿಕೊಂಡು ಸರಣಿಯಾಗಿ ಸಾವನ್ನಪ್ಪಿವೆ. ಈ ಹಸುಗಳನ್ನು ಸಾಕುತ್ತಿದ್ದವರು ಯಾತ್ರೆ ಆಯೋಜಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಬಿಜೆಪಿ ನಾಯಕರು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿಲ್ಲ; ಇನ್ನೊಂದೆಡೆ ಪಶುವೈದ್ಯರು ಕೂಡ ಗ್ರಾಮಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸಂತ್ರಸ್ತರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: Vijayapura Road Accident: ವಿಜಯ ಸಂಕಲ್ಪ ಯಾತ್ರೆಯಲ್ಲಿ ಸರಣಿ ಕಾರು ಅಪಘಾತ; ದಾವಣಗೆರೆಯಲ್ಲಿ ಖಾಸಗಿ ಬಸ್ ಪಲ್ಟಿ

Exit mobile version