ರಾಯಚೂರು: ರಾಯಚೂರಿನಲ್ಲಿ ಬಾಲ ಕಾರ್ಮಿಕತನ ತಡೆ ಅಧಿಕಾರಿಗಳು ಹಲವೆಡೆ ಮೆಗಾ ರೈಡ್ ನಡೆಸಿದ್ದು, 8ಕ್ಕೂ ಹೆಚ್ಚು ಬಾಲ ಕಾರ್ಮಿಕರ ರಕ್ಷಣೆ ಮಾಡಿದ್ದಾರೆ.
ಗಬ್ಬೂರು, ಸಿರವಾರ, ಮಂದಕಲ್ ಸೇರಿ ಜಿಲ್ಲೆಯಲ್ಲಿ ಏಕಕಾಲಕ್ಕೆ ಹಲವೆಡೆ ಬಾಲ ಕಾರ್ಮಿಕ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೂಲಿ ಕೆಲಸಕ್ಕೆ ಮಕ್ಕಳ ಬಳಕೆ ಮಾಡುತ್ತಿರುವ ದೂರಿನನ್ವಯ ದಾಳಿ ನಡೆದಿದ್ದು, ದಾಳಿಯಲ್ಲಿ 8ಕ್ಕೂ ಹೆಚ್ಚು ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ. ಕೂಲಿ ಕೆಲಸಕ್ಕೆ ಮಕ್ಕಳನ್ನು ಸಾಗಾಟ ಮಾಡುತ್ತಿದ್ದ ಬೊಲೆರೊ, ಟೆಂಪೊ ಸೇರಿ 5 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಜಿಲ್ಲಾ ಕಾರ್ಮಿಕರ ಯೋಜನಾ ನಿರ್ದೇಶಕ ಮಂಜುನಾಥ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆದಿತ್ತು.
ಇದನ್ನೂ ಓದಿ | ಪಿಎಫ್ಐ ಆಯ್ತು, ಈಗ ಇನ್ನೊಂದು ಕಾರ್ಯಾಚರಣೆಗೆ ಇಳಿದ ಎನ್ಐಎ; 3 ರಾಜ್ಯಗಳ, 50 ಸ್ಥಳಗಳಲ್ಲಿ ರೇಡ್