ರಾಯಚೂರು: ಇಲ್ಲಿನ ಲಿಂಗಸ್ಗೂರು ತಾಲೂಕಿನ ಪೂಲಭಾವಿ ಬಳಿ ಕಾಲುವೆಯೊಂದರಲ್ಲಿ ಈಜಾಡಲು ಹೋದ ಯುವಕನೊಬ್ಬ ನೀರು (Drowned in Canal)ಪಾಲಾಗಿದ್ದಾನೆ. ಹೊನ್ನಳ್ಳಿ ಗ್ರಾಮದ ಅಮರೇಶ್ (16) ಮೃತ ದುರ್ದೈವಿ.
ಎಸ್ಎಸ್ಎಲ್ಸಿ ವಿದ್ಯಾರ್ಥಿಯಾಗಿರುವ ಅಮರೇಶ್ ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾಲುವೆ ಬಳಿ ಹೋಗಿದ್ದಾನೆ. ರೈತರ ಒತ್ತಾಯದ ಮೇರೆಗೆ ಇತ್ತೀಚೆಗೆ ಕಾಲುವೆಗೆ ಹೆಚ್ಚು ನೀರು ಬಿಡುಗಡೆ ಮಾಡಲಾಗಿತ್ತು. ನೀರಿನ ಹರಿವಿನ ಹೆಚ್ಚಾಗಿರುವ ಮಾಹಿತಿ ತಿಳಿಯದೆ ಈಜಾಡಲು ಕಾಲುವೆಗೆ ಇಳಿದಿದ್ದಾನೆ. ಆದರೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.
ಘಟನೆ ನಡೆದು 24 ಗಂಟೆಯಾದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಕಿಡಿಕಾರಿದ್ದಾರೆ. ಮಗನನ್ನು ಹುಡುಕಿ ಕೊಡುವಂತೆ ಕುಟುಂಬಸ್ಥರ ಮನವಿ ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ