ರಾಯಚೂರು: ಅಣ್ಣನೊಬ್ಬ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ (Self harming) ಯತ್ನಿಸಿದ ಘಟನೆ ರಾಯಚೂರು ಜಿಲ್ಲೆಯ (Raichur News) ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಅಮ್ಜದ್ ಖಾನ್ ಆತ್ಮಹತ್ಯೆ ಯತ್ನಿಸಿದವರು.
ಅಮ್ಜದ್ ಖಾನ್‌ನಿಗೆ ಶೋಯಲ್ ಎಂಬ ಕಿರಿಯ ಸಹೋದರ ಇದ್ದಾನೆ. ಈತ ತಾನು ಪ್ರೀತಿಸಿದ ಯುವತಿ ಜತೆ ಮನೆ ಬಿಟ್ಟು ಪರಾರಿ ಆಗಿದ್ದ. 10 ದಿನಗಳ ಬಳಿಕ ಯುವತಿ ಜತೆ ವಾಪಸ್ ಮನೆಗೆ ಬಂದಿದ್ದ. ಇದರಿಂದ ದಿನನಿತ್ಯ ಮನೆಯಲ್ಲಿ ಕೌಟುಂಬಿಕ ಕಲಹ ನಡೆಯುತ್ತಿತ್ತು.
ಇದನ್ನೂ ಓದಿ: Free Site : ಫ್ರೀ ಸೈಟ್ ವದಂತಿ; ಗುಡ್ಡ ಏರಿ ಕುಳಿತ ಮಂದಿ!
ಈ ನಡುವೆ ಯುವತಿ ಜತೆ ಮದುವೆ ಮಾಡಿಸುವಂತೆ ಶೋಯಲ್ ಅಣ್ಣ ಅಮ್ಜದ್ ಖಾನ್‌ನ ಬೆನ್ನು ಬಿದ್ದಿದ್ದ ಎನ್ನಲಾಗಿದೆ. ಊರಲ್ಲಿ ಈತನಿಂದ ಮಾರ್ಯಾದೆ ಹೋಯಿತು ಎಂದು ಮನನೊಂದಿದ್ದ. ಈತನ ಕಿರುಕುಳವನ್ನು ತಾಳಲಾರದೆ, ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನ ಮನವೊಲಿಸಲು ಮುಂದಾಗಿದ್ದಾರೆ. ಆದರೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ಟವರ್ ಮೇಲೆರಿ ಕುಳಿತಿದ್ದಾರೆ. ಬಳಿಕ ಸಿಬ್ಬಂದಿ ಮೇಲೆ ಹತ್ತಿ ಸಮಧಾನಪಡಿಸಿ ಕೆಳಗೆ ಇಳಿಸಿದ್ದಾರೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ