Site icon Vistara News

ಜಿಲ್ಲೆಯಲ್ಲಿ ಏಮ್ಸ್‌ ಸ್ಥಾಪನೆಗೆ ಒತ್ತಾಯಿಸಿ ರಕ್ತದ ಸಹಿಯ ಹೋರಾಟ

News conference in Raichur

ರಾಯಚೂರು: ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ಜುಲೈ 1 ರಂದು ಎರಡನೇ ಹಂತದ ಹೋರಾಟ ಆರಂಭವಾಗಲಿದ್ದು, ಅಂದು 5 ಸಾವಿರ ಜನರ ರಕ್ತದಲ್ಲಿ ಸಹಿ ಸಂಗ್ರಹಣೆ ಮಾಡಲು ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ತಿರ್ಮಾನಿಸಿದೆ.

ರಾಯಚೂರು ಜಿಲ್ಲಾ ಕ್ರೀಡಾಂಗಣ‌ದ ಮುಂಭಾಗದಲ್ಲಿ 48 ದಿನಗಳಿಂದ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಕಾರರು ಸದ್ಯ ಎರಡನೇ ಹಂತದ ಹೋರಾಟಕ್ಕೆ ಮುಂದಾಗಿದ್ದಾರೆ. ತಿಂಗಳಾದರೂ ಹೋರಾಟದ ಸ್ಥಳದತ್ತ ಮುಖ ಮಾಡದ ಜನಪ್ರತಿನಿಧಿಗಳು ಕಳೆದ ಒಂದು ವಾರದ ಹಿಂದೆ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ್ದರು.

ಈ ಬಗ್ಗೆ ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಏಮ್ಸ್ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಬಸವರಾಜ್ ಕಳಸದ, ಜುಲೈ 1 ರಂದು ಹೋರಾಟಕ್ಕೆ 50 ದಿನಗಳು ಪೂರೈಸುವುದರಿಂದ ಮುಂದಿನ ನಾಲ್ಕು ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸದಸ್ಯರು ಮತ್ತು ಏಮ್ಸ್ ಹೋರಾಟಕ್ಕೆ ಬೆಂಬಲಿಸುವರ ರಕ್ತ ಸಂಗ್ರಹಣೆ ಮಾಡಲು ನಿರ್ಧರಿಸಲಾಗಿದೆ.

ಇಷ್ಟೆಲ್ಲ ಹೋರಾಟ ನಡೆದರೂ ಈ ಭಾಗದ ಸಂಸದರಾಗಲಿ, ಶಾಸಕರುಗಳಾಗಲಿ ಮುಖ್ಯಮಂತ್ರಿ ಭೇಟಿ ನಿಗದಿಪಡಿಸಲು ವಿಫಲವಾಗಿದ್ದಾರೆ. ಸಂಗ್ರಹವಾದ ರಕ್ತದ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಲು ನಿರ್ಧಾರವಾಗಿದೆ ಎಂದು ಬಸವರಾಜ್‌ ತಿಳಿಸಿದರು.

ಇದನ್ನೂ ಓದಿ| ರಾಯಚೂರಿನ ಕಲುಷಿತ ನೀರಿಗೆ ಮತ್ತೊಬ್ಬರು ಮಹಿಳೆ ಬಲಿ, ಸಾವಿನ ಸಂಖ್ಯೆ 7ಕ್ಕೆ ಏರಿಕೆ  

Exit mobile version