Site icon Vistara News

Raichur News: ಸೋಪ್‌, ಚಾಕ್‌ಪೀಸ್‌ಗಳಲ್ಲಿ ಸೂಕ್ಷ್ಮ ಕಲಾಕೃತಿ ಅರಳಿಸುವ ಗ್ರಾಮೀಣ ಪ್ರತಿಭೆ

A Rural talent creating art in soap chalkpieces

ರಾಯಚೂರು: ಸೋಪ್‌ (Soap) ಹಾಗೂ ಚಾಕ್‌ಪೀಸ್‌ಗಳಲ್ಲಿ (chalk pieces) ಸೂಕ್ಷ್ಮ ಕಲಾಕೃತಿಗಳನ್ನು ಅರಳಿಸುವ ಮೂಲಕ ಗ್ರಾಮೀಣ ಪ್ರತಿಭೆಯೊಬ್ಬ (Rural Talent) ಎಲ್ಲರ ಗಮನ ಸೆಳೆದಿದ್ದಾನೆ.

ಹೌದು, ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಮಾಕಾಪೂರು ಗ್ರಾಮದ ಯವಕ ವಿಜಯ ಕುಮಾರ್ ಅವರು ಸೋಪ್‌ ಹಾಗೂ ಚಾಕ್‌ಪೀಸ್‌ಗಳಲ್ಲಿ ವಿವಿಧ ಬಗೆಯ ಕಲಾಕೃತಿಗಳನ್ನು ಅರಳಿಸಿದ್ದು, ನೋಡುಗರನ್ನು ಆಕರ್ಷಿಸುತ್ತಿವೆ.

ಸೋಪ್‌ನಲ್ಲಿ ಗುಂಡು ಪಿನ್ ಮೂಲಕ, ಕರಗತವಾದ ಕಲೆಯನ್ನು ಅಷ್ಟೇ ನಾಜೂಕಾದ ರೀತಿಯಲ್ಲಿ ಕೆತ್ತುವ ಈ ಯುವಕನು ತನ್ನ ಕೈಗೆ ಏನೇ ಸಿಕ್ಕರೂ ಅದಕ್ಕೆ ಒಂದು ರೂಪ ಕೊಡುವುದು ಈತನ ಹವ್ಯಾಸ.

ಇದನ್ನೂ ಓದಿ: NPCI New Products: ಯುಪಿಐ ಮೂಲಕ ಹಣ ಪಾವತಿಸಲು ಇನ್ನು ನಿಮ್ಮ ಧ್ವನಿ ಸಾಕು! ಏನಿದು?

ಸೋಪ್‌ನಲ್ಲಿ ಶ್ರೀ ಕೃಷ್ಣ, ಆಂಜನೇಯ, ಶಿವಾಜಿ ಮಹಾರಾಜ್ ಸೇರಿದಂತೆ ವಿವಿಧ ಚಿತ್ರಗಳನ್ನು ಸುಂದರವಾಗಿ ಕೆತ್ತಿದ್ದಾನೆ. ಒಂದು ಚಿತ್ರವನ್ನ ಕೆತ್ತನೆ ಮಾಡಲು ಈ ಕಲಾವಿದ 3 ಗಂಟೆಗಳ ಸಮಯ ತೆಗೆದುಕೊಳ್ಳುತ್ತಾನೆ.

ಈ ಕಲೆ‌ ಕರಗತವಾದ ಬಗ್ಗೆ ಕಲಾವಿದ ವಿಜಯ ‌ಕುಮಾರ್ ಮಾತನಾಡಿ, ವೃತ್ತಿಯಲ್ಲಿ ನಾನು ಬಡಿಗಿತನ ಕೆಲಸ ಮಾಡುತ್ತೇನೆ, ಖಾಲಿ ಇರುವ ಸಮಯದಲ್ಲಿ ಇಂತಹ ಕಲಾಕೃತಿಗಳನ್ನು ರಚಿಸುತ್ತೇನೆ, ನನ್ನ ಈ ಕಲೆಗೆ ಮನೆಯವರಿಂದ ಬೆಂಬಲ ಬಹಳಷ್ಟಿದೆ ಎಂದು ತಿಳಿಸುತ್ತಾರೆ.

ಸೋಪ್‌ನಲ್ಲಿ ಕಲಾಕೃತಿ ಕೆತ್ತುತ್ತಿರುವ ಗ್ರಾಮೀಣ ಪ್ರತಿಭೆ ವಿಜಯ ‌ಕುಮಾರ್.

ಇನ್ನು ಈ ಯುವಕನು ಸೋಪ್‌ ಮಾತ್ರವಲ್ಲದೇ ಚಾಕ್ ಪೀಸ್ ಕೊಟ್ಟರೆ ಅದರಲ್ಲೂ ಸೂಕ್ಷ್ಮ ಕಲಾಕೃತಿಗಳನ್ನು ಅರಳಿಸುತ್ತಾನೆ, ನಂದೀಶ್ವರ ಸೇರಿದಂತೆ ಅನೇಕ ದೇವರ ಚಿತ್ರಗಳನ್ನು ರಚಿಸಿದ್ದಾನೆ. ಜತೆಗೆ ಆಕರ್ಷಕ ವಿನ್ಯಾಸದ ಹಲವು ಕೊಂಡಿ ಚೈನ್‌ಗಳನ್ನು ಕೆತ್ತಿರುವುದು ಮತ್ತೊಂದು ವಿಶೇಷ.

ಇದನ್ನೂ ಓದಿ: Gruha Lakshmi Scheme : ಗೃಹಲಕ್ಷ್ಮಿ ಯೋಜನೆ ನೋಂದಣಿ ತಾತ್ಕಾಲಿಕ ಸ್ಥಗಿತ!

ತಮ್ಮ ಮಗ ಈ‌ ರೀತಿಯ ಕಲಾಕೃತಿಗಳನ್ನು ರಚನೆಯು ಬಹಳಷ್ಟು ಖುಷಿತಂದಿದೆ ಎನ್ನುತ್ತಾರೆ ಯುವಕನ ಪೋಷಕರು.

Exit mobile version