Site icon Vistara News

Raichur News: ಹಟ್ಟಿ ಚಿನ್ನದ ಗಣಿ ಕಾರ್ಮಿಕರಿಗೆ ವಿದ್ಯಾರ್ಹತೆಗೆ ತಕ್ಕಂತೆ ಗ್ರೇಡ್ ನೀಡಲು ಆಗ್ರಹ

CITU demands to give grade according to qualification to Hatti gold mines workers demand

ಹಟ್ಟಿ: ಚಿನ್ನದ ಗಣಿಯಲ್ಲಿ (Gold Mine) ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವಿದ್ಯಾರ್ಹತೆಗೆ ತಕ್ಕಂತೆ ಗ್ರೇಡ್ (Grade) ನೀಡಬೇಕು ಎಂದು ಆಗ್ರಹಿಸಿ ಸೆಂಟರ್ ಆಫ್ ಆಫ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) (CITU) ಲಿಂಗಸುಗೂರು ತಾಲೂಕು ಸಮಿತಿಯಿಂದ ಹಟ್ಟಿ (Hatti) ಚಿನ್ನದ ಗಣಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಮನವಿ ಪತ್ರವನ್ನು ಬುಧವಾರ ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಅವರ ಪಿಎ ಮೇರಿ ಅವರಿಗೆ ಸಲ್ಲಿಸಲಾಯಿತು.

ಜಿ-12 ದರ್ಜೆಯಲ್ಲಿ ಸಾಮಾನ್ಯ ಕೆಲಸಗಾರಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಅನುಕಂಪದ ಆಧಾರದ ಮೇಲೆ ಸುಮಾರು 7 ರಿಂದ 8 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಈ ಮೊದಲು ಹಟ್ಟಿ ಚಿನ್ನದ ಗಣಿಯಲ್ಲಿ, ಅನುಕಂಪದ ಆಧಾರದ ಮೇಲೆ ಕಾರ್ಮಿಕರಿಗೆ 2013-14 ರಲ್ಲಿ ನೇಮಕಾತಿ ಮಾಡಿಕೊಂಡಿರುವ ಕೆಲಸಗಾರರನ್ನು ವಿದ್ಯಾರ್ಹತೆಗನುಗುಣವಾಗಿ ಹುದ್ದೆಯನ್ನು ಕೊಟ್ಟಿರುತ್ತಾರೆ. ಆದರೆ ಚಿನ್ನದ ಗಣಿ ನಿರ್ದೇಶಕ ಮಂಡಳಿಯಲ್ಲಿ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ನೀಡಬೇಕೆಂಬ ನಿಯಮವಿದ್ದರೂ ಇದನ್ನು ಪರಿಗಣಿಸದೆ, ನಿಯಮಗಳನ್ನು ಗಾಳಿಗೆ ತೂರಿ ಹೊಸದಾಗಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಮುಖಂಡ ರಮೇಶ್ ವೀರಾಪೂರು ಆರೋಪಿಸಿದರು.

ಇದನ್ನೂ ಓದಿ: ಕದನದೋಳ್‌ ಇಸ್ರೇಲ್‌ ಕೆಣಕಿ ಉಳಿದವರಿಲ್ಲ; ಹಮಾಸ್‌ ಕಮಾಂಡರ್‌ನ ಕುಟುಂಬವೇ ಸರ್ವನಾಶ!

ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಮಗೆ ಗಣಿಯ ಕೆಲಸದಲ್ಲಿ ಅನುಭವವಿದೆ. ಕಂಪನಿಯಲ್ಲಿ ಪಧವೀದರರು, ಎಂ.ಎ., ಎಂ.ಕಾಂ, ಬಿ ಕಾಂ. ಎಂ.ಎಸ್.ಡಬ್ಲ್ಯೂ, ಡಿಪ್ಲೊಮಾ, ಡಿಪ್ಲೊಮಾ ನರ್ಸಿಂಗ್, ಬಿಎಸ್ಸಿ ಸರ್ಸಿಂಗ್, ಓಟಿ ಟೆಕ್ನಿಷಿಯನ್, ಲ್ಯಾಬ್ ಟೆಕ್ನಿಷಿಯನ್, ಐಟಿಐ ಹಾಗೂ ಇನ್ನಿತರ ಕೋರ್ಸುಗಳನ್ನು ಮುಗಿಸಿದವರು ಇದ್ದಾರೆ. ಕಂಪನಿಯಲ್ಲಿ ಸೇವೆಗೆ ಸೇರಿಕೊಳ್ಳುವಾಗಲೇ ನಮ್ಮ ಸರ್ಟಿಫಿಕೇಟ್‌ಗಳನ್ನು ನೀಡಿರುತ್ತೇವೆ. ಅದಕ್ಕಾಗಿ ನಮ್ಮನ್ನು ಖಾಲಿ ಇರುವ ಸ್ಥಾನಗಳಿಗೆ ಭರ್ತಿ ಮಾಡಿ ಉಳಿದ ಸ್ಥಾನಗಳಿಗೆ ನೇರ ನೇಮಕಾತಿ ಪ್ರಕಟಣೆ ಹೊರಡಿಸಬೇಕು ಎಂದು ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ: Big Pumpkin: ಹಿತ್ತಲಿನಲ್ಲಿ ಯಾರೂ ಎತ್ತಲಾರದಂಥ 1247 ಕೆಜಿ ತೂಕದ ಕುಂಬಳಕಾಯಿ ಬೆಳೆದ ಶಿಕ್ಷಕ!

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಸಹ ಕಾರ್ಯದರ್ಶಿ ಮಹಮ್ಮದ್ ಹನೀಫ್, ಮುಖಂಡರಾದ ಅಲ್ಲಾಭಕ್ಷ, ರಾಜರತ್ನಂ, ಸುದೀರ್ ಕುಮಾರ, ಅರುಣ್ ವಿ. ಉಪಸ್ಥಿತರಿದ್ದರು.

Exit mobile version