Site icon Vistara News

ಕೃಷ್ಣಾ ನದಿ ಪ್ರವಾಹ, ನಡುಗಡ್ಡೆ ನಿವಾಸಿಗಳು ಅಪಾಯದಲ್ಲಿ

ಕೃಷ್ಣಾ ನದಿ

ರಾಯಚೂರು: ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿ ನಡುಗಡ್ಡೆ ನಿವಾಸಿಗಳು ಆತಂಕಿತರಾಗಿದ್ದಾರೆ. ಪ್ರವಾಹದಿಂದ ದಡ ಸೇರಲು ಆಗದೆ ಒದ್ದಾಡುತ್ತಿದ್ದಾರೆ. ಕೆಲವರು ಜೀವದ ಹಂಗು ತೊರೆದು ಈಜಿ ದಡ ಸೇರಲು ಮುಂದಾಗಿದ್ದಾರೆ. ಲಿಂಗಸಗೂರು ತಾಲೂಕಿನ ತವದಗಡ್ಡಿಯಲ್ಲಿ 18ಕ್ಕೂ ಅಧಿಕ ಜನ ವಾಸವಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Heavy Rain | ತುಂಗಾಭದ್ರಾ, ಘಟಪ್ರಭಾ ಪ್ರವಾಹ; ಸೇತುವೆಗಳು ಜಲಾವೃತ

18 ಜನರಲ್ಲಿ ಕೆಲವರು ಈಜಿ ದಡ ಸೇರಿ ಬಚಾವ್‌ ಆಗಿದ್ದಾರೆ. ಇನ್ನೂ 8 ಜನ ನಡುಗಡ್ಡೆಯಲ್ಲೇ ಇದ್ದಾರೆ. ಶೀಲಹಳ್ಳಿ ಸೇತುವೆ ಮುಳುಗಡೆಯಿಂದ ಬಾಹ್ಯ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ನಡುಗಡ್ಡೆಯಲ್ಲಿ ಜನ ಸಿಲುಕುವಂತಾಗಿದೆ. ಜನ ಇಷ್ಟು ಪ್ರಾಣಾಪಾಯದಲ್ಲಿದ್ದರೂ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತಗಳು ರಕ್ಷಣೆಗೆ ಮುಂದಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

Exit mobile version