Site icon Vistara News

ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್​; ಠಾಣೆಗೆ ಮುತ್ತಿಗೆ, ಬಂಧನ

RSS Worker Raju Arrested

#image_title

ರಾಯಚೂರು: ಸಾಮಾಜಿಕ ಮಾಧ್ಯಮಗಳಲ್ಲಿ, ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಪೋಸ್ಟ್ (Social Media Post) ಹಾಕಿದ್ದ ಆರ್​ಎಸ್​ಎಸ್​ ಕಾರ್ಯಕರ್ತ ಎನ್ನಲಾದ ರಾಜು ತಂಬಾಕ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮುಸ್ಲಿಂ ಮಹಿಳೆಯರು ಮಕ್ಕಳನ್ನು ಹೆರುವ ಯಂತ್ರಗಳು ಎಂಬಂತೆ ಬಿಂಬಿಸಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದ ರಾಜು ತಂಬಾಕ್​ ವಿರುದ್ಧ ಶೀಘ್ರವೇ ಕ್ರಮಕೈಗೊಳ್ಳಬೇಕು. 24 ಗಂಟೆಯಲ್ಲಿ ಆತನನ್ನು ಬಂಧಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಉದ್ರಿಕ್ತರ ಗುಂಪು ರಾಯಚೂರಿನ ಲಿಂಗಸಗೂರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿತ್ತು.

ಮೂವರು ಮುಸ್ಲಿಂ ಮಹಿಳೆಯರು ಮಕ್ಕಳನ್ನು ಹೆರುತ್ತಿರುವಂತೆ ಮತ್ತು ಮತ್ತು ಪುರುಷನೊಬ್ಬ ಆ ಯಂತ್ರವನ್ನು ಆಪರೇಟ್ ಮಾಡುತ್ತಿರುವಂತೆ ಒಂದು ಫೋಟೋವನ್ನು ಪೋಸ್ಟ್ ಮಾಡಿ, ಇಸ್ಲಾಮಿಕ್ ಬೇಬಿ ಫ್ಯಾಕ್ಟರಿ ಎಂದು ರಾಜು ಬರೆದುಕೊಂಡಿದ್ದರು. ಅವರ ಸ್ಟೇಟಸ್​ ಮತ್ತು ಪೋಸ್ಟ್​ಗಳು ವೈರಲ್ ಆಗುತ್ತಿದ್ದಂತೆ ಮುಸ್ಲಿಂ ಸಮುದಾಯದ ಜನರು ಸಿಡಿದೆದ್ದಿದ್ದರು. ರಾಜು ತಂಬಾಕ್​ ಅವರು ಮುಸ್ಲಿಂ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಕೂಡಲೇ ಅವರನ್ನು ಬಂಧಿಸಿ ಎಂದು ಆಗ್ರಹಿಸಿ ಗಲಾಟೆ ಮಾಡಿದ್ದರು. ನಿನ್ನೆ ರಾತ್ರಿ ಲಿಂಗಸಗೂರಿನಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಅಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ಇದನ್ನೂ ಓದಿಳ ನನ್ನ ಕುಟುಂಬದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದರೆ ನಿಮ್ಮ ಮನೆಗೇ ಬರುತ್ತೇನೆ ಎಚ್ಚರ: ಬಾಲಚಂದ್ರ ಜಾರಕಿಹೊಳಿ

ಹಿರಿಯ ಪೊಲೀಸ್ ಅಧಿಕಾರಿ ವೇಣುಗೋಪಾಲ್​ ಅವರು ಮುಸ್ಲಿಂ ಸಮುದಾಯದ ಗುಂಪಿನ ಮನವೊಲಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. 24 ಗಂಟೆಯೊಳಗೆ ರಾಜು ಬಂಧನವಾಗಲೇಬೇಕು ಎಂದು ಪಟ್ಟು ಹಿಡಿದಿದ್ದರು. ಅದರಂತೆ ಪೊಲೀಸರು ಆರೋಪಿ ರಾಜುವನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Exit mobile version