Site icon Vistara News

Karnataka Rain: ವಿಜಯನಗರದಲ್ಲಿ ಬಿರು ಮಳೆ; ಶಾರ್ಟ್ ಸರ್ಕ್ಯೂಟ್‌ನಿಂದ 35ಕ್ಕೂ ಟಿವಿ, ಫ್ರಿಜ್‌ಗಳಿಗೆ ಹಾನಿ

#image_title

ವಿಜಯನಗರ: ಹೊಸಪೇಟೆಯ ಚಪ್ಪರದಳ್ಳಿ ಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಗೆ (Karnataka Rain) ಶಾರ್ಟ್ ಸರ್ಕ್ಯೂಟ್ (Short circuit) ಸಂಭವಿಸಿದೆ. ಮಳೆ ಪರಿಣಾಮದಿಂದ (Rain Effect) ಶಾರ್ಟ್ ಸರ್ಕ್ಯೂಟ್‌ ಆಗಿದ್ದರಿಂದ ಒಮ್ಮೆಲೆಗೆ ಹೈವೋಲ್ಟೇಜ್ ಕರೆಂಟ್ ಪಾಸ್ ಆಗಿದೆ. ಪರಿಣಾಮ 35ಕ್ಕೂ ಹೆಚ್ಚು ಮನೆಗಳಲ್ಲಿ ಟಿವಿ, 20ಕ್ಕೂ ಹೆಚ್ಚು ಫ್ರಿಜ್‌, ಫ್ಯಾನ್‌ಗಳು, ಮಿಕ್ಸಿ, ಬಲ್ಬ್‌ಗಳಿಗೆ ಹಾನಿಯಾಗಿವೆ.

ಮನೆಯಲ್ಲಿದ್ದ ಫ್ಯಾನ್‌ಗಳು, ಬಲ್ಬ್‌ಗಳೆಲ್ಲವೂ ಹಾಳಾಗಿರುವುದು

ಟಿವಿ, ಫ್ರಿಜ್‌ಗಳು ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಹಾಳಾಗಿದ್ದು, ಜನರು ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಅಲ್ಲದೆ, ಆ ಎಲ್ಲ ವಸ್ತುಗಳನ್ನೂ ಮನೆ ಮುಂದೆ ಇಟ್ಟು ಬೇಸರವನ್ನು ಹೊರಹಾಕಿದ್ದಾರೆ. ಹೈವೋಲ್ಟೇಜ್ ಕರೆಂಟ್ ಪಾಸ್ ಆಗಿರುವ ಕಾರಣ ಎಲೆಕ್ಟ್ರಾನಿಕ್‌ ವಸ್ತುಗಳೆಲ್ಲವೂ ಸುಟ್ಟು ಹೋಗಿವೆ. ಮಾತ್ರವಲ್ಲದೆ ಬೀದಿಬದಿಯ ದೀಪಗಳು ಸಹ ಹಾಳಾದ ಪರಿಣಾಮ ಸಿಬ್ಬಂದಿ ರಿಪೇರಿ ಕೆಲಸದಲ್ಲಿ ನಿರತರಾಗಿದ್ದಾರೆ.

ಶಾರ್ಟ್‌ ಸರ್ಕ್ಯೂಟ್‌ ಎಫೆಕ್ಟ್‌ ಟಿವಿ, ಫ್ರಿಜ್‌ಗಳಿಗೆ ಹಾನಿ

ಗುಡುಗು ಬಂದಾಗ ಅನ್‌ಪ್ಲಗ್‌ ಮಾಡಿ

ಗುಡುಗು, ಮಿಂಚು ಸಹಿತ ಮಳೆ ಬಂದಾಗ ಮನೆಯಲ್ಲಿ ಯಾವುದೇ ಎಲೆಕ್ಟ್ರಾನಿಕ್‌ ವಸ್ತುಗಳು ಇದ್ದರೂ ಅನ್‌ಪ್ಲಗ್‌ ಮಾಡಬೇಕು ಎಂದು ವಿದ್ಯುತ್‌ ಸರಬರಾಜು ಕೇಂದ್ರವು ಸೂಚಿಸುತ್ತಾ ಬಂದಿದೆ. ಆದರೆ ಹಲವು ಮಂದಿ ಇದನ್ನು ನಿರ್ಲಕ್ಷ್ಯ ಮಾಡುತ್ತಿರುವುದೇ ಇಂತಹ ಅವಘಡಗಳಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಬೀದಿ ದೀಪಗಳ ದುರಸ್ತಿ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ

ಗುಡುಗು ಮಿಂಚಿನಿಂದ ಕೂಡಿದ ಮಳೆ ಬಂದಾಗ ಆದಷ್ಟು ಎಲ್ಲ ಎಲೆಕ್ಟ್ರಾನಿಕ್ ವಸ್ತುಗಳನ್ನು ಮತ್ತು ಅಪ್ಲಯನ್ಸಸ್‌ಗಳನ್ನು ಅನ್‌ಪ್ಲಗ್ ಅಥವಾ ಸ್ವಿಚ್ಡ್‌ಆಫ್‌ ಮಾಡುವುದು ಒಳ್ಳೆಯದು. ಇಂತಹ ಸಂದರ್ಭದಲ್ಲಿ ಎಲೆಕ್ಟ್ರಾನಿಕ್‌ ವಸ್ತುಗಳು ಶಾರ್ಟ್ ಸರ್ಕ್ಯೂಟ್‌ ಆಗಿ ಹಾಳಾಗುವುದರಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಭಾರಿ ಮಳೆಗೆ ನೆಲಕ್ಕೆ ಉರುಳಿದ ಬಾಳೆ ಗಿಡ

ವಿಜಯಪುರದ ಹೊಸಪೇಟೆ ತಾಲೂಕಿನ ಕಮಲಾಪುರ, ರಾಮನಗರ, ಹಂಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೈತರು ಬೆಳೆದ ಬಾಳೆ ಗಿಡಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಹತ್ತಾರು ಎಕರೆ ಬಾಳೆ ಬೆಳೆ ನೆಲಕ್ಕೆ ಉರುಳಿವೆ. ಬಿರುಗಾಳಿಗೆ ಹಲವು ಬಗೆಯ ಬಾಳೆ ಗಿಡಗಳು ನೆಲಕ್ಕೆ ಉರುಳಿದ್ದು, ರೈತರು ಕಂಗಾಲಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ರೈತರಿಗೆ ಒಂದು ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Modi in Karnataka : ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಎಂಟ್ರಿ; ಇಂದು 4 ಕಡೆ ರೋಡ್‌ ಶೋ ಸಮಾವೇಶ

ಧರೆಗುರುಳಿದ ಬೃಹತ್‌ ಮರಗಳು

ವಿಜಯನಗರದಲ್ಲಿ ನಿನ್ನೆ ರಾತ್ರಿ (ಏ.28) ಬಿರುಗಾಳಿ ಸಹಿತ ಮಳೆಗೆ ಹೊಸಪೇಟೆಯ ಡ್ಯಾಮ್ ರೋಡ್ ಪುತ್ತೂರು ಆಸ್ಪತ್ರೆ ಮುಂಭಾಗ ಬೃಹತ್‌ ಮರವೊಂದು ಧರೆಗುರುಳಿದೆ. ರಾತ್ರಿ ಬಿದ್ದ ಮರವನ್ನು ಮರು ದಿನ ಬೆಳಗ್ಗೆಯಾದರೂ ನಗರಸಭೆ ಸಿಬ್ಬಂದಿ ತೆರವುಗೊಳಿಸದ ಕಾರಣಕ್ಕೆ ಸ್ಥಳೀಯರು ಕಿಡಿಕಾರಿದರು.

Exit mobile version