ವಿಜಯನಗರ: ಜಿಲ್ಲೆಯಲ್ಲಿ ಸತತ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯು ನಾನಾ ಅವಾಂತರವನ್ನು (Rain Effect) ಸೃಷ್ಟಿ ಮಾಡಿದ್ದು, ಇಲ್ಲಿನ ಹರಪನಹಳ್ಳಿ ಕುಂಚೂರು ಕೆರೆ ತಾಂಡಾದಲ್ಲಿ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ಪರದಾಡಿದರು.
ಕುಂಚೂರು ಕೆರೆ ತಾಂಡಾದ ಶಾಂತಾಬಾಯಿ ಎಂಬ ಮಹಿಳೆ ಮೃತಪಟ್ಟಿದ್ದು, ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಶವ ಒಯ್ಯುಲು ಆಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಏಕೆಂದರೆ ಸ್ಮಶಾನ ಜಾಗಕ್ಕೆ ಹೋಗುವ ಜಾಗದ ಮಧ್ಯದಲ್ಲಿ ಸಿಗುವ ಹಳ್ಳವು ಮಳೆಯಿಂದ ತುಂಬಿಕೊಂಡಿದ್ದು, ಹಳ್ಳ ದಾಟಲು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹರಸಾಹಸ ಪಡಬೇಕಾಯಿತು.
ಕುಂಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂದಾಜು 2 ಸಾವಿರ ಜನಸಂಖ್ಯೆ ಇದ್ದು, ಶವ ಹೂಳಲು ಪ್ರತ್ಯೇಕ ಜಾಗ ಇಲ್ಲದೆ ಇರುವುದು ಈ ದುಸ್ಥಿತಿಗೆ ಕಾರಣವೆಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ ಜಾಗವಿದ್ದು, ಅದನ್ನು ಶವ ಸಂಸ್ಕಾರಕ್ಕೆ ಬಳಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಪ್ರತ್ಯೇಕ ಸ್ಮಶಾನ ಜಾಗ ಕಲ್ಪಿಸುವಂತೆ ಸರ್ಕಾರಕ್ಕೆ ಲಂಬಾಣಿ ಸಮುದಾಯ ಮುಖಂಡ ಟೀಕ್ಯನಾಯ್ಕ ಸೇರಿ ಹಲವರು ಮನವಿ ಮಾಡಿದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಹರಪನಹಳ್ಳಿ ತಹಸೀಲ್ದಾರ್ ಶಿವಕುಮಾರ್ ಬಿರಾದರ್, ಶವ ಹೂಳಲು ಜಾಗ ಕೂಡಲೇ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ | ಗಾಳಿಯನ್ನೇ ಹೀರುವ vacuum bomb! ಸ್ಮಶಾನವನ್ನೇ ಸೃಷ್ಟಿಸಬಲ್ಲ ಇದರ ಮಾಹಿತಿ ಇಲ್ಲಿದೆ