Site icon Vistara News

Rain News | ಆಗುಂಬೆ ಘಾಟಿಯಲ್ಲಿ ಭಾರಿ ಮಳೆಗೆ ವಾಹನದ ಮೇಲೆ ಬಿದ್ದ ಮರ

Rain News

ಶಿವಮೊಗ್ಗ : ಜಿಲ್ಲೆಯಲ್ಲಿ ಗುರುವಾರ (ಆ.4) ರಾತ್ರಿ ವರುಣನ ಆರ್ಭಟ (Rain News) ಜೋರಾಗಿತ್ತು. ಆಗುಂಬೆ ಘಾಟಿಯಲ್ಲಿ ವಾಹನದ ಮೇಲೆ ಮರ ಬಿದ್ದಿದ್ದು ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಆಗುಂಬೆ ಘಾಟಿಯ 2ನೇ ತಿರುವಿನಲ್ಲಿ ಚಲಿಸುತ್ತಿದ್ದ ಟಾಟಾ ಏಸ್ ವಾಹನದ ಮೇಲೆ ಮರ ಉರುಳಿದೆ. ವಾಹನದ ಹಿಂಬದಿಗೆ ಮರ ಬಿದ್ದಿದ್ದು, ವಾಹನದಲ್ಲಿದ್ದ ಚಾಲಕ ಹಾಗೂ ಮತ್ತೋರ್ವ ಅದೃಷ್ಟವಶಾತ್ ಪಾರಾಗಿದ್ದಾರೆ. ಇದೀಗ ಸಂಚಾರ ಸ್ಥಗಿತಗೊಂಡಿದ್ದು, ತೆರವು ಕಾರ್ಯಾಚರಣೆ ಆರಂಭವಾಗಿದೆ.
ಇದನ್ನೂ ಓದಿ | Heavy Rain | ಸತತ ಮಳೆಗೆ ಉರುಳಿ ಬಿದ್ದ ಬೃಹತ್‌ ಮರ; ಆಟೋ ಜಖಂ

Exit mobile version