Site icon Vistara News

Rain News | ಹರಿಯುತ್ತಿರುವ ನೀರಲ್ಲಿ ಯುವಕರ ಹುಚ್ಚಾಟ; ಕೊಚ್ಚಿ ಹೋಗಿದ್ದ ಯುವಕ, ಬಾಲಕನ ರಕ್ಷಣೆ

Rain News

ತುಮಕೂರು: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ (Rain News) ಹಳ್ಳಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಈ ಮಧ್ಯೆ ತುಮಕೂರು ಗ್ರಾಮಾಂತರ ತಾಲೂಕಿನ ಗೂಳುರು ಕೆರೆಯಲ್ಲಿ ಹರಿಯುವ ನೀರಿನಲ್ಲಿ ಯುವಕ ಹಾಗೂ ಬಾಲಕ ಕೊಚ್ಚಿ ಹೋಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಂಪೂರ್ಣವಾಗಿ ಭರ್ತಿಯಾಗಿ ಕೋಡಿ ಬಿದ್ದಿರುವ ಕೆರೆಗೆ ನೀರಿನಲ್ಲಿ ಆಟ ಆಡಲು ಯುವಕರ ತಂಡ ಹೋಗಿತ್ತು ಎನ್ನಲಾಗಿದೆ. ಈ ವೇಳೆ ಯುವಕರು ತಮ್ಮ ಜೀವದ ಜತೆ ಚೆಲ್ಲಾಟ ಆಡಿದ್ದಾರೆ. ಈ ಸಂದರ್ಭದಲ್ಲಿ ಹರಿಯುತ್ತಿರುವ ನೀರಿನಲ್ಲಿ ಯುವಕ ಹಾಗೂ ಬಾಲಕ ಕೊಚ್ಚಿಕೊಂಡು ಹೋಗಿದ್ದರು. ಈ ವೇಳೆ ಸ್ಥಳೀಯರ ಸಮಯಪ್ರಜ್ಞೆಯಿಂದ ಇಬ್ಬರನ್ನೂ ರಕ್ಷಿಸಲಾಗಿದೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆ ಆಗಿದೆ.

ಇದನ್ನೂ ಓದಿ |Rain news | ಕೊಡಗಿನಲ್ಲಿ ಜಲಸ್ಫೋಟ : ರಬ್ಬರ್ ತೋಟ ಕುಸಿದು ಅಪಾರ ಹಾನಿ

Exit mobile version