Site icon Vistara News

Rain News | ಮಳೆ ಅಬ್ಬರಕ್ಕೆ ಅಪಘಾತ ಸರಮಾಲೆ, ಕೊಟ್ಟಿಗೆಹಾರ ಬಳಿ 48 ಗಂಟೆಯಲ್ಲಿ‌ 10 ಆ್ಯಕ್ಸಿಡೆಂಟ್

Rain News

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಸಾಲು ಸಾಲು ಅಪಘಾತಗಳು ನಡೆಯುತ್ತಿವೆ. ಮಳೆ ಆರಂಭವಾಗುತ್ತಿದ್ದಂತೆ (Rain News) ಅಪಘಾತಗಳ ತಾಣವಾಗುತ್ತಿದೆ ರಾಷ್ಟ್ರೀಯ ಹೆದ್ದಾರಿ. ‌ಮೂಡಿಗೆರೆ-ಕೊಟ್ಟಿಗೆಹಾರ ಪರಿಸರದಲ್ಲಿ ಕಳೆದ 48 ಗಂಟೆಯಲ್ಲಿ 10ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದೆ.

ಭಾನುವಾರ ರಾತ್ರಿ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಬಳಿ ಅಪಘಾತ ಸಂಭವಿಸಿದ್ದು ಬೈಕ್ ನಲಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಟ್ಯಾಂಕರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ನಡೆದಿದೆ. ಪುತ್ತೂರಿನಿಂದ ಸಂಬಂಧಿಕರ ಮನೆಗೆ ಬರುತ್ತಿದ್ದ ವೇಳೆ ಅಪಘಾತವಾಗಿದೆ ಎನ್ನಲಾಗಿದೆ. ಇದೀಗ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

ರಸ್ತೆ ವಿಸ್ತರಣೆ ಬಳಿಕ ಮೃತ್ಯುಕೂಪವಾದ ರಾಷ್ಟ್ರೀಯ ಹೆದ್ದಾರಿ
ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಿಂದ ಕೊಟ್ಟಿಗೆಹಾರದ ವರೆಗೂ ಡೇಂಜರ್ ಸ್ಪಾಟ್ ಆಗಿದೆ. ಬಣಕಲ್‌ನ ಹೇಮಾವತಿ ನದಿ ಬಳಿ ಚಾಲಕರ ನಿಯಂತ್ರಣ ತಪ್ಪಿ ಎರಡು ಕಾರುಗಳು ಪಲ್ಟಿ ಆಗಿದೆ. ಅದೇ ಸ್ಥಳದಲ್ಲಿ ಸರ್ಕಾರಿ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಆಗಿತ್ತು. ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದರು.

ಇದನ್ನೂ ಓದಿ | Rain News | ಕೃಷಿ ಜಮೀನಿಗೆ ನುಗ್ಗಿದ ನೀರು; ಕೈಗೆ ಬಂದ ಬೆಳೆ ಬಾಯಿಗೆ ಬಾರದಂತೆ ಮಾಡಿದ ಮಳೆ

ಬಣಕಲ್ ನಜರತ್ ಶಾಲೆಯ ಬಳಿ ಮತ್ತೊಂದು ಕಾರು ಪಲ್ಟಿ ಆಗಿದೆ. ಚಕಮಕ್ಕಿ ಬಳಿ ಕಾರು ಮತ್ತು ಲಾರಿಯ ನಡುವೆ ಅಪಘಾತ ಆಗಿ ಕಾರು ಸಂಪೂರ್ಣ ಜಖಂಗೊಂಡಿದೆ. ಹೆಬ್ಬರಿಗೆ ಬಳಿ (ಆ.6) ಗೂಡ್ಸ್ ವಾಹನ ಹಾಗೂ ಕಾರ್ ನಡುವೆ ಭೀಕರ ಅಪಘಾತವಾಗಿ ಪ್ರಯಾಣಿಕರು ಗಂಭೀರಗೊಂಡಿದ್ದಾರೆ. ಹೆಬ್ಬರಿಗೆ ಬಳಿಯೇ ನಿಯಂತ್ರಣ ತಪ್ಪಿ ದಿಬ್ಬಕ್ಕೆ ಕಾರು ಗುದ್ದಿದ್ದು ಚಾಲಕನಿಗೆ ಗಾಯಗಳಾಗಿದೆ.

ಮೂಡಿಗೆರೆಯಿಂದ ಕೊಟ್ಟಿಗೆಹಾರದವರೆಗೂ ರಸ್ತೆ ವಿಸ್ತರಣೆ ಬಳಿಕ ಅಪಘಾತಗಳ ಸಂಖ್ಯೆ ಹೆಚ್ಚಳ ಆಗಿದೆ ಎನ್ನಲಾಗುತ್ತಿದೆ. ನಾಮಫಲಕ ಸೂಚನಾ ಫಲಕ ಹಾಗೂ ಮುನ್ನೆಚ್ಚರಿಕೆ ವಹಿಸದಿರುವುದೇ ಕಾರಣ ಎನ್ನಲಾಗುತ್ತಿದೆ. ಇದೀಗ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ರಸ್ತೆ ನಿರ್ಮಾಣಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ | Rain News | ಹವಾಮಾನ ವೈಪರೀತ್ಯ; ಮೀನುಗಾರಿಕೆ ಶುರುವಾಗದೆ ಕಡಲ ಮಕ್ಕಳು ಅತಂತ್ರ

Exit mobile version