ಹುಲಸೂರ: ಕಳೆದ ಎರಡು ದಿನಗಳಿಂದ ಸುರಿದ ಆಲೀಕಲ್ಲು ಮಳೆ (Rain) ತಾಲೂಕಿನಲ್ಲಿ ಅವಾಂತರ ಸೃಷ್ಟಿಸಿದ್ದು, ಬೆಳೆ ಹಾನಿಯ ಜೊತೆಗೆ ಸಿಡಿಲು ಬಡಿದು ಆರು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಜರುಗಿದೆ.
ತಾಲೂಕಿನ ರೈತ ನವನಾಥ ಸಿಂಧೆ, ಬಾಬು ಖುರೇಶಿ, ಗುಫ್ರಾನ್ ಮುಜಾವರ, ಧನ್ನೆಪ್ಪಾ ಬಾವಗೆ ಎಂಬುವವರಿಗೆ ಸೇರಿದ 3 ಹಸುಗಳು, 3 ಎತ್ತುಗಳು, 1 ಎಮ್ಮೆ, 1 ಮೇಕೆ ಸಿಡಿಲಿಗೆ ಬಲಿಯಾಗಿವೆ.
ಇದನ್ನೂ ಓದಿ: ವಿಸ್ತಾರ Explainer : ಏನಿದು ಮಹಿಳಾ ಕುಸ್ತಿಪಟುಗಳು, ಕುಸ್ತಿ ಒಕ್ಕೂಟದ ಜಂಗೀ ಕುಸ್ತಿ?
ಮಳೆಯ ಅವಾಂತರದಿಂದಾಗಿ ಮರಗಳು ಧರೆಗೆ ಉಳಿದಿವೆ. ಪಟ್ಟಣ ಸೇರಿ ಗ್ರಾಮಿಣ ಭಾಗದ ವಿವಿಧೆಡೆ ಚರಂಡಿಗಳು ತುಂಬಿ ರಸ್ತೆಯ ಮೇಲೆ ನೀರು ಹರಿದಿವೆ, ಹೊಲಗಳಲ್ಲಿ ನೀರು ನಿಂತಿದೆ.
ಒಂದು ಎಕರೆ ಉಳ್ಳಾಗಡ್ಡಿ ನೀರುಪಾಲು
ಪಟ್ಟಣದ ರೈತ ಶಂಕರ ಬಾಬುರಾವ ಮಾಳದೆ ಅವರ ಹೊಲದಲ್ಲಿ ಮಳೆಯ ರಭಸಕ್ಕೆ ಒಂದು ಎಕರೆಯಲ್ಲಿ ಬೆಳೆದ ಉಳ್ಳಾಗಡ್ಡಿ ನೀರು ಪಾಲಾಗಿದೆ ಎಂದು ತಿಳಿದುಬಂದಿದೆ.