ಹಾವೇರಿ: ಜಿಲ್ಲೆಯಲ್ಲಿ ಮಳೆ ಸಾಕಷ್ಟು ಅವಾಂತರವನ್ನೇ ಸೃಷ್ಟಿಸಿದೆ. ಒಂದೆಡೆ ಬೆಳೆಗಳು ಹಾನಿಯಾಗುತ್ತಿದ್ದರೆ ಮತ್ತೊಂದೆಡೆ ಮೂಲ ಸೌಕರ್ಯಗಳ ಮೂಲವನ್ನೇ ಹುಡುಕುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ (Rain News) ಜನರು ಪರದಾಡುವಂತಾಗಿದ್ದು, ತಾಲೂಕಿನ ಅಕ್ಕೂರು-ಮರಡೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಿತ್ತು ಹೋಗಿದೆ.
ದಿನನಿತ್ಯ ಕೃಷಿ ಕೆಲಸಗಳಿಗೆ ತೆರಳುವ ಮಹಿಳೆಯರು ಮತ್ತು ಮಕ್ಕಳು ಹರಸಾಹಸ ಪಡುವಂತಾಗಿದೆ. ನೀರಿನ ಹರಿವಿನ ರಭಸಕ್ಕೆ ಸಂಪೂರ್ಣ ಶಿಥಿಲಾವಸ್ಥೆಗೆ ಬ್ರಿಡ್ಜ್ ತಲುಪಿದೆ. ಬ್ರಿಡ್ಜ್ ಅಕ್ಕಪಕ್ಕ ಕೂಡ ಯಾವುದೇ ಸುರಕ್ಷತೆ ಇಲ್ಲ. ವಾಹನಗಳು ಸ್ವಲ್ಪ ಯಾಮಾರಿದರೂ ನೀರು ಪಾಲಾಗುವ ಸಾಧ್ಯತೆಗಳಿವೆ. ಈಗ ಸೇತುವೆಯ ಒಂದು ಭಾಗವೇ ಕೊಚ್ಚಿಹೋಗಿರುವುದು ಸಂಪರ್ಕವನ್ನೇ ಕಡಿತ ಮಾಡಿದೆ.
ಇದನ್ನೂ ಓದಿ | ಹಾವೇರಿಯಲ್ಲಿ ಮಳೆಗೆ ಮನೆ ಕಳೆದುಕೊಂಡ ಆರು ಕುಟುಂಬಗಳು
ಬ್ರಿಡ್ಜ್ ಅಂಚುಗಳಲ್ಲಿ ಯಾವುದೇ ತಡೆಗೋಡೆ, ಕಂಬಗಳಾಗಲಿ ಇಲ್ಲ. ಇದು ಅಪಾಯಕ್ಕೆ ಆಹ್ವಾನ ನೀಡುತ್ತಲೇ ಇದ್ದು, ಈಗಾಗಲೇ ಸ್ಥಳೀಯ ಶಾಸಕ ನೆಹರೂ ಓಲೇಕಾರ್ ಸೇರಿದಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ಆರೋಪ ಕೇಳಿಬಂದಿದೆ.
ಇದನ್ನೂ ಓದಿ | Rain News | ತಿ.ನರಸೀಪುರದಲ್ಲಿ ಧಾರಾಕಾರ ಮಳೆ: ಮನೆ ಕುಸಿತ