ಬೆಳಗಾವಿ : ಜಿಲ್ಲೆಯಲ್ಲಿ ಮಳೆ ಆರ್ಭಟಕ್ಕೆ (Rain News) ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಮಳೆ ಅವಾಂತರಕ್ಕೆ ಜಿಲ್ಲೆಯಲ್ಲಿ ಅಂದಾಜು 255 ಕೋಟಿ ರೂ. ನಷ್ಟ ಆಗಿದೆ ಎನ್ನಲಾಗಿದೆ. 1,264 ಕಿ.ಮೀ ರಸ್ತೆ ಹಾನಿ ಆಗಿದ್ದು, 21 ಸೇತುವೆಗಳು ಮಳೆಯಿಂದ ಹಾನಿ ಆಗಿವೆ.
ವರುಣನ ಅಬ್ಬರಕ್ಕೆ 987 ಸರ್ಕಾರಿ ಶಾಲಾ ಕಟ್ಟಡಗಳು, 804 ಅಂಗನವಾಡಿ ಕೇಂದ್ರಗಳು, ಹೆಸ್ಕಾಂನ 1344 ಕಂಬಗಳು ಹಾಗೂ 10 ಕಿ.ಮೀ ಕೇಬಲ್ ಹಾನಿಗೊಳಗಾಗಿವೆ. 18,328 ಎಕರೆ ಕೃಷಿ ಬೆಳೆಗಳು ಮತ್ತು 66 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟ ಆಗಿದೆ.
ಇದನ್ನೂ ಓದಿ | Rain News| ವರುಣನಿಗೆ ಅಲ್ಪ ವಿರಾಮ, ಭಾನುವಾರದವರೆಗೆ ಮಳೆ ಅಬ್ಬರ ಇರಲಿಕ್ಕಿಲ್ಲ
685 ಮನೆಗಳಿಗೆ ಹಾನಿ ಸಂಭವಿಸಿದೆ. ಮನೆ ಹಾನಿಯನ್ನು ಎ, ಬಿ, ಸಿ ವರ್ಗಗಳಾಗಿ ವಿಂಗಡನೆ ಮಾಡಲಾಗಿದೆ. ಎ ಕೆಟಗರಿ ಮನೆ ಹಾನಿಗೆ 5 ಲಕ್ಷ ಪರಿಹಾರ ನೀಡಿದ್ದು, ಬಿ ಕೆಟಗರಿ ಮನೆಗಳನ್ನು ಹೊಸದಾಗಿ ನಿರ್ಮಿಸಿದ್ದರೆ 3 ಲಕ್ಷ ಬದಲಾಗಿ 5 ಲಕ್ಷ ಪರಿಹಾರ ಘೋಷಿಸಿದೆ. ಮನೆ ಹಾನಿ ಆದವರಿಗೆ 1.11 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಎರಡು ಪ್ರಾಣ ಹಾನಿ ಸಂಭವಿಸಿದೆ.
ಇದನ್ನೂ ಓದಿ | Rain News | ರಾಜ್ಯಾದ್ಯಂತ ಇನ್ನೂ 48 ಗಂಟೆ ಭಾರಿ ಮಳೆ; ಕರಾವಳಿ, ಉತ್ತರ ಒಳನಾಡಲ್ಲಿ ಅಬ್ಬರ ಸಾಧ್ಯತೆ!