ಕೊಡಗು : ಕೊಡಗಿನಲ್ಲಿ ವರಣನ ಆರ್ಭಟ (Rain news) ಮತ್ತೆ ಮುಂದುವರಿದಿದ್ದು ತಲಕಾವೇರಿ ಭಾಗಮಂಡಲ ವ್ಯಾಪ್ತಿಯಲ್ಲಿ ಶುಕ್ರವಾರ (ಆ.5) ಭಾರಿ ಮಳೆ ಆಗಿದೆ. ಬ್ರಹ್ಮಗಿರಿ ಬೆಟ್ಟ ತಪ್ಪಲಿನಲ್ಲಿ ಮಳೆ ಆದ ಕಾರಣ ಕಾವೇರಿ ನದಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡಿದೆ.ಈ ಹಿಂದೆ ಭೂಕಂಪನ ಆಗಿದ್ದ ಸ್ಥಳದಲ್ಲಿಯೇ ಜಲಸ್ಫೋಟಗೊಂಡಿದ್ದು ಭೂಮಿಯೊಳಗಿನಿಂದ ನೀರು ಉಕ್ಕಿ ಹರಿಯುತ್ತಿದೆ.
ಕೊಡಗು, ದ.ಕ ಕನ್ನಡ ಗಡಿಭಾಗದಲ್ಲಿ ಭಾರಿ ಮಳೆ ಆಗುತ್ತಿದ್ದು, ಮಡಿಕೇರಿ ತಾಲೂಕಿನ ಸಂಪಾಜೆ ಗ್ರಾಮದ ಕುಂಟಿಕಾನದಲ್ಲಿ ಭಾರಿ ಶಬ್ಧದೊಂದಿಗೆ ಬೆಟ್ಟದ ಮಣ್ಣು ಕುಸಿದಿದೆ. 1 ಕಿ.ಮೀ. ವರೆಗೂ ಧರೆ ಕುಸಿದ್ದಿದ್ದು ಮರಿಕೆ ಮಾದಪ್ಪ ಎಂಬುವರ ತೋಟದಲ್ಲಿ ಜಲಸ್ಫೋಟ ಆಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | ಕುಸಿಯುವ ಹಂತದಲ್ಲಿ ಕೊಡಗು ಜಿಲ್ಲಾಡಳಿತ ಕಚೇರಿಯ ತಡೆಗೋಡೆ; ರಾಷ್ಟ್ರೀಯ ಹೆದ್ದಾರಿ 275 ಬಂದ್
ಮಾದಪ್ಪರಿಗೆ ಸೇರಿದ ರಬ್ಬರ್ ತೋಟ ಕುಸಿದು ಅಪಾರ ಹಾನಿ ಆಗಿದೆ. ಬೆಟ್ಟ ತಪ್ಪಲಿನ 7/8 ಮನೆಗಳು ಅಪಾಯದ ಸ್ಥಿತಿಯಲ್ಲಿ ಇವೆ. ಜಲಸ್ಫೋಟಗೊಂಡ ಸ್ಥಳದಲ್ಲಿ ಭೂಮಿಯೊಳಗಿನಿಂದ ನೀರು ಉಕ್ಕಿ ಹರಿಯುತ್ತಿದೆ.
ನಾಪೋಕ್ಲು ಭಾಗಮಂಡಲ ರಸ್ತೆಯ ಮೇಲೆ ನೀರು ನಿಂತಿದೆ. ಹಾಗೂ ಸಂಪರ್ಕ ಸ್ಥಗಿತಗೊಂಡಿದ್ದು ಮತ್ತಷ್ಟು ಮಳೆ ಹೆಚ್ಚಾದಲ್ಲಿ ಮಡಿಕೇರಿ ಭಾಗಮಂಡಲ ರಸ್ತೆ ಕೂಡ ಬಂದ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ | ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಭಾರಿ ಮಳೆ, ಕಾವೇರಿ ನದಿ ನೀರಿನ ಮಟ್ಟ ಏರಿಕೆ